Karnataka Times
Trending Stories, Viral News, Gossips & Everything in Kannada

Weekend With Ramesh: ವಿಕೇಂಡ್ ವಿತ್ ರಮೇಶ್ ಗೆ ಡಾ ಬ್ರೋ ಎಂಟ್ರಿ..ಇಲ್ಲಿದೆ ನಟ ರಮೇಶ್ ಹೇಳಿದ ಸಿಹಿಸುದ್ದಿ

Advertisement

ನಮಸ್ಕಾರ ದೇವ್ರು ಅಂತಾನೆ ವಿಡಿಯೋ ಪ್ರಾರಂಭ ಮಾಡಿ ಇಡೀ ದೇಶದ ಹಾಗೂ ಪ್ರಪಂಚದ ಉದ್ದಗಲಕ್ಕೂ ಕೂಡ ಸಂಚರಿಸುತ್ತಿರುವ ಡಾ. ಬ್ರೋ(Dr Bro) ಕನ್ನಡ ಭಾಷೆಯ ಯೂಟ್ಯೂಬ್ ವಲಯದಲ್ಲಿ ಸಾಕಷ್ಟು ದೊಡ್ಡ ಮಟ್ಟದಲ್ಲಿ ಕೇಳಿ ಬರುತ್ತಿರುವಂತಹ ಹೆಸರು. ಈಗಾಗಲೇ ಯೂಟ್ಯೂಬ್ನಲ್ಲಿ 10 ಲಕ್ಷಕ್ಕೂ ಅಧಿಕ ಚಂದದಾರರನ್ನು ಹೊಂದಿರುವ ಡಾಕ್ಟರ್ ಬ್ರೋ ಕರ್ನಾಟಕದಲ್ಲಿ ಯಾವುದೇ ಸೆಲೆಬ್ರಿಟಿಗಳಿಗೂ ಕೂಡ ಕಡಿಮೆ ಇಲ್ಲದಂತೆ ಅಭಿಮಾನಿಗಳನ್ನು ಹೊಂದಿದ್ದಾರೆ.

ಇನ್ನು ಇತ್ತೀಚಿಗಷ್ಟೇ ಡಾ ಬ್ರೋ ರವರನ್ನು ಜೀ ಕನ್ನಡ ವಾಹಿನಿ ಅತ್ಯಂತ ಜನಪ್ರಿಯ ಕಾರ್ಯಕ್ರಮ ಆಗಿರುವ ವೀಕೆಂಡ್ ವಿತ್ ರಮೇಶ್(Weekend With Ramesh) ಕಾರ್ಯಕ್ರಮಕ್ಕೆ ಕರೆತರುವಂತೆ ಕಾರ್ಯಕ್ರಮದ ಹೆಡ್ ಆಗಿರುವ ರಾಘವೇಂದ್ರ ಹುಣಸೂರು ಅವರಿಗೆ ಕೇಳಿದಾಗ ನಿಮ್ಮ ಮನೆಯಲ್ಲಿ ಅಜ್ಜಿ ಹಾಗು ತಾಯಿ ಅವರ ಬಗ್ಗೆ ಗೊತ್ತಾ ಎಂದು ಉತ್ತರವನ್ನು ನೀಡುವ ಮೂಲಕ ಸುದ್ದಿಯಾಗಿದ್ದರು. ನಾವು ಕೇವಲ ಕಿರುತೆರೆಯ ವಾಹಿನಿಯ ಪ್ರೇಕ್ಷಕರಿಗೆ ಕೂಡ ಸಾಕಷ್ಟು ಪ್ರಚಲಿತವಾಗಿರುವಂತಹ ಮುಖಗಳನ್ನು ಸಾಧಕರು ಸೀಟಿನಲ್ಲಿ ಕರೆತರಲು ಪ್ರಯತ್ನಿಸುತ್ತೇವೆ ಎಂಬುದಾಗಿ ಹೇಳಿದ್ದರು.

ಇತ್ತೀಚಿಗಷ್ಟೇ ಸಂದರ್ಶನ ಒಂದರಲ್ಲಿ ನಿರೂಪಕ ರಮೇಶ್ ಅರವಿಂದ್(Ramesh Aravind) ಅವರನ್ನು ಕೂಡ ಈ ಕುರಿತಂತೆ ಕೇಳಿದಾಗ ಅವರು ಕೂಡ ಕಾರ್ಯಕ್ರಮದಲ್ಲಿ ನಾನೊಬ್ಬ ನಿರೂಪಕ ಮಾತ್ರ ಈ ರೀತಿಯ ಎಲ್ಲ ಕೆಲಸಗಳನ್ನು ಡಿಸೈಡ್ ಮಾಡೋದು ನನ್ನ ವಾಹಿನಿಯ ತಂಡ. ಆದರೆ ನನ್ನ ವೈಯಕ್ತಿಕ ಅಭಿಪ್ರಾಯದಲ್ಲಿ ಈ ರೀತಿಯ ಪ್ರತಿಯೊಬ್ಬ ಸಾಧಕರನ್ನು ಕೂಡ ನಾನು ಆ ಸೀಟಿನಲ್ಲಿ ನೋಡಲು ಬಯಸುತ್ತೇನೆ.

ಸ್ವಲ್ಪ ಲೇಟ್ ಆಗಬಹುದು ಆದರೆ ಖಂಡಿತವಾಗಿ ಮುಂದಿನ ದಿನಗಳಲ್ಲಿ ಕೂಡ ಈ ರೀತಿಯ ಸಾಧ್ಯತೆಗಳು ಸಂಭವಿಸದೆ ಇರಲು ಸಾಧ್ಯವಿಲ್ಲ ಎಂಬುದಾಗಿ ಹೇಳುವ ಮೂಲಕ ಮುಂದಿನ ದಿನಗಳಲ್ಲಿ ಡಾ. ಬ್ರೋ ಮುಂದೆ ಬಂದರೂ ಕೂಡ ಬರಬಹುದು ಎನ್ನುವ ಸೂಚನೆಯನ್ನು ರಮೇಶ್ ಅರವಿಂದ್ ರವರು ಪರೋಕ್ಷವಾಗಿ ನೀಡಿದ್ದಾರೆ. ಈ ಮೂಲಕ ಡಾಕ್ಟರ್ ಬ್ರೋ(Dr Bro) ಅವರನ್ನು ಸಾಧಕರ ಸೀಟಿನಲ್ಲಿ ಮುಂದಿನ ಸೀಸನ್ಗಳಲ್ಲಿ ನಾವು ನೋಡಬಹುದಾಗಿದೆ ಎಂದು ಭಾವಿಸಬಹುದು.

Leave A Reply

Your email address will not be published.