Radhika Kumaraswamy: ರಾಧಿಕಾ ಕುಮಾರಸ್ವಾಮಿ ಹಾಗೂ ಅವರ ಮಗಳಿಗೆ ನೆಚ್ಚಿನ ಕನ್ನಡದ ನಟ ಯಾರು ಗೊತ್ತಾ?
ನಟಿ ರಾಧಿಕಾ ಕುಮಾರಸ್ವಾಮಿ(Radhika Kumarswamy) ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಅತ್ಯಂತ ಚಿಕ್ಕ ವಯಸ್ಸಿನಲ್ಲಿ ಕನ್ನಡ ಚಿತ್ರರಂಗಕ್ಕೆ ನಾಯಕ ನಟಿಯಾಗಿ ಕಾಣಿಸಿಕೊಂಡು ಅತ್ಯಂತ ವೇಗವಾಗಿ ನಾಯಕ ನಟಿಯಾಗಿ ಬೆಳೆದಂಥ ನಟಿ. ಅದಾದ ನಂತರ ಯಾರಿಗೂ ತಿಳಿಯದೆ ಒಂದೇ ಸಮನೆ ಕನ್ನಡ ಚಿತ್ರರಂಗದಿಂದ ಕಣ್ಮರೆಯಾಗುತ್ತಾರೆ. ನಂತರ ಅವರು ಎಲ್ಲರೂ ಎದುರಿಗೆ ಬಂದಿದ್ದೆ ಮಾಜಿ ಮುಖ್ಯಮಂತ್ರಿ ಆಗಿರುವಂತಹ ಹೆಚ್ ಡಿ ಕುಮಾರಸ್ವಾಮಿ(HD Kumaraswamy) ಅವರ ಪತ್ನಿಯಾಗಿ. ಇದರ ಕುರಿತಂತೆ ಸಾಕಷ್ಟು ಪರವಿರೋಧ ಚರ್ಚೆಗಳು ಆ ಕಾಲದಲ್ಲಿ ನಡೆದಿದ್ದರೂ ಕೂಡ ಈಗ ಅದು ಸಂಪೂರ್ಣವಾಗಿ ಶಾಂತವಾಗಿದೆ.
ಇನ್ನು ಶಮಿಕ(Shamika) ಎನ್ನುವ ಹೆಣ್ಣು ಮಗಳನ್ನು ಕೂಡ ಹೊಂದಿರುವ ರಾಧಿಕಾ ಕುಮಾರಸ್ವಾಮಿ ಮತ್ತೆ ಕನ್ನಡ ಚಿತ್ರರಂಗಕ್ಕೆ ರಾಕಿಂಗ್ ಸ್ಟಾರ್ ಯಶ್(Yash) ಹಾಗೂ ರಮ್ಯಾ(Ramya) ನಟನೆಯ ಲಕ್ಕಿ ಸಿನಿಮಾದ ಮೂಲಕ ಮೊದಲ ಬಾರಿಗೆ ನಿರ್ಮಾಪಕಿಯಾಗಿ ಕಂಬ್ಯಾಕ್ ಮಾಡುತ್ತಾರೆ. ಅದಾದ ನಂತರ ಹಲವಾರು ಮಹಿಳಾ ಪ್ರಾಧಾನ್ಯತೆ ಹೊಂದಿರುವಂತಹ ಸಿನಿಮಾಗಳಲ್ಲಿ ಕೂಡ ನಾಯಕಿಯಾಗಿ ಕೂಡ ಕಾಣಿಸಿಕೊಂಡಿದ್ದಾರೆ. ನಿರ್ಮಾಪಕಿ ಹಾಗೂ Solo ಫೀಮೇಲ್ ಸ್ಟಾರ್ ಆಗಿ ಕೂಡ ಇತ್ತೀಚಿನ ದಿನಗಳಲ್ಲಿ ಅವರು ತಮ್ಮ ಸಿನಿಮಾಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಎಲ್ಲಕ್ಕಿಂತ ಪ್ರಮುಖವಾಗಿ ಇತ್ತೀಚಿಗಷ್ಟೇ ನಡೆದಿರುವ ಸಂದರ್ಶನದಲ್ಲಿ ಅವರು ನೀಡಿರುವಂತಹ ಒಂದು ಉತ್ತರ ಸಾಕಷ್ಟು ಸೆನ್ಸೇಶನ್ ಕ್ರಿಯೇಟ್ ಮಾಡಿದೆ. ಹೌದು ಅವರು ತಮ್ಮ ಹಾಗೂ ತಮ್ಮ ಮಗಳಾಗಿರುವ ಶಮಿಕ ಅವರ ನೆಚ್ಚಿನ ಕನ್ನಡದ ನಟ ಯಾರು ಎಂಬುದನ್ನು ಬಹಿರಂಗಪಡಿಸಿದ್ದಾರೆ.
ಅದಿನ್ಯಾರು ಅಲ್ಲ ಕನ್ನಡ ಚಿತ್ರರಂಗದ ಬಾಕ್ಸ್ ಆಫೀಸ್ ಸುಲ್ತಾನ ಆಗಿರುವ ಚಾಲೆಂಜಿಂಗ್ ಸ್ಟಾರ್ ದರ್ಶನ್(Challenging Star Darshan) ರವರು. ರಾಧಿಕಾ ಕುಮಾರಸ್ವಾಮಿ ಹಾಗೂ ಚಾಲೆಂಜಿಂಗ್ ಸ್ಟಾರ್ ದರ್ಶನ್ ಇಬ್ಬರೂ ಕೂಡ ಅನಾಥರು ಸಿನಿಮಾದಲ್ಲಿ ಒಟ್ಟಾಗಿ ಕಾಣಿಸಿಕೊಂಡಿರುವುದನ್ನು ನಾವು ಈ ಸಂದರ್ಭದಲ್ಲಿ ನೆನಪಿಸಿಕೊಳ್ಳಬಹುದಾಗಿದೆ. ಇವರಿಬ್ಬರ ಕಾಂಬಿನೇಷನ್ ನಲ್ಲಿ ಮತ್ತೊಂದು ಸಿನಿಮಾ ಮೂಡಿಬರಲು ಎಂಬುದಾಗಿ ಅಭಿಮಾನಿಗಳು ಹಾರೈಸುತ್ತಿರುವುದರಲ್ಲಿ ಯಾವುದೇ ಅನುಮಾನವಿಲ್ಲ ಎಂದು ಹೇಳಬಹುದಾಗಿದೆ.