Karnataka Times
Trending Stories, Viral News, Gossips & Everything in Kannada

Sharmila Mandre: ಗಣೇಶ್ ನಟನೆಯ ಕೃಷ್ಣ ಸಿನಿಮಾದಲ್ಲಿ ನಟಿಸುವಾಗ ಆ ಘಟನೆ ನಡೆದಿತ್ತು ಎಂದ ನಟಿ ಶರ್ಮಿಳಾ ಮಾಂಡ್ರೆ!

ನಟಿ ಶರ್ಮಿಳಾ ಮಾಂಡ್ರೆ(Sharmila Mandre) ಅವರು ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಕನ್ನಡ ಚಿತ್ರರಂಗದಲ್ಲಿ ಕಳೆದ 20 ವರ್ಷಗಳಿಂದಲೂ ಕೂಡ ಸಕ್ರಿಯ ರಾಗಿ ನಟಿಸಿಕೊಂಡು ಬಂದಿರುವಂತಹ ನಟಿ. ಬಹುತೇಕ ಕನ್ನಡ ಚಿತ್ರರಂಗದ ದೊಡ್ಡ ದೊಡ್ಡ ಸ್ಟಾರ್ ನಟರ ಜೊತೆಗೂ ಕೂಡ ನಟಿಸಿರುವ ಅನುಭವವನ್ನು ಹೊಂದಿದ್ದು ಮಧ್ಯದಲ್ಲಿ ಸಾಕಷ್ಟು ವಿರಾಮವನ್ನು ಪಡೆದ ನಂತರ ಮತ್ತೆ ಇತ್ತೀಚಿಗಷ್ಟೇ ಗಾಳಿಪಟ 2(Galipata 2) ಸಿನಿಮಾದಲ್ಲಿ ನಾಯಕ ನಟಿಯಾಗಿ ಕಾಣಿಸಿಕೊಂಡಿದ್ದರು.

Advertisement

ಇನ್ನು ಸಜಿನಿ ಸಿನಿಮಾದ ಮೂಲಕ ಕನ್ನಡ ಚಿತ್ರರಂಗಕ್ಕೆ ನಾಯಕ ನಟಿಯಾಗಿ ಕಾಣಿಸಿಕೊಂಡಿದ್ದ ಶರ್ಮಿಳಾ ಅವರಿಗೆ ನಂತರ ಗೋಲ್ಡನ್ ಸ್ಟಾರ್ ಗಣೇಶ್(Golden Star Ganesh) ನಾಯಕ ನಟನಾಗಿ ನಟಿಸಿರುವಂತಹ ಸೂಪರ್ ಹಿಟ್ ಸಿನಿಮಾ ಕೃಷ್ಣದಲ್ಲಿ ನಟಿಸುವಂತಹ ಅವಕಾಶ ಸಿಗುತ್ತದೆ. ಆದರೆ ಅದಕ್ಕಿಂತ ಮುಂಚೆ ಸಜಿನಿ ಸಿನಿಮಾದಲ್ಲಿ ಶರ್ಮಿಳಾ ಮಾಂಡ್ರೆ ಅವರು ವಿದೇಶಿ ನೆಲದಲ್ಲಿ ಬೆಳೆದಿರುವಂತಹ ಕನ್ನಡದ ಹುಡುಗಿಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು ಹೀಗಾಗಿ ಕೃಷ್ಣ ಸಿನಿಮಾದ ಹಳ್ಳಿ ಹುಡುಗಿಯ ಪಾತ್ರದಲ್ಲಿ ಹೇಗೆ ಸೂಟ್ ಆಗುತ್ತಾರೆ ಎನ್ನುವ ಅನುಮಾನವಿದ್ದರೂ ಕೂಡ ಚಿತ್ರದ ನಿರ್ದೇಶಕರು ಅವರ ಕುರಿತಂತೆ ಕಾನ್ಫಿಡೆಂಟ್ ಆಗಿದ್ದರು. ಚಾಲೆಂಜ್ ಆಗಿ ತೆಗೆದುಕೊಂಡ ನಟಿ ಶರ್ಮಿಳಾ ಮಾಂಡ್ರೆ ಈ ಪಾತ್ರದಲ್ಲಿ ನಟಿಸುವ ಮೂಲಕ ಎಲ್ಲರ ಮೆಚ್ಚುಗೆಯನ್ನು ಗಳಿಸುತ್ತಾರೆ.

Advertisement

ಆದರೆ ಕೃಷ್ಣ ಸಿನಿಮಾದ(Krishna Kannada Movie) ಚಿತ್ರೀಕರಣದ ಸಂದರ್ಭದಲ್ಲಿ ಚಿತ್ರದುರ್ಗದಲ್ಲಿ ಚಿತ್ರೀಕರಣ ನಡೆಯುತ್ತಿದ್ದಾಗ ಅವರು ಪಟ್ಟಂತಹ ಪಾಡು ನಿಜಕ್ಕೂ ಕೂಡ ಪ್ರಶಂಸಾರ್ಹವಾದದ್ದು. ಯಾಕೆಂದರೆ 30 ದಿನದ ಚಿತ್ರಿಕರಣದಲ್ಲಿ ಬಿಸಿ ನೀರಿನ ಕೊರತೆ ಹಾಗೂ ವ್ಯಾನಿಟಿ ವ್ಯಾನ್ ಇಲ್ಲದಿದ್ದರೂ ಕೂಡ ದೂರದ ಪ್ರದೇಶಕ್ಕೆ ಹೋಗಿ ಬಟ್ಟೆಯನ್ನು ಬದಲಾಯಿಸಿಕೊಂಡು ಬರಬೇಕಾಗಿರುವಂತಹ ಹಲವಾರು ಕಷ್ಟದ ಪರಿಸ್ಥಿತಿಯನ್ನು ಎದುರಿಸಿದ್ದರು ಕೂಡ ಆ ಸಂದರ್ಭದಲ್ಲಿ ಅವೆಲ್ಲವನ್ನು ಮೀರಿ ಉತ್ತಮವಾದ ನಟನಾ ಪ್ರದರ್ಶನವನ್ನು ತೋರುವ ಮೂಲಕ ಎಲ್ಲರ ನೆಚ್ಚಿನ ನಟಿಯಾಗಿ ಕಾಣಿಸಿಕೊಂಡಿದ್ದರು. ಇದರ ಕುರಿತಂತೆ ಇತ್ತೀಚಿನ ದಿನಗಳಲ್ಲಿ ನಡೆದಿರುವಂತಹ ಸಂದರ್ಶನದಲ್ಲಿ ನಟಿ ಶರ್ಮಿಳ ಮಾಂಡ್ರೆ(Actress Sharmila Mandre) ಹೇಳಿಕೊಂಡಿದ್ದಾರೆ.

Leave A Reply

Your email address will not be published.