ಚೆಂದನವನದಲ್ಲಿ ರಿಯಲ್ ಸ್ಟಾರ್ ಉಪೇಂದ್ರ (Upendra) ರವರ ಸಾರ್ವಕಾಲಿಕ ದಾಖಲೆ ಸಿನಿಮಾ ಎ (A) ಚಿತ್ರದ ಮೂಲಕ ಸ್ವತಂತ್ರ ಸಂಗೀತ ನಿರ್ದೇಶಕರಾಗಿ (Music Director) ಹೊರಹೊಮ್ಮಿದವರು ಎಂದರೆ ಗುರುಕಿರಣ್ (Gurukiran) ರವರು. ಮೂಲತಃ ಮಂಗಳೂರಿನವರಾದ( Manglore) ಗುರುಕಿರಣ್ ಅವರಿಗೆ ಶಾಲಾ ದಿನಗಳಿಂದಲೂ ಸಹ ಸಂಗೀತದಲ್ಲಿ (Music) ಅಪಾರ ಆಸಕ್ತಿ ಇದ್ದು ಹೀಗಾಗಿ ಬಾಲ್ಯದಿಂದಲೇ ಗುರುಕಿರಣ್ ಶಾಲಾ ಕಾರ್ಯಕ್ರಮಗಳಲ್ಲಿ ಹಾಡುವ (Singing) ಮೂಲಕ ಎಲ್ಲರ ಗಮನ ಸೆಳೆಯುತ್ತಿದ್ದರು. ಹೀಗೆ ಉತ್ತಮ ಗಾಯಕನಾಗುವ ಎಲ್ಲ ಲಕ್ಷಣಗಳನ್ನು ಹೊಂದಿದ ಗುರುಕಿರಣ್ ರವರು ಮಂಗಳೂರಿನಲ್ಲಿ ತಮ್ಮ ಪದವಿ (Degree) ಮುಗಿಸಿದ ನಂತರ ಸಂಗೀತ ಮತ್ತು ಗಾಯನದ ಮೇಲೆ ಹೆಚ್ಚು ಆಸಕ್ತಿಯನ್ನು ತೋರಿದರು.
ಗುರುಕಿರಣ್ ಗೆ ಮೊದಲ ಅವಕಾಶ ಕೊಟ್ಟಿದ್ದು ಯಾರು ಗೊತ್ತಾ?
ಇನ್ನು ತಮ್ಮ ವೃತ್ತಿಜೀವನದ ಪ್ರಾರಂಭದ ದಿನಗಳಲ್ಲಿ ಗುರುಕಿರಣ್ ಅವರು ಮಂಗಳೂರಿನಲ್ಲಿ ಆರ್ಕೆಸ್ಟ್ರಾದಲ್ಲಿ ಕೀಬೋರ್ಡ್ ನುಡಿಸುತ್ತಿದ್ದರು ಮತ್ತು ಹಾಡುಗಳನ್ನು ಹಾಡುತ್ತಿದ್ದರು. ನಂತರ 1994ರಲ್ಲಿ ಖ್ಯಾತ ಸಂಗೀತ ನಿರ್ದೇಶಕರಾಗಿದ್ದ ವಿ ಮನೋಹರ್ (V Manohar) ಅವರ ಬಳಿ ಸಹಾಯಕರಾಗಿ ಕೆಲಸಕ್ಕೆ ಸೇರುತ್ತಾರೆ. ತದ ನಂತರ 1997 ರಲ್ಲಿ ಉಪೇಂದ್ರ ಅವರ ಎ ಸಿನಿಮಾದ ಮೂಲಕ ಸ್ವತಂತ್ರ ನಿರ್ದೇಶಕರಾಗಿ ಹೊರಹೊಮ್ಮುತ್ತಾರೆ. ಅಲ್ಲದೇ ಈ ಚಿತ್ರದಲ್ಲಿನ ಇವರ ಹಾಡುಗಳು ಎಲ್ಲವೂ ಕೂಡ ಸೂಪರ್ ಹಿಟ್ ಆದವು ಈ ಮೂಲಕ ಮೊದಲ ಪ್ರಯತ್ನದಲ್ಲೇ ಗೆದ್ದರೂ ಅಂತನೇ ಹೇಳಬಹುದು.
16 ವರುಷದ ಬಳಿಕ ಮತ್ತೆ ಬಣ್ಣ ಹಚ್ಚಿದ ಗುರುಕಿರಣ್ !
ಹೌದು ಸ್ಯಾಂಡಲ್ ವುಡ್ ನ (Sandalwoodo) ಖ್ಯಾತ ಸಂಗೀತ ನಿರ್ದೇಶಕ ಗಾಯಕ ಗುರುಕಿರಣ್ ಮತ್ತೆ ಬಣ್ಣ ಹಚ್ಚಿದ್ದು ಬರೋಬ್ಬರಿ 16 ವರುಷದ ನಂತರ ಅವರು ತೆರೆಯ ಮೇಲೆ ಕಾಣಿಸಿಕೊಳ್ಳುತ್ತಿದ್ದಾರೆ.ನಟ ಶರಣ್ (Sharan) ನಟನೆಯ ಛೂ ಮಂತರ್ ಸಿನಿಮಾದಲ್ಲಿ ಅವರು ಅತಿಥಿ ಪಾತ್ರ ಮಾಡಿದ್ದು ಅದಕ್ಕೂ ಮುನ್ನ 2007ರಲ್ಲಿ ತೆರೆಕಂಡ ವಿಷ್ಣುವರ್ಧನ್ (Vishnuvardhan) ನಟನೆಯ ಏಕದಂತ ಸಿನಿಮಾದಲ್ಲಿ ಗುರುಕಿರಣ್ ನಟಿಸಿದ್ದರು. ಛೂಮಂತರ್ ಸಿನಿಮಾದ ಬಹುತೇಕ ಕೆಲಸ ಮುಗಿದಿದೆ. ಅಷ್ಟರಲ್ಲಿಯೇ ಗುರು ಕಿರಣ್ ಪಾತ್ರದ ಪೋಸ್ಟರ್ (Poster) ಅನ್ನ ಸಿನಿಮಾ ಟೀಮ್ ರಿಲೀಸ್ ಮಾಡಿದೆ.
ಗುರು ಕಿರಣ್ ಈ ಒಂದು ಚಿತ್ರದಲ್ಲಿ ಸ್ಪೆಷಲ್ ರೋಲ್ ಮಾಡಿದ್ದು ಆ ಸ್ಪೆಷಲ್ ರೋಲ್ ಒಂದಷ್ಟು ಸೀಕ್ರೆಟ್‌ನ್ನ ನಿರ್ದೇಶಕ ನವನೀತ್ (Navneeth) ಬಿಟ್ಟುಕೊಟ್ಟಿದ್ದಾರೆ.ಇನ್ನು ಛೂಮಂತರ್ ಚಿತ್ರದಲ್ಲಿ ಗುರು ಕಿರಣ್ ಸ್ಪೆಷಲ್ ರೋಲ್ ಮಾಡಿದ್ದು ಎಸ್ಟೇಟ್ ಓನರ್ ರೋಲ್‌ನ್ನ ಗುರು ಕಿರಣ್ ಇಲ್ಲಿ ನಿರ್ವಹಿಸಿದ್ದಾರೆ. ಇದು ಚಿತ್ರಕ್ಕೆ ತುಂಬಾ ಮಹತ್ವದ ರೋಲ್ ಆಗಿದೆ ಎಂದು ಚಿತ್ರದ ಡೈರೆಕ್ಟರ್ ನವನೀತ್ ತಿಳಿಸಿದ್ದಾರೆ..