Kiccha Sudeep: ಬಿಜೆಪಿ ಪ್ರಚಾರಕ್ಕೆ ಹೊರಟ 24 ಗಂಟೆಯಲ್ಲೇ ಕಿಚ್ಚನಿಗೆ ದೊಡ್ಡ ಆಘಾತ, ಇಲ್ಲಿದೆ ವರದಿ
ನೆನ್ನೆಯಿಂದ ಕೂಡ ಕನ್ನಡ ಚಿತ್ರರಂಗದ (Kannada Film Industry) ಖ್ಯಾತ ನಟ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ (Kiccha Sudeep) ಅವರು ಬಿಜೆಪಿಗೆ (BJP) ಸೇರುತ್ತಾರೆ ಎಂದು ಹೇಳಲಾಗಿತ್ತು. ಹೌದು ನಟ ಸುದೀಪ್ ಬಿಜೆಪಿ ಸೇರುವ ಬಗ್ಗೆ ಬುಧವಾರ ಬಿಜೆಪಿ ಚುನಾವಣಾ ಪ್ರಚಾರ ಸಮಿತಿ ಸುದ್ದಿಗೋಷ್ಠಿ ನಡೆಸಲಿದೆ ಎಂದು ವರದಿಯಾಗಿತ್ತು. ಮುಖ್ಯಮಂತ್ರಿಗಳಾದ ಬಸವರಾಜ ಬೊಮ್ಮಾಯಿ (Basavaraj Bommai) ನೇತೃತ್ವದಲ್ಲಿ ನಟ ಕಿಚ್ಚ ಸುದೀಪ್ ಬಿಜೆಪಿಗೆ ಸೇರಲಿದ್ದು ಬಿಜೆಪಿ ಪರ ಪ್ರಚಾರದ ಸ್ಟಾರ್ ಕ್ಯಾಂಪೇನ್ ಸಹ ಆಗಲಿದ್ದಾರೆ ಕಿಚ್ಚ ಸುದೀಪ್. ಇನ್ನು ಸುದೀಪ್ ಅವರನ್ನ ಬಿಜೆಪಿಗೆ ಕರೆ ತರಲು ಎರಡು ತಿಂಗಳಿಂದ ಪ್ರಯತ್ನ ನಡೆಯುತ್ತಿದ್ದು ಸಿಎಂ ನೇತೃತ್ವದಲ್ಲೇ ಮಾತುಕತೆ ಆಗಿದೆ. ಒಳ್ಳೆಯ ಫಲಿತಾಂಶದ ನಿರೀಕ್ಷೆ ಪಕ್ಷಕ್ಕಿದೆ. ಈ ಕಾರಣದಿಂದಾಗಿ ಸುದೀಪ್ ಬಿಜೆಪಿ ಸೇರ್ಪಡೆ ಬಗ್ಗೆ ಬಿಜೆಪಿ ಮೂಲಗಳ ಮಾಹಿತಿ ಲಭ್ಯವಾಗಿತ್ತು.
ಬೇಸರಗೊಂಡ ಅಭಿಮಾನಿಗಳು:
ಇನ್ನು ಸುದ್ದಿ ವೈರಲ್ ಆಗುತ್ತಿದ್ದಂತೆ ಪ್ರತಿಕ್ರಿಯಿಸಿರುವ ಕಿಚ್ಚನ ಅಭಿಮಾನಿಗಳು (Sudeep Fans) ಮತ್ತು ಸಿನಿ ರಸಿಕರು ದಯವಿಟ್ಟು ರಾಜಕೀಯಕ್ಕೆ (Politics) ಬರಬೇಡಿ ಎಂದು ಸಾಮಾಜಿಕ ಜಾಲತಾಣದಲ್ಲಿ (Social Media) ಮನವಿ ಮಾಡಿದ್ದಾರೆ ಮತ್ತು ಸಲಹೆ ನೀಡಿದ್ದಾರೆ. ಹೌದು ಎರಡು ನಾಲಿಗೆ ಇರೋ ರಾಜಕಾರಣಿಗಳನ್ನ ನಂಬಿ ರಾಜಕೀಯಕ್ಕೂ ರಾಜಕೀಯ ಪಕ್ಷದ ಪ್ರಚಾರಕ್ಕೋ ಹೋಗೋದಕ್ಕಿಂತ ಸದಾ ನಿಮ್ಮ ಶ್ರೇಯೋಭಿಲಾಷಿಗಳಾಗಿ ಇರುವ ಅಭಿಮಾನಿಗಳಿಗಾಗಿ ಕೆಲಸ ಮಾಡಿ. ನಮಗೆ ಕಿಚ್ಚ ರಾಜಕೀಯಕ್ಕೆ ಬರುವುದು ಬೇಡ. ಎಂದು ಟೀಮ್ ಕಿಚ್ಚ ಸುದೀಪ್ ಟ್ವಿಟರ್ ಖಾತೆಯಲ್ಲಿ ಬರೆದುಕೊಂಡಿದೆ. ಇನ್ನು ಮತ್ತೊಂದು ಕಿಚ್ಚ ಸುದೀಪ್ ಅಭಿಮಾನಿ ಬಳಗ ಕೂಡ ಈ ಕುರಿತು ಟ್ವೀಟ್ ಮಾಡಿದ್ದು ನೀವು ಎಷ್ಟೇ ಫ್ಲಾಪ್ ಚಿತ್ರಗಳನ್ನು ಕೊಟ್ಟರೂ ಕೂಡ ಪರವಾಗಿಲ್ಲ ಆದರೆ ರಾಜಕೀಯಕ್ಕೆ ಮಾತ್ರ ಹೋಗಬೇಡಿ ಎಂದು ಬರೆದುಕೊಂಡಿದ್ದಾರೆ.
ಕಿಚ್ಚನ ಪ್ರತಿಕ್ರಿಯೆ ಏನು?
ನಟ ಕಿಚ್ಚ ಸುದೀಪ್ ರವರು ರಾಜಕೀಯ ಎಂಟ್ರಿ ಬಗ್ಗೆ ಮೊದಲ ಪ್ರತಿಕ್ರಿಯೆಯನ್ನ ಇದೀಗ ನೀಡಿದ್ದು ನಾನು ಚುನಾವಣೆಯಲ್ಲಿ ಸ್ಪರ್ಧಿಸುತ್ತಿಲ್ಲ ಎಂದು ಸುದೀಪ್ ಹೇಳಿದ್ದಾರೆ. ಹೌದು ಜೆಪಿ ನಗರದ ತಮ್ಮ ನಿವಾಸದ ಬಳಿ ರಾಜಕೀಯ ಪ್ರವೇಶದ ಬಗ್ಗೆ ಪ್ರತಿಕ್ರಿಯೆ ನೀಡಿದ ಸುದೀಪ್ ರವರು ಯಾವ ಪಕ್ಷದಿಂದಲೂ ಕೂಡ ನಾನು ಚುನಾವಣೆಗೆ ಸ್ಪರ್ಧೆ ಮಾಡುತ್ತಿಲ್ಲ. ನನ್ನ ಸ್ನೇಹಿತರಿಗೆ ನಾನು ಬೆಂಬಲವಾಗಿ ನಿಲ್ಲುತ್ತೇನೆ ಎಂದಿದ್ದು ಚುನಾವಣೆ ರಾಜಕಾರಣ ನನಗೆ ಇಷ್ಟವಿಲ್ಲ. ನಾನು ಯಾರ ಪರವಾಗಿಯೂ ಕೂಡ ಚುನಾವಣೆಯಲ್ಲಿ ಟಿಕೆಟ್ ಕೇಳಿಲ್ಲ. ಕೆಲವು ಸ್ನೇಹಿತರು ಆತ್ಮೀಯರ ಪರವಾಗಿ ಪ್ರಚಾರ ಮಾಡಲಿದ್ದೇನೆ ಎಂದು ಸುದೀಪ್ ರವರು ತಿಳಿಸಿದ್ದಾರೆ. ಈ ಮೂಲಕ ಕಿಚ್ಚ ತನ್ನ ರಾಜಕೀಯ ನಡೆಯ ಬಗ್ಗೆ ಸ್ಪಷ್ಟನೆ ನೀಡಿದ್ದು ಈ ಕುರಿತಾಗಿ ಹೆಚ್ಚಿನ ಮಾಹಿತಿಯನ್ನು ಸುದ್ದಿಗೋಷ್ಠಿಯಲ್ಲಿ ಎಲ್ಲಾ ಸ್ಪಷ್ಟನೆ ನೀಡುತ್ತೇನೆ ಎಂದಿದ್ದಾರೆ ಸುದೀಪ್.