Puneeth Rajkumar: ನಾನು ಡೈರೆಕ್ಷನ್ ಮಾಡೋದಾದ್ರೆ ಆ ನಟಿಗೆ ಮಾತ್ರ ಮಾಡ್ತೀನಿ ಎಂಬುದಾಗಿ ಹೇಳಿದ್ದ ಅಪ್ಪು! ಇವರೇ ನೋಡಿ ಆಕೆ.
ಪವರ್ ಸ್ಟಾರ್ ಪುನೀತ್ ರಾಜಕುಮಾರ್(Power Star Puneeth Rajkumar) ಅವರು ಈಗಾಗಲೇ ನಮ್ಮನೆಲ್ಲ ಆಗಲಿ ಎರಡು ವರ್ಷಗಳೇ ಕಳೆದು ಹೋಗಿದೆ. ನಿಜಕ್ಕೂ ಕೂಡ ಅವರಿಲ್ಲದ ಕನ್ನಡ ಚಿತ್ರರಂಗವನ್ನು ನೆನೆಸಿಕೊಳ್ಳುವುದು ಕೂಡ ಸಾಧ್ಯವಿಲ್ಲ. ಅಷ್ಟರ ಮಟ್ಟಿಗೆ ಅವರನ್ನು ಕಳೆದುಕೊಂಡಿರುವಂತಹ ಆ ಶೂನ್ಯ ಜಾಗ ತುಂಬಲಾಗದಂತೆ ಉಳಿದುಕೊಂಡಿದೆ. ಇನ್ನು ಪವರ್ ಸ್ಟಾರ್ ಪುನೀತ್ ರಾಜಕುಮಾರ್(Puneeth Rajkumar) ಅವರು ಸಿನಿಮಾ ಹಾಗೂ ಸಮಾಜಸೇವೆ ಕ್ಷೇತ್ರದಲ್ಲಿ ಮಾಡಿರುವಂತಹ ಸಾಧನೆಗಳಿಗಾಗಿ ಕರ್ನಾಟಕದ ಅತ್ಯುನ್ನತ ಗೌರವ ಆಗಿರುವಂತಹ ಕರ್ನಾಟಕ ರತ್ನ ಪ್ರಶಸ್ತಿಯನ್ನು ನೀಡಲಾಗಿದೆ.
ಇನ್ನು ನಾಯಕ ನಟನಾಗಿ ಹಾಗೂ ನಿರ್ಮಾಪಕನಾಗಿ ಗಾಯಕನಾಗಿ ನಿರೂಪಕನಾಗಿ ಕೂಡ ಕನ್ನಡ ಚಿತ್ರರಂಗದಲ್ಲಿ ಕಾಣಿಸಿಕೊಂಡಿರುವ ಪವರ್ ಸ್ಟಾರ್ ಪುನೀತ್(Puneeth) ರಾಜಕುಮಾರ್ ನಿರ್ದೇಶಕನಾಗಿ ಕೂಡ ಒಂದು ಸಿನಿಮಾವನ್ನು ಮಾಡಬೇಕು ಎನ್ನುವ ಆಸೆಯನ್ನು ಹೊಂದಿದ್ದರಂತೆ. ಅದು ಕೂಡ ನಿರ್ದೇಶಕನಾಗಿ ಕಾಣಿಸಿಕೊಂಡರೆ ಆ ನಟಿಗೆ ನಾನು ಸಿನಿಮಾವನ್ನು ನಿರ್ದೇಶನವನ್ನು ಮಾಡಬೇಕು ಎಂಬುದಾಗಿ ಕೂಡ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಹೇಳಿಕೊಂಡಿದ್ದರಂತೆ. ಹಾಗಿದ್ದರೆ ಆ ಅದೃಷ್ಟವಂತ ನಟಿ ಯಾರು ಎಂಬುದನ್ನು ತಿಳಿಯೋಣ ಬನ್ನಿ.
ಹೌದು ಅವರು ಮತ್ತು ಇನ್ಯಾರು ಅಲ್ಲ ಕನ್ನಡ ಚಿತ್ರರಂಗದ ಅನಭಿಷಕ್ತ ರಾಣಿ ರಮ್ಯಾ ಅವರು. ಹೌದು ಎಲ್ಲ ಅಂದುಕೊಂಡಂತೆ ಆಗಿದ್ದರೆ ಕನ್ನಡ ಚಿತ್ರರಂಗಕ್ಕೆ ನಾಯಕ ನಟಿಯಾಗಿ ಕೂಡ ರಮ್ಯಾ ಅವರು ಪುನೀತ್ ರಾಜಕುಮಾರ್ ಅವರ ಸಿನಿಮಾದಲ್ಲಿಯೇ ಕಮ್ ಬ್ಯಾಕ್ ಮಾಡಬೇಕಾಗಿತ್ತು. ಹಿಂದೊಮ್ಮೆ ಚಿತ್ರರಂಗದಲ್ಲಿ ನಿರ್ದೇಶನ ಮಾಡುವ ಕನಸನ್ನು ವ್ಯಕ್ತಪಡಿಸಿದಾಗ ರಮ್ಯಾ(Ramya) ಅವರಿಗೆ ನಿರ್ದೇಶನ ಮಾಡಬೇಕು ಎನ್ನುವ ಆಸೆಯನ್ನು ಕೂಡ ಪುನೀತ್ ರಾಜಕುಮಾರ್(Puneeth Rajkumar) ಹಂಚಿಕೊಂಡಿದ್ದರಂತೆ. ಒಂದು ವೇಳೆ ಈ ಅಪ್ಪು ಅವರ ಕನಸು ಈಡೇರಿದ್ದರೆ ಅಪ್ಪು ಅವರನ್ನು ನಾವು ನಿರ್ದೇಶಕನ ಸೀಟಿನಲ್ಲಿ ಕೂಡ ನೋಡಬಹುದಾಗಿತ್ತು ಎನ್ನುವುದಂತೂ ಸತ್ಯ.