Gowthami Gowda: ಭಾಗ್ಯಲಕ್ಷ್ಮಿ ಸಿರಿಯಲ್ ನಿಂದ ಹೊರಬಂದ ನಟಿ ಗೌತಮಿ ಗೌಡ,ಕಾರಣವೇನು?

Advertisement
ಜನರ ಮೆಚ್ಚುಗೆ ಗಳಿಸಿರುವ ಧಾರಾವಾಹಿ ಭಾಗ್ಯಲಕ್ಷ್ಮೀ (Bhagya Lakshmi) ಅಕ್ಕ ತಂಗಿಯ ಜೊತೆಗಿನ ಸಂಬಂಧ ದ ಕಥೆ ಇದರಲ್ಲಿದೆ, ಇದರಲ್ಲಿರುವ ಪಾತ್ರಗಳು ಜನರಿಗೆ ಅಷ್ಟೆ ಹತ್ತಿರವಾಗಿದೆ, ನಟ ಸುದರ್ಶನ್ ರಂಗಪ್ರಸಾದ್, ಶಮಂತ್ ಬ್ರೋ ಗೌಡ, ಸುಷ್ಮಾ ಕೆ ರಾವ್, ಪದ್ಮಜಾ ರಾವ್ ಮುಂತಾದವರು ಅಭಿನಯಿಸುತ್ತಿರುವ ಭಾಗ್ಯಲಕ್ಷ್ಮಿ ಸೀರಿಯಲ್ ಕಥೆ ಜನರನ್ನು ಆಸಕ್ತಿಯಿಂದ ಹಿಡಿದಿಡುವಲ್ಲಿ ಯಶಸ್ವಿಯಾಗಿದೆ ಎನ್ನಬಹುದು.
ಸಿರಿಯಲ್ ನಿಂದ ಹೊರಬಂದ ಗೌತಮಿ:
ಹೌದು ಈ ಸಿರಿಯಲ್ ನಿಂದ ನಟಿ ಗೌತಮಿ (Gowthami) ಹೊರಬಂದಿದ್ದಾರೆ, ಜೀ ಕನ್ನಡದಲ್ಲಿ ಬರುತ್ತಿದ್ದ ಚಿ ಸೌ ಸಾವಿತ್ರಿ ಸೀರಿಯಲ್ ಗೌತಮಿ ಅವರಿಗೆ ಪ್ರಸಿದ್ಧಿ ತಂದುಕೊಟ್ಟಿತ್ತು, ಈ ಸೀರಿಯಲ್ ಬಳಿಕ ತಾಯ್ಯವ್ವ, , ಅಮ್ಮ ನಿನಗಾಗಿ ಸೇರಿದಂತೆ ಹಲವಾರು ಸೀರಿಯಲ್‌ಗಳಲ್ಲಿ ನಟಿಸಿದರು. ಸೀರಿಯಲ್ ಮಾತ್ರ ಅಲ್ಲ, ಸಿನಿಮಾಗಳಲ್ಲೂ ನಟಿಸಿ ಸೈ ಎನಿಸಿಕೊಂಡರು ಒಂದಿಷ್ಟು ಸಿನಿಮಾಗಳಲ್ಲಿ ಪೋಷಕ ಪಾತ್ರದಲ್ಲಿ ಕೂಡ ನಟಿಸಿ ಮೆಚ್ಚುಗೆ ಪಡೆದರು, ತದ ನಂತರ ಭಾಗ್ಯ ಲಕ್ಷ್ಮಿ ಸಿರಿಯಲ್ ನಲ್ಲಿ ನೆಗೆಟಿವ್ ಪಾತ್ರ ಮಾಡಿ ಎಲ್ಲರ ಮೆಚ್ಚುಗೆ ಪಡೆದುಕೊಂಡರು.
ಹೊರಬರಲು ಕಾರಣವೇನು:
ಭಾಗ್ಯಲಕ್ಷ್ಮೀ ಪ್ರಮುಖ ಘಟ್ಟ ತಲುಪಿರುವ ಹೊತ್ತಿನಲ್ಲಿ ನೋಡುಗರಿಗೆ ಬಿಗ್ ಟ್ವಿಸ್ಟ್ (Twist) ಕಾದಿದೆ ಎನ್ನಬಹುದು, ಒಂದೇ ಧಾರಾವಾಹಿಯನ್ನು ಎರಡು ಸೀರಿಯಲ್‌ಗಳಾಗಿ ಮಾಡಲಾಗಿದೆ ,ಆದರೆ ಈ ನಟಿ ಈಗ ಹೊರಬಂದಿದ್ದಾರೆ, ವೈಯಕ್ತಿಕ ಕಾರಣಗಳಿಂದ ಭಾಗ್ಯಲಕ್ಷ್ಮಿ ಸಿರಿಯಲ್ ನಿಂದ ಹೊರ ಬರಬಂದಿದ್ದಾರೆ, ಇಷ್ಟು ದಿನ ನೆಗೆಟಿವ್ ಪಾತ್ರದಲ್ಲಿ ಒಳ್ಳೆಯ ರೀತಿಯಲ್ಲಿ ಮಿಂಚಿದ್ದರು, ವೈಯಕ್ತಿಕ ಕಾರಣಗಳಿಂದ ಭಾಗ್ಯಲಕ್ಷ್ಮಿ ಸಿರಯಲ್ ನಿಂದ ಹೊರ ಬರಬೇಕಾಯಿತು. ಇಷ್ಟು ದಿನ ನೆಗೆಟಿವ್ ಪಾತ್ರದಲ್ಲೂ ನನ್ನ ಒಪ್ಪಿ ಹರಸಿದ ನಿಮ್ಮೆಲ್ಲರಿಗೂ ನನ್ನ ಧನ್ಯವಾದಗಳು ಎಂದು ತಿಳಿಸಿದ್ದಾರೆ.
ನೆಟ್ಟಿಗರ ಕಾಮೆಂಟ್:
ಧಾರಾವಾಹಿಯಲ್ಲಿ ಹಲವು ಪಾತ್ರಗಳು ಜನರ ಗಮನ ಸೆಳೆಯುತ್ತಿವೆ. ಅದರಲ್ಲಿ ನೆಗೆಟಿವ್ ಪಾತ್ರ ಕೂಡ, ಈಗ ಈ ಪಾತ್ರ ದಿಂದ ಹೊರನಡೆಯುತ್ತಿರುವುದನ್ನು ಕಂಡು ಕೆಲವರು ಕಾಮೆಂಟ್ ಮಾಡಿದ್ದಾರೆ, ಚೆನ್ನಾಗಿ ಆಕ್ಟ್ ಮಾಡುತ್ತಿದ್ರಿ? ಏನು ಗುಡ್ ನ್ಯೂಸ್ ಆ ಅಂತ ನೆಟ್ಟಿಗರೊಬ್ಬರು ಕಮೆಂಟ್ ಮಾಡಿದ್ದಾರೆ. ಮತ್ತೆ ಕೆಲವರು ಶುಭಶಾಯ ಎಂದಿದ್ದಾರೆ. ಇನ್ನು ಯಾರು ಈ ಪಾತ್ರ ನಿಭಾಯಿಸುತ್ತಾರೆಂದು ಕಾದು ನೋಡ್ಬೆಕು.