Weekend With Ramesh: ವಿಕೇಂಡ್ ವಿತ್ ರಮೇಶ್ ನಲ್ಲಿ ಈ ವಿಷಯವನ್ನು ಮಾತಾಡಲೇ ಇಲ್ಲ ಪ್ರಭುದೇವ
ನಮ್ಮ ಸ್ಯಾಂಡಲ್ ವುಡ್ ನ (Sandalwood) ಹೆಸರಾಂತ ನೃತ್ಯ ನಿರ್ದೇಶಕರಲ್ಲಿ ಮೂಗುರು ಸುಂದರ್ ಮಾಸ್ಟರ್ (Muguru Sunder Master) ಸಹ ಒಬ್ಬರಾಗಿದ್ದು ದಕ್ಷಿಣ ಭಾರತ ಚಿತ್ರರಂಗದ ಪ್ರಸಿದ್ಧ ನೃತ್ಯ ನಿರ್ದೇಶಕರಲ್ಲಿ (Choreographers)
ಇವರು ಸಹ ಪ್ರಮುಖರು ಎನ್ನಬಹುದು. ಇವರ ಪತ್ನಿ ಮಹಾದೇವಮ್ಮ(Mahadevamma) ಹಾಗೂ ಇವರ ಎರಡನೇ ಮಗ ಪ್ರಭುದೇವ (Prabhudeva) ಅವರಾಗಿದ್ದು ಪ್ರಭುದೇವ ಅವರು ಸಹ ತಮ್ಮ ನೃತ್ಯ ಶೈಲಿಯಿಂದ ಭಾರತದ ಮೈಕಲ್ ಜಾಕ್ಸನ್ (Michael Jackson) ಎಂದೇ ಖ್ಯಾತಿ ಪಡೆದಿದ್ದಾರೆ. ಮೂಲತಃ ಮೈಸೂರಿನವರಾದರು (Mysore) ಪ್ರಭುದೇವ ರವರು ಖ್ಯಾತಿ ಪಡೆದದ್ದು ಮಾತ್ರ ತಮಿಳು(Tamil) ಚಿತ್ರರಂಗದಲ್ಲಿ.
ಪ್ರಭುದೇವ ಮೊದಲ ಸಿನಿಮಾ ಯಾವುದು?
ಇನ್ನು ತಂದೆಯಿಂದ ಸ್ಪೂರ್ತಿಯಾಗಿದ್ದ ಪ್ರಭುದೇವ ಚಿಕ್ಕ ವಯಸ್ಸಿನಿಂದಲೇ ನೃತ್ಯಾಭ್ಯಾಸ ಪ್ರಾರಂಭ ಮಾಡಿದ್ದು ಭರತನಾಟ್ಯ (Bharatanatyam) ಸೇರಿದಂತೆ ಬೇರೆ ಬೇರೆ ಬಗೆಯ ಡ್ಯಾನ್ಸ್ ಫಾರ್ಮ್ ಗಳನ್ನು ಕಲಿತರು. ಮೊದಲ ಬಾರಿಗೆ ಪ್ರಭುದೇವ ಅವರು ತೆರೆ ಮೇಲೆ ಕಾಣಿಸಿಕೊಂಡಿದ್ದು 1986 ರಲ್ಲಿ ತೆರೆಕಂಡ ಸೂಪರ್ ಹಿಟ್ ತಮಿಳು ಸಿನಿಮಾ ಮೌನರಾಗಂ (Maunaragam)
ಸಿನಿಮಾದ ಒಂದು ಹಾಡಿನಲ್ಲಿ ಕೊಳಲು ಊದುವ ಪುಟ್ಟ ಹುಡುಗನಾಗಿ ತದ ನಂತರ 1989 ದಲ್ಲಿ 16 ವರ್ಷದವರಿದ್ದಾಗ ಕಮಲ್ ಹಾಸನ್ ಅಭಿನಯದ ವೆಟ್ರಿ ವಿಳಾ ಎಂಬ ಸಿನಿಮಾ ಮೂಲಕ ಸರಿ ಸುಮಾರು100ಕ್ಕೂ ಹೆಚ್ಚು ಸಿನಿಮಾಗಳಿಗೆ ನೃತ್ಯ ನಿರ್ದೇಶನ ಮಾಡಿದ ನಂತರ ನಟನೆ ಶುರು ಮಾಡಿದರು.
ವಿಕೇಂಡ್ ವಿಥ್ ರಮೇಶ್ ನಲ್ಲಿ ಪ್ರಭುದೇವ
ಹೌದು ಜೀ ಕನ್ನಡದಲ್ಲಿ (Zee Kannada) ಪ್ರಸಾರವಾಗುತ್ತಿರುವ ವೀಕೆಂಡ್ ವಿಥ್ ರಮೇಶ್ (Weekend With Ramesh) ಸೀಸನ್ ಐದರ ಎರಡನೇ ಅತಿಥಿಯಾಗಿ ಪ್ರಭುದೇವ ಕಾಣಿಸಿಕೊಂಡಿದ್ದು ತಮ್ಮ ಡಾನ್ಸ್ ಮೂಲಕವೇ ಇಡೀ ದೇಶವೇ ಹುಚ್ಚೆದ್ದು ಕುಣಿಯುವಂತೆ ಮಾಡಿದ ನಟ ನಿರ್ದೇಶಕ ಕೋರಿಯೋಗ್ರಾಫರ್‌ನ ಜೀವನ ವೀಕೆಂಡ್ ಟೆಂಟ್‌ನಲ್ಲಿ ಅನಾವರಣವಾಗಿದೆ. ಇನ್ನು ಶಿವರಾಜ್‌ಕುಮಾರ್ (Shivrajkumar) ಸೇರಿದಂತೆ ಸುದೀಪ್(Sudeep) ಪ್ರಕಾಶ್ ರಾಜ್ (Prakash Raj) ಸೇರಿ ಇನ್ನೂ ಹತ್ತು ಹಲವು ಸಿನಿಮಾ ಸ್ನೇಹಿತರು ಪ್ರಭುದೇವ ಬಗ್ಗೆ ಮಾತನಾಡಿದ್ದು ಹೀಗಿರುವಾಗಲೇ ಪ್ರಕಾಶ್ ರಾಜ್ ರವರು ಆಡಿದಂತಹ ಮಾತುಗಳು ಪ್ರಭುದೇವ ಕಣ್ಣಲ್ಲೂ ನೀರು ತರಿಸಿದೆ.ಹೌದು ಕೊಂಚ ಗದ್ಗದಿತರಾದ ಪ್ರಭುದೇವ ಮಗನ ಕಳೆದುಕೊಂಡ ದಿನದ ಬಗ್ಗೆ ನೆನಪು ಮಾಡಿಕೊಂಡಿದ್ದಾರೆ.
ಕ್ಯಾನ್ಸರ್‌ನಿಂದ 12 ವರ್ಷದ ಮಗ ಇಹಲೋಕ
ನಟ ಪ್ರಕಾಶ್ ರಾಜ್ ರವರು ವೀಕೆಂಡ್ ವಿಥ್ ರಮೇಶ್‌ನಲ್ಲಿ ಪ್ರಭುದೇವ ರವರ ಜೊತೆಗಿನ ಬಾಂಡಿಂಗ್ ಬಗ್ಗೆ ಮಾತನಾಡಿದ್ದು ಜೊತೆಗೆ ಪ್ರಭುದೇವ ರವರ ಬದುಕಿನಲ್ಲಿ ಘಟಿಸಿದ ಕಹಿ ಘಟನೆಯೊಂದನ್ನೂ ಕೂಡ ಹೇಳಿದ್ದಾರೆ. ಇನ್ನು ಪ್ರಭುದೇವ ಅವರ ಮೂರು ಮಕ್ಕಳ ಪೈಕಿ ಹಿರಿಯ ಮಗ 12 ವರ್ಷದ ವಿಶಾಲ್ ರವರು ಬ್ರೇನ್ ಟ್ಯೂಮರ್‌ನಿಂದ 2008ರಲ್ಲಿ ಅಗಲಿದರು. ಆ ಘಟನೆ ನಡೆದ ಸಂದರ್ಭದಲ್ಲಿ ಪ್ರಕಾಶ್ ರಾಜ್ ಸಹ ಇವರ ಜತೆಗಿದ್ದು ಶೋನಲ್ಲಿ ಈ ಬಗ್ಗೆ ಏನಾದರೂ ಹೇಳುವುದು ಇದೆಯೇ ಎಂದು ರಮೇಶ್ ಅರವಿಂದ್ ಪ್ರಭುದೇವ್ ಅವರನ್ನು ಕೇಳುತ್ತಿದ್ದಂತೆ ಮೂಕವಿಸ್ಮಿತರಾಗಿಯೇ ಕಣ್ಣಲಿ ನೀರು ತುಂಬಿಕೊಂಡು ಬೇಡ ಎಂದಿದ್ದಾರೆ.