Daali Dhananjay: ಮದುವೆ ಗಾಸಿಪ್ ಇರುವ ಡಾಲಿ ಧನಂಜಯ್ ಹಾಗೂ ಅಮೃತ ಅಯ್ಯಂಗಾರ್ ನಡುವಿನ ವಯಸ್ಸಿನ ಅಂತರ ಇಲ್ಲಿದೆ
ಕನ್ನಡ ಚಿತ್ರರಂಗಕ್ಕೆ ಕಿರುಚಿತ್ರದ ಮೂಲಕ ಕಾಲಿಟ್ಟಂತಹ ಡಾಲಿ ಧನಂಜಯ್ ಅವರು ಈಗ ಸದ್ಯಕ್ಕೆ ಕನ್ನಡ ಚಿತ್ರರಂಗದ ಅತ್ಯಂತ ಮೌಲ್ಯವನ್ನು ಹೊಂದಿರುವಂತಹ ಯುವ ನಾಯಕ ನಟನಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ನಿಜಕ್ಕೂ ಕೂಡ ಪ್ರತಿಯೊಬ್ಬ ಮಿಡಲ್ ಕ್ಲಾಸ್ ಕುಟುಂಬದ ಹುಡುಗನಿಗೆ ಡಾಲಿ ಧನಂಜಯ್(Daali Dhananjay) ಅವರ ಸಿನಿಮಾಗಳು ಹಾಗೂ ಅವರ ಜೀವನಶೈಲಿ ಮತ್ತು ಡೈಲಾಗ್ ಗಳು ಸ್ಪೂರ್ತಿ ಆಗಿವೆ ಎಂದರು ಕೂಡ ಅತಿಶಯೋಕ್ತಿ ಎನಿಸಲಾರದು.
ಈಗಾಗಲೇ ಕನ್ನಡ ಚಿತ್ರರಂಗದಲ್ಲಿ ನಾಯಕ ನಟನಾಗಿ 25 ಸಿನಿಮಾಗಳನ್ನು ಕಂಪ್ಲೀಟ್ ಮಾಡಿರುವ ಡಾಲಿ ಧನಂಜಯ್ ನಟನೆಯ ಹೊಯ್ಸಳ ಸಿನಿಮಾ ಇತ್ತೀಚಿಗಷ್ಟೇ ಬಿಡುಗಡೆಯಾಗಿತ್ತು. ಪ್ರತಿಯೊಂದು ಸಿನಿಮಾಗಳ ಮೂಲಕ ಕನ್ನಡ ಚಿತ್ರರಂಗದಲ್ಲಿ ಒಂದೊಂದೇ ಹಂತ ಮೇಲೇರುತ್ತಿದ್ದಾರೆ. ಪ್ರತಿಯೊಂದು ವರ್ಗದ ಅಭಿಮಾನಿಗಳು ಕೂಡ ಇಷ್ಟಪಡುವಂತಹ ನಟರಲ್ಲಿ ಡಾಲಿ ಧನಂಜಯ್(Daali Dhananjay) ಕೂಡ ಅಗ್ರಪಂಕ್ತಿಯಲ್ಲಿ ಕಾಣಿಸಿಕೊಳ್ಳುತ್ತಾರೆ.
ಇತ್ತೀಚಿನ ದಿನಗಳಲ್ಲಿ ಡಾಲಿ ಧನಂಜಯ್(Daali Dhananjay) ಹಾಗೂ ಅವರ ಮೂರು ಸಿನಿಮಾಗಳಲ್ಲಿ ಸತತವಾಗಿ ಅವರಿಗೆ ನಾಯಕ ನಟಿಯಾಗಿ ಕಾಣಿಸಿಕೊಂಡಿರುವ ಅಮೃತ ಅಯ್ಯಂಗಾರ್(Amrutha Iyengar) ಅವರ ಕುರಿತಂತೆ ಸುದ್ದಿಗಳು ಸಾಮಾಜಿಕ ಜಾಲತಾಣಗಳಲ್ಲಿ ಹಾಗೂ ಸುದ್ದಿ ಮಾಧ್ಯಮಗಳಲ್ಲಿ ಬಲವಾಗಿ ಕೇಳಿ ಬರುತ್ತಿದ್ದು ಇವರಿಬ್ಬರೂ ಸ್ಯಾಂಡಲ್ವುಡ್ ನಲ್ಲಿ ಸದ್ಯದ ಮಟ್ಟಿಗೆ ಲವ್ ಬರ್ಡ್ಸ್ ಆಗಿ ಕಾಣಿಸಿಕೊಳ್ಳುತ್ತಿದ್ದಾರೆ. ಈ ವಿಚಾರವನ್ನು ಇಬ್ಬರೂ ಕೂಡ ಬಲವಾಗಿಯೇ ವಿರೋಧಿಸಿಕೊಂಡು ಬಂದಿದ್ದರೂ ಕೂಡ ಇವರ ಕುರಿತಂತೆ ಕೇಳಿ ಬರುತ್ತಿರುವ ಹಲವಾರು ಸುದ್ದಿಗಳು ಇವರಿಬ್ಬರ ನಡುವೆ ಪ್ರೀತಿ ಇದೆ ಎನ್ನುವುದಕ್ಕೆ ಪುಷ್ಟಿ ನೀಡುತ್ತಿದೆ.
ಇನ್ನು ಇವರಿಬ್ಬರ ನಡುವಿನ ವಯಸ್ಸಿನ ಅಂತರ ಎಷ್ಟು ಎಂದು ನೋಡುವುದಾದರೆ ಡಾಲಿ ಧನಂಜಯ್(Dhananjay) 1986 ರ ಆಗಸ್ಟ್ 23ರಂದು ಜನಿಸಿದ್ದು ಇವರ ವಯಸ್ಸು 36 ವರ್ಷ ವಯಸ್ಸಾಗಿದೆ. ಇನ್ನು ಲವ್ ಮಾಕ್ಟೇಲ್(Love Mocktail) ಸಿನಿಮಾದ ಮೂಲಕ ಕನ್ನಡ ಚಿತ್ರರಂಗಕ್ಕೆ ನಾಯಕ ನಟಿಯಾಗಿ ಕಾಲಿಟ್ಟಿರುವ ಅಮೃತ ಅಯ್ಯಂಗಾರ್ ಅವರು 1996ರ ಜುಲೈ 26ರಂದು ಜನಿಸಿದ್ದು ಇವರಿಗೆ 26 ವರ್ಷ ವಯಸ್ಸಾಗಿದೆ. ಅಂದರೆ ಇವರಿಬ್ಬರ ನಡುವೆ 10 ವರ್ಷಗಳ ವಯಸ್ಸಿನ ಅಂತರವಿದೆ. ಪ್ರೀತಿ ಎನ್ನುವುದು ಯಾವುದೇ ವಯಸ್ಸಿನ ಅಂತರವನ್ನು ಕೂಡ ಗಣನೆಗೆ ತೆಗೆದುಕೊಳ್ಳುವುದಿಲ್ಲ ಎನ್ನುವುದು ಈಗಾಗಲೇ ಹಲವಾರು ಬಾರಿ ಸಾಬೀತಾಗಿದೆ. ಈ ವಿಚಾರ ಇವರ ನಡುವೆ ಕೂಡ ಆಗಲಿ ಅನ್ನುವುದೇ ಅವರ ಅಭಿಮಾನಿಗಳ ಹಾರೈಕೆ.