Karnataka Times
Trending Stories, Viral News, Gossips & Everything in Kannada

Akarsh Vajramuni: ವಜ್ರಮುನಿಯ ಹಾಗೆ 3 ನಿಮಿಷ ನಾನ್ ಸ್ಟಾಪ್ ಡೈಲಾಗ್ ಹೊಡೆದ ಮೊಮ್ಮಗ ಆಕರ್ಶ್! ವಿಡಿಯೋ ಇಲ್ಲಿದೆ.

ಒಂದು ಕಾಲದಲ್ಲಿ ಕನ್ನಡ ಚಿತ್ರರಂಗದಲ್ಲಿ ನಾಯಕ ನಟರದ್ದೆ ಹಾವಳಿ ಇದ್ದ ಸಂದರ್ಭದಲ್ಲಿ ಖಳನಾಯಕನು ಕೂಡ ನಾಯಕನಿಗಿಂತಲೂ ಹೆಚ್ಚಿನ ಜನಪ್ರಿಯತೆ ಹಾಗೂ ಅಭಿಮಾನಿ ಬಳಗವನ್ನು ಹೊಂದಬಹುದು ಎನ್ನುವುದನ್ನು ತೋರಿಸಿಕೊಟ್ಟವರು ವಜ್ರಮುನಿ. ವಜ್ರಮುನಿ (Vajramuni) ಅಂತಹ ಮತ್ತೊಬ್ಬ ಖಳನಾಯಕ ಕನ್ನಡ ಚಿತ್ರರಂಗಕ್ಕೆ ಸಿಗೋದು ಅನುಮಾನವೇ ಸರಿ ಎಂದು ಹೇಳಬಹುದಾಗಿದೆ ಅಷ್ಟರಮಟ್ಟಿಗೆ ಅವರ ಪ್ರಭಾವ ಕನ್ನಡ ಚಿತ್ರರಂಗದಲ್ಲಿದೆ. ಅದಕ್ಕಾಗಿ ಅವರನ್ನು ನಟಭಯಂಕರ ನಟ ರಾಕ್ಷಸ ಎನ್ನುವುದಾಗಿ ಅಂದಿನ ಕಾಲದಲ್ಲಿ ಚಿತ್ರರಂಗದಲ್ಲಿ ಕಾಯುತ್ತಿದ್ದರು.

Advertisement

ಇನ್ನು ಅವರು ಸಂಪತ್ತಿಗೆ ಸವಾಲ್ ಸಿನಿಮಾದಲ್ಲಿ ನಟಿಸಿದ್ದ ಸಾಹುಕಾರ ಸಿದ್ದಪ್ಪ ಪಾತ್ರದ ಎಲ್ಲಾ ಕುನ್ನಿ ಎನ್ನುವ ಡೈಲಾಗ್ ಇಂದಿಗೂ ಕೂಡ ದೊಡ್ಡ ಮಟ್ಟದ ಫ್ಯಾನ್ ಬೇಸ್ ಅನ್ನು ಹೊಂದಿದೆ. ಇದೇ ಡೈಲಾಗ್ ಅನ್ನು ಇಟ್ಟುಕೊಂಡು ಈಗ ಕೋಮಲ್ ಅವರು ನಾಯಕನಟನಾಗಿ ಇದೇ ಸಿನಿಮಾದ ಟೈಟಲ್ ನಲ್ಲಿ ಮತ್ತೆ ಕಮ್ ಬ್ಯಾಕ್ ಮಾಡುತ್ತಿದ್ದಾರೆ. ಸಾಕಷ್ಟು ಸಮಯಗಳಿಂದ ಚಿತ್ರರಂಗದಿಂದ ದೂರ ಇದ್ದ ಕಾಮಿಡಿ ಹೀರೋ ಆಗಿರುವಂತಹ ಕೋಮಲ್ ಕುಮಾರ್ (Komal Kumar) ಮತ್ತೆ ಈ ಸಿನಿಮಾದ ಮೂಲಕ ಕಂಬ್ಯಾಕ್ ಮಾಡುತ್ತಿರುವುದು ಅವರ ಅಭಿಮಾನಿಗಳಲ್ಲಿ ಸಾಕಷ್ಟು ಸಂತೋಷವನ್ನು ಮೂಡಿಸಿದೆ.

Advertisement

ಇನ್ನು ಈ ಸಿನಿಮಾದಲ್ಲಿ ಕೋಮಲ್ ಅವರ ಮಗನ ಪಾತ್ರದಲ್ಲಿ ವಜ್ರಮುನಿ ಅವರ ಮೊಮ್ಮಗ ಆಗಿರುವಂತಹ ಆಕರ್ಷ್ (Akarsh Vajramuni) ನಟನೆ ಮಾಡುತ್ತಿದ್ದಾರೆ. ತನ್ನ ತಾತನ ಹಾಗೆ ಅತ್ಯಂತ ಚಿಕ್ಕ ವಯಸ್ಸಿನಲ್ಲಿ ನಟನಾಗಿ ಮೊಳಕೆ ಹೊಡೆಯುವಂತಹ ಕನಸು ಆಕರ್ಷ್ ಅವರ ಮನಸ್ಸಿನಲ್ಲಿದೆ. ಕೇವಲ ಎಷ್ಟು ಮಾತ್ರವಲ್ಲದೆ ಸಿನಿಮಾದ ಮುಹೂರ್ತ ಕಾರ್ಯಕ್ರಮದ ಸಂದರ್ಭದಲ್ಲಿ ಕೂಡ ನಿರರ್ಗಳವಾಗಿ ತನ್ನ ತಾತನ ಡೈಲಾಗ್ ಅನ್ನು ಹೇಳುವ ಮೂಲಕ ಪ್ರತಿಯೊಬ್ಬರೂ ಕೂಡ ಮೂಕ ವಿಸ್ಮಿತರಾಗುವಂತೆ ಮಾಡಿದ್ದಾರೆ ಆಕರ್ಷ್(Akarsh Vajramuni). ಖಂಡಿತವಾಗಿ ವಜ್ರಮುನಿ ಅವರ ಲೆಗಸ್ಸಿಯನ್ನು ಮುಂದುವರಿಸಿಕೊಂಡು ಹೋಗಬಲ್ಲಂತಹ ಸಾಮರ್ಥ್ಯ ಈ ಚಿಕ್ಕ ಪ್ರತಿಭೆಯಲ್ಲಿದೆ ಎನ್ನುವುದನ್ನು ಯಾವುದೇ ಅನುಮಾನವಿಲ್ಲದೆ ಹೇಳಬಹುದು.

Advertisement

Leave A Reply

Your email address will not be published.