ರಾಕಿಂಗ್ ಸ್ಟಾರ್ ಯಶ್(Rocking Star Yash) ರವರು ಮೊಗ್ಗಿನ ಮನಸು ಸಿನಿಮಾದ ಮೂಲಕ ಕನ್ನಡ ಚಿತ್ರರಂಗಕ್ಕೆ ನಾಯಕ ನಟನಾಗಿ ಮೊದಲ ಬಾರಿಗೆ ಕಾಲಿಡುತ್ತಾರೆ. ಅದಕ್ಕೂ ಮುನ್ನವೇ ಕಿರುತೆರೆಯ ಧಾರವಾಹಿಗಳಲ್ಲಿ ಕೂಡ ನಟಿ ರಾಧಿಕಾ ಪಂಡಿತ್ ಅವರ ಜೊತೆ ಜೊತೆಯಾಗಿ ನಟಿಸಿರುತ್ತಾರೆ. ಒಮ್ಮೆ ಕನ್ನಡ ಚಿತ್ರರಂಗದಲ್ಲಿ ನನ್ನ ಕಟೌಟ್ ಅನ್ನು ಗಾಂಧಿನಗರದಲ್ಲಿ ನಿಲ್ಲಿಸಲೇಬೇಕು ಎನ್ನುವ ಕನಸನ್ನು ಕಂಡಿದ್ದು ಅವರು ಇಂದು ಇಡೀ ಭಾರತದ ಯಾವುದೇ ಮೂಲೆಯಲ್ಲಿ ಬೇಕಾದರೂ ತಮ್ಮ ಅಭಿಮಾನಿಗಳ ಮೂಲಕ ಕಟ್ ಔಟ್ ನಿಲ್ಲಿಸುವ ಸಾಮರ್ಥ್ಯವನ್ನು ಹೊಂದಿದ್ದಾರೆ ನಿಜಕ್ಕೂ ಇದು ದೊಡ್ಡ ಮಟ್ಟದ ಸಾಧನೆಯನ್ನಬಹುದಾಗಿದೆ.
ಎಲ್ಲಾ ಕಡೆ ಓಡಾಡುತ್ತಿರುವ ಮತ್ತೊಂದು ಗೊಂದಲದ ವಿಚಾರವೇನೆಂದರೆ ರಾಕಿಂಗ್ ಸ್ಟಾರ್ ಯಶ್ ಅವರ 19ನೇ ಸಿನಿಮಾ ಯಾವುದು ಹಾಗೂ ಅದರ ನಿರ್ಮಾಪಕ ಮತ್ತು ನಿರ್ದೇಶಕರು ಯಾರು ಎಂಬ ವಿಚಾರ. ಸಾಕಷ್ಟು ಊಹಾಪೋಹಗಳು ಕೇಳಿ ಬರುತ್ತಿದ್ದರೂ ಕೂಡ ಯಾವುದು ಕೂಡ ಅಧಿಕೃತ ಎನಿಸುವಂತಹ ಘೋಷಣೆಗಳನ್ನು ಇದುವರೆಗೂ ಕೂಡ ಮಾಡಿಲ್ಲ. ಇನ್ನು ಇದರ ನಡುವೆ ರಾಕಿಂಗ್ ಸ್ಟಾರ್ ಯಶ್(Yash) ಅವರ 20ನೇ ಸಿನಿಮಾದ ಡೀಟೇಲ್ಸ್ ಗಳು ಈಗ ಹೊರಬಂದಿವೆ. ಇದನ್ನು ಬಹಿರಂಗಪಡಿಸಿರೋದು ರಾಕಿಂಗ್ ಸ್ಟಾರ್ ಯಶ್ ಅಲ್ಲ ಬದಲಾಗಿ ಆ ಸಿನಿಮಾದ ನಿರ್ಮಾಪಕರು.
ಹೌದು ಮಿತ್ರರೇ ತೆಲುಗು ಚಿತ್ರರಂಗದ ಖ್ಯಾತ ನಿರ್ಮಾಪಕರಾಗಿರುವ ದಿಲ್ ರಾಜು(Dil Raju) ರವರು ಟ್ವಿಟರ್ ನಲ್ಲಿ ನಡೆಸಿರುವಂತಹ ಪ್ರಶ್ನೋತ್ತರ ಸೆಶನ್ ಸಂದರ್ಭದಲ್ಲಿ ಅವರಿಗೆ ಯಶ್ ಅಭಿಮಾನಿ ಒಬ್ಬರು ನೀವು ಮುಂದಿನ ದಿನಗಳಲ್ಲಿ ಯಶ್(Yash) ಅವರ ಸಿನಿಮಾವನ್ನು ನಿರ್ಮಾಣ ಮಾಡುವುದನ್ನು ನಾವು ನೋಡಬಹುದಾ ಎಂಬುದಾಗಿ ಪ್ರಶ್ನೆಯನ್ನು ಕೇಳಿದ್ದಾರೆ. ಇದಕ್ಕೆ ಖಂಡಿತವಾಗಿ ಎಂಬುದಾಗಿ ಉತ್ತರ ನೀಡುವ ಮೂಲಕ ಯಶ್ ಅವರ 20ನೇ ಸಿನಿಮಾವನ್ನು ಅವರ ನಿರ್ಮಾಣ ಮಾಡುವುದರಲ್ಲಿ ಯಾವುದೇ ಅನುಮಾನ ಇಲ್ಲ ಎನ್ನುವಂತಹ ಸುದ್ದಿಗಳು ಪ್ರಾರಂಭವಾಗುವುದಕ್ಕೆ ನಾಂದಿ ಹಾಡಿದ್ದಾರೆ. ಈ ಬಗ್ಗೆ ನಿಮ್ಮ ಅಭಿಪ್ರಾಯಗಳನ್ನು ನಮ್ಮೊಂದಿಗೆ ತಪ್ಪದೆ ಕಾಮೆಂಟ್ ಮೂಲಕ ಹಂಚಿಕೊಳ್ಳಿ.