Karnataka Times
Trending Stories, Viral News, Gossips & Everything in Kannada

Dhanush Divorce: ಕೊನೆಗೂ ಹೊರಬಂತು ರಜನಿಕಾಂತ್ ಪುತ್ರಿಗೆ ನಟ ಧನುಷ್ ವಿಚ್ಛೇದನ ನೀಡಿದ್ದಕ್ಕೆ ಕಾರಣ.

Advertisement

ತಮಿಳು ಚಿತ್ರರಂಗದ ಖ್ಯಾತ ನಟ ಧನುಷ್(Dhanush) ಹಾಗೂ ಸೂಪರ್ ಸ್ಟಾರ್ ರಜನಿಕಾಂತ್(Rajinikanth) ರವರ ಪುತ್ರಿ ಆಗಿರುವಂತಹ ಐಶ್ವರ್ಯ ಅವರು ಇಬ್ಬರೂ ಕೂಡ ಪ್ರೀತಿಸಿ ಮದುವೆಯಾದವರು. ಆದರೆ 18 ವರ್ಷಗಳ ದಾಂಪತ್ಯ ಜೀವನದ ನಂತರವೂ ಕೂಡ ಪರಸ್ಪರ ಇಬ್ಬರ ನಡುವೆ ಭಿನ್ನಾಭಿಪ್ರಾಯಗಳು ಮೂಡಿಬಂದು ಇಬ್ಬರೂ ಕೂಡ ವಿವಾಹವಿಚ್ಛೇದನವನ್ನು ಪಡೆದುಕೊಂಡಿದ್ದು ಪ್ರತಿಯೊಬ್ಬರಿಗೂ ಕೂಡ ಆಶ್ಚರ್ಯವನ್ನು ತರಿಸಿತ್ತು. ಧನುಷ್ ಕೂಡ ತಮಿಳು ಚಿತ್ರರಂಗದ ಖ್ಯಾತ ನಿರ್ದೇಶಕ ಹಾಗೂ ನಿರ್ಮಾಪಕ ಆಗಿರುವಂತಹ ಕಸ್ತೂರಿ ರಾಜ ಅವರ ಮಗ ಆಗಿದ್ದರು. ಧನುಷ್ ಅವರ ಮೊದಲ ಸಿನಿಮಾದ ಪ್ರದರ್ಶನದ ಸಂದರ್ಭದಲ್ಲಿ ರಜನಿಕಾಂತ್ ಮಗಳ ಜೊತೆಗೆ ಪರಿಚಯ ಆರಂಭವಾಗಿ ಸ್ನೇಹದಿಂದ ಪ್ರೀತಿಗೆ ತಿರುಗುತ್ತದೆ.

ಇವರಿಬ್ಬರೂ ಓಡಾಟ ನಡೆಸುತ್ತಿದ್ದು ಸುದ್ದಿ ಮಾಧ್ಯಮಗಳಲ್ಲಿ ಕೇಳಿ ಬರುತ್ತಿದ್ದ ಬೆನ್ನಲ್ಲೇ ರಜನಿಕಾಂತ್(Rajinikanth) ಹಾಗೂ ಕಸ್ತೂರಿರಾಜ್ ಕುಟುಂಬಗಳು ಸೇರಿಕೊಂಡು ಇಬ್ಬರಿಗೂ ಕೂಡ ಮದುವೆ ಮಾಡಿಸಿಬಿಡುತ್ತಾರೆ. 2004ರ ನವಂಬರ್ 18ರಂದು ಇವರಿಬ್ಬರು ಮದುವೆಯಾಗಿದ್ದಾರೆ ಹಾಗೂ ಈಗಾಗಲೇ ಇವರಿಬ್ಬರಿಗೆ ಇಬ್ಬರು ಗಂಡು ಮಕ್ಕಳಿದ್ದಾರೆ.

ಇನ್ನು ತನ್ನ ಗಂಡನ ಹಾಗೆ ಐಶ್ವರ್ಯ ರಜನಿಕಾಂತ್ ಕೂಡ ಸಿಂಗರ್ ಹಾಗೂ ನಿರ್ದೇಶಕಿಯಾಗಿ ಚಿತ್ರರಂಗದಲ್ಲಿ ಸಾಕಷ್ಟು ದೊಡ್ಡ ಮಟ್ಟದಲ್ಲಿ ಗುರುತಿಸಿಕೊಂಡಿದ್ದಾರೆ. ಆದರೆ ಇತ್ತೀಚಿನ ದಿನಗಳಲ್ಲಿ ಅಂದರೆ ವಿವಾಹ ವಿಚ್ಛೇದನಕ್ಕೂ ಮುನ್ನ ಈ ವಿವಾಹ ವಿಚ್ಛೇದನ ನಡೆಯುವುದಕ್ಕೆ ಕಾರಣವಾಗಿದ್ದು ಧನುಷ್ ರವರ ವಿಚಾರದಲ್ಲಿ ಕೇಳಿ ಬಂದಂತಹ ಸಾಕಷ್ಟು ಅ’ ನೈತಿಕ ಸಂಬಂಧಗಳು ಎಂಬುದು ಮೊದಲಿಗೆ ನಾವು ಇಲ್ಲಿ ನೆನಪಿನಲ್ಲಿಟ್ಟುಕೊಳ್ಳಬೇಕಾಗುತ್ತದೆ.

ತ್ರೀ ಎನ್ನುವ ಸಿನಿಮಾದಲ್ಲಿ ಶ್ರುತಿ ಹಾಸನ್(Shruti Haasan) ರವರ ಜೊತೆಗೆ ನಟಿಸಿದ ಸಂದರ್ಭದಲ್ಲಿ ಅವರಿಗೆ ಸಾಕಷ್ಟು ಕ್ಲೋಸ್ ಆಗಿದ್ದರು ಎನ್ನುವ ಸುದ್ದಿಗಳು ಕೂಡ ಅಧಿಕೃತವಾಗಿ ಹರಡಿದ್ದವು. ಈ ಸಂದರ್ಭದಲ್ಲಿ ಈ ವಿಚಾರವನ್ನು ಅವರ ಪತ್ನಿಯಾಗಿರುವ ಐಶ್ವರ್ಯ ತಳ್ಳಿ ಹಾಕುತ್ತಾರೆ ಯಾಕೆಂದರೆ ಅವರೇ ಸಿನಿಮಾದ ನಿರ್ದೇಶಕಿ ಆಗಿರುತ್ತಾರೆ. ಅದಾದ ನಂತರ ಸುಚಿತ್ರ ಎನ್ನುವ ಸಿಂಗರ್, ಸಂಗೀತ ನಿರ್ದೇಶಕ ಅನಿರುದ್ಧ(Aniruddh) ಹಾಗೂ ಧನುಷ್(Dhanush) ನನ್ನನ್ನು ದೈಹಿಕವಾಗಿ ಬಳಸಿಕೊಂಡಿದ್ದಾರೆ ಎಂಬುದಾಗಿ ಕೂಡ ಆರೋಪವನ್ನು ಮಾಡಿದ್ದರು.

ಇದಾದ ನಂತರ ನಟಿ ತ್ರಿಶ ಅವರ ವಿಚಾರದಲ್ಲಿ ಸೇರಿದಂತೆ ಇನ್ನೂ ಹಲವಾರು ಆಫರ್ಸ್ ಗಳು ಈ ಸಮಯದಲ್ಲಿ ಹೊರಬಂದವು. ಈ ಕಾರಣಕ್ಕಾಗಿ ಇಬ್ಬರೂ ಕೂಡ ನಿರ್ಧಾರ ಮಾಡಿ ಕೊನೆಗೂ ವಿವಾಹ ವಿಚ್ಛೇದನವನ್ನು ಪಡೆದುಕೊಳ್ಳುತ್ತಾರೆ. ಆದರೆ ಈ ಎಲ್ಲ ಸಂದರ್ಭಗಳಲ್ಲಿ ಹೆಚ್ಚಿನ ದುಃಖವನ್ನು ಅನುಭವಿಸಿದ್ದು ಮಾತ್ರ ನಟ ರಜನಿಕಾಂತ್(Rajinikanth) ಎನ್ನುವುದನ್ನು ನಾವು ನೆನಪಿನಲ್ಲಿಟ್ಟುಕೊಳ್ಳಬೇಕು.

Leave A Reply

Your email address will not be published.