Weekend With Ramesh: ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮಕ್ಕೆ ಈ ಒಬ್ಬ ವ್ಯಕ್ತಿ ಬರಲೇಬೇಕೆಂದು ಹಠ ಮಾಡುತ್ತಿರುವ ಅಭಿಮಾನಿಗಳು

Advertisement
ಈಗಾಗಲೇ ವೀಕೆಂಡ್ ವಿತ್ ರಮೇಶ್(Weekend With Ramesh) ಕಾರ್ಯಕ್ರಮದ ಎರಡು ಎಪಿಸೋಡ್ಗಳು ಯಾವಾಗ ಕಳೆದು ಹೋಯಿತು ಎಂಬುದೇ ತಿಳಿಯದಷ್ಟರ ಮಟ್ಟಿಗೆ ವೇಗವಾಗಿ ಮುಗಿದು ಹೋಗಿದೆ. ಮೊದಲ ಎಪಿಸೋಡ್ ನಲ್ಲಿ ಕನ್ನಡ ಚಿತ್ರರಂಗದ ಖ್ಯಾತ ನಟಿಯಾಗಿದ್ದ ರಮ್ಯಾ(Ramya) ಅವರು ಸಾಧಕರ ಸೀಟಿನಲ್ಲಿ ಕುಳಿತು ತಮ್ಮ ಜೀವನದ ಕಹಾನಿಯನ್ನು ಇಂದಿನ ಯುವ ಪೀಳಿಗೆಗೆ ಅರ್ಥವಾಗುವಂತೆ ಹಂಚಿಕೊಂಡಿದ್ದರು. ಅವರು ಮಾತನಾಡಿದ್ದು ಇಂಗ್ಲಿಷ್ ನಲ್ಲಿ ಹೆಚ್ಚಾಗಿದ್ದು ಎನ್ನುವುದು ಬಿಟ್ಟರೆ, ಉಳಿದೆಲ್ಲ ವಿಚಾರಕ್ಕಾಗಿ ಆ ಎಪಿಸೋಡ್ ಅನ್ನು ಕೂಡ ಜನರು ಇಷ್ಟಪಟ್ಟಿದ್ದರು.
ರಮ್ಯಾ ಅವರ ನಂತರ ಈ ಕಾರ್ಯಕ್ರಮಕ್ಕೆ ಎಂಟ್ರಿ ನೀಡಿದ್ದು ನಮ್ಮೆಲ್ಲರ ನೆಚ್ಚಿನ ಭಾರತದ ಮೈಕಲ್ ಜಾಕ್ಸನ್ ಕರ್ನಾಟಕ ಮೂಲದ ಪ್ರಭುದೇವ(Prabhudeva) ಅವರು. ಕನ್ನಡಕ್ಕಿಂತ ಹೆಚ್ಚಾಗಿ ಬೇರೆ ಭಾಷೆಗಳಲ್ಲಿಯೇ ಕಾಣಿಸಿಕೊಂಡಿದ್ದರು ಕೂಡ ಕನ್ನಡ ಪ್ರೇಮ ಎನ್ನುವುದು ಅವರ ಎದೆಯಾಳದಲ್ಲಿ ಇನ್ನೂ ಕೂಡ ಅದಮ್ಯವಾಗಿದೆ ಎನ್ನುವುದನ್ನು ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮದ ಪ್ರಭುದೇವ ಎಪಿಸೋಡ್ ತೋರಿಸಿಕೊಟ್ಟಿತು.
ಆದರೆ ಇದಾದ ನಂತರ ಈಗ ಮೂರನೇ ಎಪಿಸೋಡಿಗೆ ಜಯದೇವ ಹೃದ್ರೋಗ ವಿಜ್ಞಾನ ಹಾಗೂ ಸಂಶೋಧನಾ ಕೇಂದ್ರದ ನಿರ್ದೇಶಕರಾಗಿರುವ ಡಾಕ್ಟರ್ ಸಿಎನ್ ಮಂಜುನಾಥ್ ರವರನ್ನು ಅತಿಥಿಗಳನ್ನಾಗಿ ಸಾಧಕರ ಸಿಟ್ಟಿಗೆ ಆಹ್ವಾನಿಸಲಾಗಿದೆ. ಇದರ ನಡುವೆ ಸೋಶಿಯಲ್ ಮೀಡಿಯಾದಲ್ಲಿ ನೆಟ್ಟಿಗರು ಮತ್ತೊಬ್ಬ ಸೆಲೆಬ್ರಿಟಿಯನ್ನು ಈ ಸಾಧಕರ ಸಿಟ್ಟಿನ ಮೇಲೆ ಕರೆತರಬೇಕು ಎನ್ನುವ ಒತ್ತಾಯವನ್ನು ಮಾಡಿದ್ದಾರೆ.
ಹೌದು ವಿಜಯ್ ಮಲ್ಯ(Vijay Mallya) ನನ್ನು ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮದ ಸೀಟಿನ ಮೇಲೆ ಕೂರಿಸಬೇಕು ಎನ್ನುವುದೇ ನೆಟ್ಟಿಗರ ಉದ್ದೇಶವಾಗಿದ್ದು ಇದಕ್ಕೆ ಹಾಸ್ಯಾಸ್ಪದವಾಗಿ ಕಾಮೆಂಟ್ ಕೂಡ ಮಾಡಿದ್ದಾರೆ. ಅದಕ್ಕೆ ಅವರು ನೀಡಿರುವಂತಹ ಕಾರಣ ಕೂಡ ವಿಶೇಷವಾಗಿದ್ದು ” 9000 ಕೋಟಿ ರೂಪಾಯಿ ಮೋಸ ಮಾಡಿ ಹೋಗುವುದು ಅಷ್ಟೊಂದು ಸುಲಭದ ಸಾಧನೆ ಅಲ್ಲ ಆತನನ್ನು ಕೂಡ ಸಾಧಕರ ಸಿಟಿನ ಮೇಲೆ ಕೂರಿಸಿ” ಎಂಬುದಾಗಿ ವಾಹಿನಿಯವರಲ್ಲಿ ನೆಟ್ಟಿಗರು ಒಬ್ಬರು ವಿನಂತಿ ಮಾಡಿಕೊಂಡಿದ್ದಾರೆ. ಈ ಕಾಮೆಂಟ್ ಈಗ ಎಲ್ಲಾ ಕಡೆ ಓಡಾಡುತ್ತಿದ್ದು ಸೋಶಿಯಲ್ ಮೀಡಿಯಾದಲ್ಲಿ ಸೆನ್ಸೇಷನ್ ಸೃಷ್ಟಿಸಿದೆ.