Salaar: ಸಲಾರ್ ನಲ್ಲಿ ಯಶ್ ಇರೋದು ಪಕ್ಕಾ..ಇಲ್ಲಿದೆ ಸಿಹಿಸುದ್ದಿ

Advertisement
ರಾಕಿಂಗ್ ಸ್ಟಾರ್ ಯಶ್(Rocking Star Yash) ರವರ ಮುಂದಿನ ಸಿನಿಮಾ ಯಾವುದು ಎನ್ನುವ ಕುರಿತಂತೆ ಸಾಕಷ್ಟು ಚರ್ಚೆಗಳು ಕಳೆದ ಒಂದು ವರ್ಷಗಳಿಂದಲೂ ನಡೆದುಕೊಂಡು ಬರುತ್ತಲೇ ಇದೆ ಇದಕ್ಕೆ ಸಮರ್ಪಕವಾದ ಪ್ರೂಫ್ ನೀಡುವಂತಹ ಯಾವುದೇ ಉತ್ತರಗಳು ಕೂಡ ದೊರಕಿರಲಿಲ್ಲ. ಆದರೆ ಇತ್ತೀಚಿಗಷ್ಟೇ ಲೀಕ್ ಆಗಿರುವಂತಹ ಒಂದು ಫೋಟೋ ಒಂದು ಲೆಕ್ಕದಲ್ಲಿ ಸರಿಯಾದ ಉತ್ತರವನ್ನು ಹೇಳುವತ್ತ ತನ್ನ ರಹಸ್ಯವನ್ನು ಬಿಚ್ಚಿಟ್ಟಿದೆ ಎಂದು ಹೇಳಬಹುದಾಗಿದೆ. ಅಷ್ಟಕ್ಕೂ ಆ ರಹಸ್ಯ ಏನು ಫೋಟೋ ಹೇಳುತ್ತಿರುವಂತಹ ಉತ್ತರವಾದರೂ ಏನು ಎಂಬುದನ್ನು ಸಂಪೂರ್ಣ ವಿವರವಾಗಿ ತಿಳಿದುಕೊಳ್ಳೋಣ.
ಹೌದು ಮಿತ್ರರೇ ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಪ್ರಶಾಂತ್ ನೀಲ್ ಹಾಗೂ ಪ್ರಭಾಸ್(Prabhas) ರವರ ಕಾಂಬಿನೇಷನ್ನಲ್ಲಿ ಹೊಂಬಾಳೆ ಫಿಲಂಸ್ ನಿರ್ಮಾಣದಲ್ಲಿ ಸಲಾರ್(Salaar) ಸಿನಿಮಾದ ಚಿತ್ರೀಕರಣ ಸದ್ಯಕ್ಕೆ ಯುರೋಪ್ನಲ್ಲಿ ನಡೆಯುತ್ತಿದೆ. ಇನ್ನು ಸಾಮಾನ್ಯವಾಗಿ ಯಶ್ ಅಭಿಮಾನಿ ಆಗಿದ್ದರೆ ಖಂಡಿತವಾಗಿ ರಾಕಿಂಗ್ ಸ್ಟಾರ್ ಯಶ್ ರವರು ಕೂಡ ತಮ್ಮ ಪತ್ನಿಯ ಜೊತೆಗೆ ವಿದೇಶಿ ಪ್ರವಾಸದಲ್ಲಿ ಈಗಾಗಲೇ ಹೋಗಿದ್ದಾರೆ ಎಂಬುದು ಹಲವರಿಗೆ ತಿಳಿದಿದೆ.
ಇದೇ ಸಮಯ ಎನ್ನುವಂತೆ ರಾಕಿಂಗ್ ಸ್ಟಾರ್ ಯಶ್, ಪ್ರಭಾಸ್ ಹಾಗೂ ಪ್ರಶಾಂತ್ ನೀಲ್ ಇರುವಂತಹ ಒಂದು ಫೋಟೋ ಕೂಡ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಈ ಫೋಟೋ ಲೀಕ್ ಆಗಿರುವ ಬೆನ್ನಲ್ಲೇ ಮೂವರು ಕೂಡ ಸಲಾರ್ ಸಿನಿಮಾದ ಕೆಲಸದ ವಿಚಾರವಾಗಿ ವಿದೇಶದಲ್ಲಿದ್ದಾರೆ ಎನ್ನುವ ಊಹಾಪೋಹಗಳು ಸಾಮಾಜಿಕದ ಜಾಲ ತಾಣಗಳಲ್ಲಿ ಓಡಲು ಪ್ರಾರಂಭವಾಗಿದೆ.
ಮೂಲಗಳ ಪ್ರಕಾರ ಯಶ್(Yash) ಅವರು ರಾಕಿ ಭಾಯ್ ಆಗಿ ಸಲಾರ್ ಸಿನಿಮಾದ ಕ್ಲೈಮ್ಯಾಕ್ಸ್ ನಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎನ್ನುವ ಸುದ್ದಿಗಳು ಕೂಡ ಹರಿದಾಡುತ್ತವೆ. ಆದರೆ ಈ ಫೋಟೋಗಳನ್ನು ನೋಡಿರುವ ಕೆಲವರು ಇದು ಪ್ರಶಾಂತ್ ನೀಲ್ ಅವರ ಬರ್ತಡೆಯ ಆಚರಣೆ ಸಂದರ್ಭದಲ್ಲಿ ಅಥವಾ ಕೆಜಿಎಫ್ ಚಾಪ್ಟರ್ 2 ಸಿನಿಮಾದ ಯಶಸ್ಸಿನ ಸಂಭ್ರಮಾಚರಣೆಯ ಸಂದರ್ಭದಲ್ಲಿ ತೆಗೆದಿರುವ ಫೋಟೋ ಆಗಿದೆ ಎನ್ನುವ ವಾದವನ್ನು ಕೂಡ ಮಂಡಿಸಿದ್ದಾರೆ. ಈ ಎಲ್ಲಾ ಪ್ರಶ್ನೆಗಳಿಗೂ ಕೂಡ ಕಾಲಾಯ ತಸ್ಮಹೇ ನಮಃ ಎನ್ನುವಂತೆ ಕಾಲವೇ ಉತ್ತರ ನೀಡಲಿ ಎಂಬುದಾಗಿ ಹಾರೈಸೋಣ.