Vaishnavi Gowda: ವೈಷ್ಣವಿ ಗೌಡ ಮದುವೆ ಕುರಿತು ಮಹತ್ವದ ನಿರ್ಧಾರ ತಗೆದುಕೊಂಡ ತಾಯಿ, ಇಲ್ಲಿದೆ ಸಿಹಿಸುದ್ದಿ

Advertisement
ಕನ್ನಡ ಕಿರುತೆರೆಯಲ್ಲಿ ಹಲವಾರು ನಟಿಯರು ಅವರು ನಟಿಸಿರುವಂತಹ ಧಾರವಾಹಿಯ ಮೂಲಕ ಸಿನಿಮ ನಟಿಯರಿಗಿಂತಲೂ ಹೆಚ್ಚಾಗಿ ಜನಪ್ರಿಯತೆಯನ್ನು ಪಡೆದುಕೊಂಡಿದ್ದಾರೆ. ಅವರಲ್ಲಿ ನಟಿ ವೈಷ್ಣವಿ ಗೌಡ ಕೂಡ ಒಬ್ಬರಾಗಿದ್ದಾರೆ. ಸೋಶಿಯಲ್ ಮೀಡಿಯಾ ಸೇರಿದಂತೆ ನಿಜ ಜೀವನದಲ್ಲಿ ಕೂಡ ಯಾವುದೇ ಸ್ಟಾರ್ ನಟಿಗೂ ಕಡಿಮೆ ಇಲ್ಲದಂತೆ ವೈಷ್ಣವಿ ಗೌಡ ಅವರ ಅಭಿಮಾನಿಗಳನ್ನು ದೊಡ್ಡ ಸಂಖ್ಯೆಯಲ್ಲಿ ಹೊಂದಿದ್ದಾರೆ. ಇನ್ನು ಕನ್ನಡ ಸಿರಿದರೆ ಅತ್ಯಂತ ಶ್ರೀಮಂತ ಹಾಗೂ ದೊಡ್ಡ ರಿಯಾಲಿಟಿ ಶೋ ಕಾರ್ಯಕ್ರಮ ಆಗಿರುವ ಬಿಗ್ ಬಾಸ್ ಗೆ ಕೂಡ ವೈಷ್ಣವಿ ಗೌಡ(Vaishnavi Gowda) ಹೋಗಿ ಬಂದಿದ್ದಾರೆ.
ಈ ಕಾರ್ಯಕ್ರಮದಲ್ಲಿ ಕೂಡ ಸಾಕಷ್ಟು ದೊಡ್ಡ ಮಟ್ಟದ ಜನಪ್ರಿಯತೆಯನ್ನು ಪಡೆದುಕೊಂಡು ಬಿಗ್ ಬಾಸ್(Biggboss) ಮನೆಯಿಂದ ಹೊರ ಬಂದ ನಂತರ ನಟಿ ವೈಷ್ಣವಿ ಗೌಡ ಅವರ ಮದುವೆ ವಿಚಾರ ಸಾಕಷ್ಟು ದೊಡ್ಡ ಮಟ್ಟದಲ್ಲಿ ಸದ್ದು ಮಾಡುತ್ತಿದ್ದು ಪ್ರತಿ ಬಾರಿಯ ಅಭಿಮಾನಿಗಳು ನಿಮ್ಮ ಮದುವೆ ಯಾವಾಗ ಎಂಬುದಾಗಿ ನಟಿ ವೈಷ್ಣವಿ ಗೌಡ(Viashnavi Gowda) ಅವರ ಬಳಿ ಕೇಳುತ್ತಿದ್ದಾರೆ.
ಈಗಾಗಲೇ ಒಮ್ಮೆ ವೈಷ್ಣವಿ ಗೌಡ ಅವರು ಮದುವೆ ಆಗಲು ಸಿದ್ದರಾಗಿದ್ದಂತಹ ವಿಚಾರಗಳು ಕೂಡ ಸುದ್ದಿ ಮಾಧ್ಯಮಗಳಲ್ಲಿ ಸಾಕಷ್ಟು ಸದ್ದು ಮಾಡಿತ್ತು. ಒಮ್ಮೆ ವಿದ್ಯಾಭರಣ ಎನ್ನುವವರ ಜೊತೆಗೆ ಮದುವೆ ನಿಶ್ಚಿತಾರ್ಥವಾಗಿ ನಂತರ ಆ ಮದುವೆ ಕ್ಯಾನ್ಸಲ್ ಆಗಿದ್ದು ಕೂಡ ಸಾಕಷ್ಟು ವಿ’ ವಾದವನ್ನು ಸೃಷ್ಟಿಸಿತ್ತು.
ಇದೇ ಸಂದರ್ಭದಲ್ಲಿ ವೈಷ್ಣವಿ ಗೌಡ(Vaishnavi Gowda) ಅವರ ತಾಯಿ ಒಂದು ಮಹತ್ವದ ನಿರ್ಧಾರವನ್ನು ಘೋಷಿಸಿದರು. ಹೌದು ಮಿತ್ರರೇ ವೈಷ್ಣವಿ ಗೌಡ ಅವರ ತಾಯಿ ನಮ್ಮ ಮಗಳ ಮದುವೆಯನ್ನು ಕೂಡ ನಾವು ಸಾಕಷ್ಟು ಅದ್ಧೂರಿಯಾಗಿ ಮಾಡಬೇಕು ಎನ್ನುವುದಾಗಿ ನಿಶ್ಚಯಿಸಿಕೊಂಡಿದ್ದೇವೆ ಹೀಗಾಗಿ ಕದ್ದು ಮುಚ್ಚಿ ಮದುವೆ ಮಾಡಿಸುವುದಿಲ್ಲ ಎಂಬುದಾಗಿ ನೇರ ನೇರವಾಗಿ ಈ ಕುರಿತಂತೆ ಹೇಳಿದ್ದಾರೆ. ಒಟ್ಟಾರೆಯಾಗಿ ಆದಷ್ಟು ಶೀಘ್ರದಲ್ಲಿ ವೈಷ್ಣವಿ ಗೌಡ ಅವರನ್ನು ನಾವು ಹಸೆ ಮಣೆಯ ಮೇಲೆ ಕುಳಿತುಕೊಳ್ಳುವುದನ್ನು ನೋಡಬಹುದಾಗಿದೆ. ಈ ಬಗ್ಗೆ ನಿಮ್ಮ ಅನಿಸಿಕೆ ಹಾಗೂ ಅಭಿಪ್ರಾಯಗಳನ್ನು ನಮ್ಮೊಂದಿಗೆ ತಪ್ಪದೆ ಕಾಮೆಂಟ್ ಮೂಲಕ ಹಂಚಿಕೊಳ್ಳಿ.