Karnataka Times
Trending Stories, Viral News, Gossips & Everything in Kannada

Kiccha Sudeep: ಈ ಕಾರಣಕ್ಕೆ ರಾಜಕೀಯಕ್ಕೆ ಎಂಟ್ರಿ ನೀಡುತ್ತಿದ್ದಾರೆ ಕಿಚ್ಚ ಸುದೀಪ್, ಅಸಲಿ ಸತ್ಯ ಹೊರಕ್ಕೆ.

ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್(Kiccha Sudeep) ರವರು ಕೇವಲ ನಾಯಕ ನಟನಾಗಿ ಮಾತ್ರ ಅಲ್ಲದೆ ಕನ್ನಡ ಚಿತ್ರರಂಗದಲ್ಲಿ ನಿರೂಪಕ, ನಿರ್ಮಾಪಕ, ಗಾಯಕ, ನಿರ್ದೇಶಕನಾಗಿ ಕೂಡ ಕಾಣಿಸಿಕೊಂಡಿದ್ದು ಸಿಸಿಎಲ್ ಮೂಲಕ ಕ್ರಿಕೆಟಿಗನಾಗಿ ಕಾಣಿಸಿಕೊಂಡು ಹಲವಾರು ಜವಾಬ್ದಾರಿಗಳನ್ನು ಸಮರ್ಪಕವಾಗಿ ನಿರ್ವಹಿಸಬಲ್ಲಂತಹ ಪರಿಪೂರ್ಣ ವ್ಯಕ್ತಿತ್ವ ಅವರಲ್ಲಿದೆ ಎಂಬುದನ್ನು ಸಾಬೀತುಪಡಿಸಿದ್ದರು. ಅದೇ ರೀತಿ ಈಗ ಮತ್ತೊಂದು ಜವಾಬ್ದಾರಿಯನ್ನು ಹೊರಲು ಕೂಡ ಕಿಚ್ಚ ಸುದೀಪ್ ಸಿದ್ದನಾಗಿ ನಿಂತಿದ್ದಾರೆ ಎಂಬ ಸುದ್ದಿಗಳು ಅಧಿಕೃತವಾಗಿ ಓಡಾಡುತ್ತಿವೆ. ಹೌದು ಮಿತ್ರರೇ ಅಭಿಮಾನಿಗಳ ಆಕ್ರೋಶದ ನಡುವೆ ಕೂಡ ಕಿಚ್ಚ ರಾಜಕೀಯವನ್ನು ಸೇರಲಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ.

Advertisement

ಸಿನಿಮಾ ರಂಗದಲ್ಲಿ ತಮ್ಮ ವಿಭಿನ್ನ ನಟನೆಯ ಮೂಲಕ ದೊಡ್ಡ ಮಟ್ಟದ ಅಭಿಮಾನಿ ಬಳಗವನ್ನು ಕಿಚ್ಚ ಸುದೀಪ್ ಹೊಂದಿದ್ದರು. ಆದರೆ ಈಗ ಇಂದು ಮಧ್ಯಾಹ್ನ ಬಿಜೆಪಿ(BJP) ಪಕ್ಷವನ್ನು ಬಸವರಾಜ ಬೊಮ್ಮಾಯಿ ಅವರ ಸಮ್ಮುಖದಲ್ಲಿ ಕಿಚ್ಚ ಸುದೀಪ್ ರವರು ಸೇರಲಿದ್ದಾರೆ ಎನ್ನುವ ಬಲವಾದ ಸುದ್ದಿಗಳು ಓಡಾಡುತ್ತಿವೆ. ಮೂಲೆಗಳ ಪ್ರಕಾರ ಕಿಚ್ಚ ಸುದೀಪ್ ರವರು ಈ ಬಾರಿ ಎಲೆಕ್ಷನ್ ಅನ್ನು ಎದುರಿಸುವುದಿಲ್ಲ ಬದಲಾಗಿ 2028ರ ವಿಧಾನಸಭೆ ಚುನಾವಣೆಯನ್ನು ಎದುರಿಸಲಿದ್ದಾರೆ ಎಂಬುದಾಗಿ ವಿನಂತಿಯನ್ನು ಮಾಡಿದ್ದು ಬಿಜೆಪಿ ನಾಯಕರು ಕಿಚ್ಚ ಸುದೀಪ್ ಅವರನ್ನು ಇದೆ ಎಲೆಕ್ಷನ್ನಿಗೆ ಇಳಿಸಬೇಕು ಎನ್ನುವ ಪ್ರಯತ್ನವನ್ನು ಕೂಡ ಮಾಡಿದ್ದರಂತೆ. ಇನ್ನು ಬಿಜೆಪಿ ಪಕ್ಷದ ಪರವಾಗಿ ಕಿಚ್ಚ ಸುದೀಪ್ ಪ್ರಚಾರ ಮಾಡಲು ಮತ್ತೊಂದು ಕಾರಣ ಏನೆಂದರೆ ಅವರ ಆತ್ಮೀಯ ಗೆಳೆಯ ಹಾಗೂ ಮ್ಯಾನೇಜರ್ ಆಗಿರುವಂತಹ ಜಾಕ್ ಮಂಜುನಾಥ್ ಗೌಡ(Jack Manjunath Gowda) ಎಂಬುದಾಗಿ ತಿಳಿದು ಬಂದಿದೆ.

Advertisement

ಮಂಜುನಾಥ್ ಗೌಡ ಅವರಿಗೆ ರಾಜಕೀಯವಾಗಿ ಬಿಜೆಪಿ ಪಕ್ಷದಿಂದ ಟಿಕೆಟ್ ಸಿಗಲಿ ಎನ್ನುವ ಕಾರಣಕ್ಕಾಗಿ ಕಿಚ್ಚ ಸುದೀಪ್ ರವರು ಮನವಿ ಮಾಡಿದ್ದು ಒಂದು ವೇಳೆ ಚಿಕ್ಕಪೇಟೆ ಕ್ಷೇತ್ರದಿಂದ ಗರುಡಾಚಾರ್ ಅವರಿಗೆ ಟಿಕೆಟ್ ಅನ್ನು ನೀಡದಿದ್ದರೆ ತಮ್ಮ ಸ್ನೇಹಿತ ಆಗಿರುವ ಜಾಕ್ ಮಂಜುನಾಥ್ ಗೌಡ ಅವರಿಗೆ ಅವಕಾಶವನ್ನು ನೀಡಿ ಎಂಬುದಾಗಿ ಕೂಡ ಕೋರಿಕೊಂಡಿದ್ದಾರಂತೆ. ಈ ಸಂದರ್ಭದಲ್ಲಿ ತಮ್ಮ ಗೆಳೆಯನ ಪರವಾಗಿ ಪ್ರಚಾರ ಮಾಡುವುದಕ್ಕೆ ಕೂಡ ಕಿಚ್ಚ ಸುದೀಪ್(Kiccha Sudeep) ಸಂಪೂರ್ಣವಾಗಿ ಸಿದ್ದರಾಗಿದ್ದಾರಂತೆ.

Leave A Reply

Your email address will not be published.