Karnataka Times
Trending Stories, Viral News, Gossips & Everything in Kannada

Ramesh Aravind: ದುಬಾರಿ ಬೆಂಜ್ ಕಾರನ್ನು ಖರೀದಿಸಿದ ರಮೇಶ್ ಅರವಿಂದ್! ಬೆಲೆ ಇಲ್ಲಿದೆ

Advertisement

ನಟ ರಮೇಶ್ ಅರವಿಂದ್(Ramesh Aravind) ರವರು ಸಾಕಷ್ಟು ವರ್ಷಗಳಿಂದ ಕನ್ನಡ ಚಿತ್ರರಂಗದಲ್ಲಿ ನಾಯಕ ನಟನಾಗಿ ನಿರ್ದೇಶಕನಾಗಿ ಹಾಗೂ ಬಹುತೇಕ ಎಲ್ಲಾ ರೀತಿಯ ಪಾತ್ರಗಳನ್ನು ಕೂಡ ನಿರ್ವಹಿಸಿಕೊಂಡು ಬಂದಿರುವಂತಹ ಶ್ರೇಷ್ಠ ಪ್ರತಿಭೆಗಳಲ್ಲಿ ಒಬ್ಬರಾಗಿ ಕಾಣಿಸಿಕೊಳ್ಳುತ್ತಾರೆ. ನಿಜಕ್ಕೂ ಕೂಡ ವಯಸ್ಸು ಐವತ್ತನ್ನು ದಾಟಿದರೂ ಕೂಡ ಇಂದಿಗೂ ಮೂವತ್ತರ ಹರಿಯದ ಚಿರ ಯುವಕನಂತೆ ಕಾಣಿಸಿಕೊಳ್ಳುತ್ತಾರೆ ನಮ್ಮೆಲ್ಲರ ನೆಚ್ಚಿನ ಎವರ್ಗ್ರೀನ್ ಹೀರೋ ರಮೇಶ್ ಅರವಿಂದ್.

ಇನ್ನು ಈಗಾಗಲೇ ಜೀ ಕನ್ನಡ(Zee Kannada) ವಾಹಿನಿಯಲ್ಲಿ ನಡೆಯುತ್ತಿರುವಂತಹ ಎಲ್ಲರ ನೆಚ್ಚಿನ ಕಿರುತೆರೆಯ ಕಾರ್ಯಕ್ರಮವಾಗಿರುವ ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮದ ಐದನೇ ಸೀಸನ್ ಅನ್ನು ರಮೇಶ್ ಅರವಿಂದ್(Ramesh Aravind) ರವರು ನಿರೂಪಕನಾಗಿ ನಡೆಸಿಕೊಡುತ್ತಿದ್ದು ಈಗಾಗಲೇ ಎರಡು ಅತಿಥಿಗಳ ಎಪಿಸೋಡ್ ಗಳನ್ನು ಮುಗಿಸಿದ್ದಾರೆ. ಹೌದು ರಮ್ಯಾ ಹಾಗೂ ಪ್ರಭುದೇವ ಅವರು ಈಗಾಗಲೇ ಈ ಕಾರ್ಯಕ್ರಮಕ್ಕೆ ಬಂದು ಹೋಗಿರುವುದು ನಿಮಗೆಲ್ಲರಿಗೂ ತಿಳಿದಿರುವಂತಹ ವಿಚಾರವಾಗಿದೆ. ಈಗ ಇದೇ ಖುಷಿಯಲ್ಲಿ ರಮೇಶ್ ಅರವಿಂದ್(Ramesh Aravind) ರವರು ದುಬಾರಿ ಬೆಲೆಯ ಕಾರ್ ಅನ್ನು ಖರೀದಿಸಿದ್ದಾರೆ ಎಂಬುದಾಗಿ ತಿಳಿದು ಬಂದಿದೆ.

ಸಾಕಷ್ಟು ಲೇಟೆಸ್ಟ್ ತಂತ್ರಜ್ಞಾನಗಳನ್ನು ಹೊಂದಿರುವಂತಹ Benz E class ಸೀರೀಸ್ ನಲ್ಲಿ ಬರುವಂತಹ ಕಾರನ್ನು ರಮೇಶ್ ಅರವಿಂದ್ ರವರು ತಮ್ಮ ಮನೆಗೆ ಕರೆ ತಂದಿದ್ದಾರೆ. ಈಗಾಗಲೇ ರಮೇಶ್ ಅರವಿಂದ್ ಹಾಗೂ ಅವರ ಮನೆಯವರು ಈ ಕಾರನ್ನು ಗ್ರಹ ಪ್ರವೇಶ ಮಾಡಿಸಿಕೊಂಡಿದ್ದು ವಿಶೇಷ ಪೂಜೆಯನ್ನು ಕೂಡ ನೆರವೇರಿಸಿದ್ದಾರೆ. ಇನ್ನು ಇದರ ಬೆಲೆಯ ವಿಚಾರಕ್ಕೆ ಬರೋದಾದ್ರೆ ಮೂಲಗಳ ಪ್ರಕಾರ ರಮೇಶ್ ಅರವಿಂದ್ ರವರು 1.05 ಕೋಟಿ ನೀಡಿ ಈ ಕಾರನ್ನು ತಮ್ಮದಾಗಿಸಿಕೊಂಡಿದ್ದಾರೆ ಎಂಬುದಾಗಿ ತಿಳಿದು ಬಂದಿದೆ. ಇದೇ ರೀತಿ ಇನ್ನಷ್ಟು ಯಶಸ್ಸನ್ನು ರಮೇಶ್ ಅರವಿಂದ್ ರವರು ಪಡೆಯಲಿ ಎಂಬುದಾಗಿ ಹಾರೈಸೋಣ.

Leave A Reply

Your email address will not be published.