Karnataka Times
Trending Stories, Viral News, Gossips & Everything in Kannada

Prabhudeva: ಪ್ರಭುದೇವ ಅವರ ಪತ್ನಿಯರ ಬಗ್ಗೆ ನಿಮಗೆಷ್ಟು ಗೊತ್ತು? ಇಲ್ಲಿದೆ ಅಸಲಿ ಸತ್ಯ

ಡ್ಯಾನ್ಸರ್ ಆಗಿ ತಮ್ಮ ಕರಿಯರ್ ಅನ್ನು ಪ್ರಾರಂಭಿಸಿದ ಪ್ರಭುದೇವ(Prabhudeva) ಅವರು ನಂತರ ಡ್ಯಾನ್ಸ್ ಕೋರಿಯೋಗ್ರಾಫರ್ ನಟನಾಗಿ ನಿರ್ದೇಶಕನಾಗಿ ಕೂಡ ಜನರ ಮನಸ್ಸನ್ನು ತಮ್ಮ ಪ್ರತಿಯೊಂದು ಸಿನಿಮಾಗಳ ಮೂಲಕ ಗೆಲ್ಲಲು ಯಶಸ್ವಿಯಾಗುತ್ತಾರೆ. ಕೇವಲ ಕನ್ನಡದಲ್ಲಿ ಮಾತ್ರವಲ್ಲದೆ ತಮಿಳು ತೆಲುಗು ಹಾಗೂ ಬಾಲಿವುಡ್ ಚಿತ್ರರಂಗದಲ್ಲಿ ಕೂಡ ಪ್ರಭುದೇವ ಅವರ ಮಾರ್ಕೆಟ್ ಗೆ ದೊಡ್ಡ ವಾಲ್ಯೂ ಇದೆ. ನೃತ್ಯ ನಿರ್ದೇಶಕನಾಗಿ ಚಿತ್ರರಂಗಕ್ಕೆ ಮೈಕಲ್ ಜಾಕ್ಸನ್ ಕೊರತೆಯನ್ನು ನೀಗಿಸಿದ ಪ್ರಭುದೇವ ನಟನೆಯ ಮೂಲಕವೂ ಕೂಡ ಪರಿಪೂರ್ಣ ನಟನಾಗಿ ಮನೋರಂಜನೆಯನ್ನು ನೀಡಿದ್ದಾರೆ.

Advertisement

ಇನ್ನು ಅವರ ವೈಯಕ್ತಿಕ ಜೀವನವನ್ನು ನೋಡುವುದಾದರೆ ಈಗಾಗಲೇ ಅವರು ಎರಡು ಮದುವೆ ಆಗಿದ್ದಾರೆ. ಮೊದಲಿಗೆ ಪ್ರಭುದೇವ ಅವರು ರಾಮ್ ಲತಾ(Ramaltha) ಅವರನ್ನು 1995ರಲ್ಲಿ ಮದುವೆಯಾಗುತ್ತಾರೆ. ನಂತರ 2011ರಲ್ಲಿ ಪರಸ್ಪರ ಭಿನ್ನಾಭಿಪ್ರಾಯಗಳಿಂದಾಗಿ ಅವರಿಗೆ ವಿವಾಹ ವಿಚ್ಛೇದನವನ್ನು ನೀಡಿ ಒಂಟಿಯಾಗಿ ಬಿಡುತ್ತಾರೆ. ಇಷ್ಟರ ಒಳಗಾಗಲಿ ಅವರಿಗೆ ಮೂರು ಮಕ್ಕಳು ಜನಿಸಿದ್ದು ಅದರಲ್ಲಿ ಒಬ್ಬ ಮಗ ಆರೋಗ್ಯ ಸಮಸ್ಯೆಯಿಂದ ಮರಣಕ್ಕೆ ಈಡಾಗಬೇಕಾಗುತ್ತದೆ.

Advertisement

ಪ್ರಭುದೇವ ಅವರ ಎರಡನೇ ಮದುವೆ 2020ರಲ್ಲಿ ನಡೆಯುತ್ತದೆ. ಇದರ ಕುರಿತಂತೆ ಸಾಕಷ್ಟು ಜನರಿಗೆ ಇಂದಿಗೂ ಕೂಡ ತಿಳಿದಿಲ್ಲ ಎನ್ನುವುದು ಮತ್ತೊಂದು ವಿಶೇಷವಾದ ವಿಚಾರ. ಹಿಮಾನಿ ಸಿಂಗ್ ಎನ್ನುವವರನ್ನು ಪ್ರಭುದೇವ(Prabhudeva Singh) ಎರಡನೇ ಮದುವೆಯಾಗಿದ್ದಾರೆ. ಹಿಮಾನಿಸಿಂಗ್ ಫಿಜಿಯೋಥೆರಪಿಸ್ಟ್ ಆಗಿದ್ದು ಇವರನ್ನು ಲಾಕ್ ಡೌನ್ ಸಂದರ್ಭದಲ್ಲಿ ಪ್ರಭುದೇವ ಮದುವೆ ಆಗಿರುತ್ತಾರೆ. ಪ್ರಭುದೇವ ಅವರ ಮದುವೆ ವಿಚಾರದ ಕುರಿತಂತೆ ಸಾಕಷ್ಟು ಜನರಿಗೆ ತಿಳಿದಿರುವುದಿಲ್ಲ ಈ ಲೇಖನಿಯ ಮೂಲಕ ಅವರ ವೈಯಕ್ತಿಕ ಜೀವನದ ಕುರಿತಂತೆ ತಿಳಿಸುವ ಪ್ರಯತ್ನವನ್ನು ಮಾಡಿದ್ದೇವೆ.

Leave A Reply

Your email address will not be published.