Karnataka Times
Trending Stories, Viral News, Gossips & Everything in Kannada

Megha Shetty: ರಾಂಪ್ ವಾಕ್ ನಲ್ಲಿ ಮಿಂಚಿದ ಜೊತೆ ಜೊತೆಯಲಿ ಖ್ಯಾತಿಯ ನಟಿ ಮೇಘ ಶೆಟ್ಟಿ! ವಿಡಿಯೋ ವೈರಲ್.

ನಟಿ ಮೇಘ ಶೆಟ್ಟಿ (Actress Megha Shetty) ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಕನ್ನಡ ಕಿರುತೆರೆಯ ಕ್ಷೇತ್ರದಲ್ಲಿ ಸಾಕಷ್ಟು ದೊಡ್ಡ ಮಟ್ಟದಲ್ಲಿ ಪ್ರಭಾವ ಬೀರಿರುವಂತಹ ನಟಿಯಾಗಿದ್ದಾರೆ. ನಿಜಕ್ಕೂ ಕೂಡ ಅತ್ಯಂತ ಕಡಿಮೆ ಸಮಯದಲ್ಲಿ ಅತ್ಯಂತ ದೊಡ್ಡ ಮಟ್ಟದ ಜನಪ್ರಿಯತೆಯನ್ನು ಹೊಂದಿರುವಂತಹ ಕಿರುತೆರೆಯ ಸ್ಟಾರ್ ನಟಿಯರಲ್ಲಿ ಮೇಘ ಶೆಟ್ಟಿ ಅವರು ಮುಂಚೂಣಿ ಸ್ಥಾನದಲ್ಲಿ ಕಂಡು ಬರುತ್ತಾರೆ. ಜೀ ಕನ್ನಡ ವಾಹಿನಿಯ ಜೊತೆ ಜೊತೆಯಲಿ (Jothe Jotheyali) ಧಾರಾವಾಹಿಯಲ್ಲಿ ಕಾಣಿಸಿಕೊಳ್ಳುವ ಮೂಲಕ ಮೇಘ ಶೆಟ್ಟಿ ಕರ್ನಾಟಕದ ಮನೆಮನೆಯಲ್ಲಿ ಕೂಡ ಪರಿಚಿತರಾಗುತ್ತಾರೆ.

Advertisement

ಎಲ್ಲಕ್ಕಿಂತ ಪ್ರಮುಖವಾಗಿ ಅವರ ಪಾತ್ರ ಎನ್ನುವುದು ಎಷ್ಟರ ಮಟ್ಟಿಗೆ ಜನಪ್ರಿಯ ವಾಗುತ್ತದೆ ಎಂದರೆ ಅವರನ್ನು ಮೇಘ ಶೆಟ್ಟಿ ಎಂದು ಕರೆಯುವುದಕ್ಕಿಂತ ಹೆಚ್ಚಾಗಿ ಅನು ಸಿರಿಮನೆ ಎಂಬುದಾಗಿಯೇ ಎಲ್ಲರೂ ಕರೆಯುತ್ತಾರೆ. ಇನ್ನು ಇತ್ತೀಚಿಗಷ್ಟೇ ಬಿಡುಗಡೆ ಆಗಿರುವಂತಹ ಗೋಲ್ಡನ್ ಸ್ಟಾರ್ ಗಣೇಶ್ (Golden Star Ganesh) ನಾಯಕ ನಟನಾಗಿ ಕಾಣಿಸಿಕೊಂಡಿರುವ ತ್ರಿಬಲ್ ರೈಡಿಂಗ್ ಸಿನಿಮಾದಲ್ಲಿ ನಾಯಕ ನಟಿಯಾಗಿ ಕಾಣಿಸಿಕೊಳ್ಳುವ ಮೂಲಕ ಕನ್ನಡ ಚಿತ್ರರಂಗಕ್ಕೆ ನಾಯಕ ನಟಿಯಾಗಿ ಕೂಡ ಪಾದರ್ಪಣೆ ಮಾಡಿದ್ದಾರೆ. ಮುಂದಿನ ದಿನಗಳಲ್ಲಿ ಕನ್ನಡ ಚಿತ್ರರಂಗದಲ್ಲಿ ಸಾಕಷ್ಟು ಸಿನಿಮಾಗಳಲ್ಲಿ ನಾಯಕ ನಟಿಯಾಗಿ ಕಾಣಿಸಿಕೊಳ್ಳುವ ಭರವಸೆಯನ್ನು ಕೂಡ ಈ ಮೂಲಕ ನೀಡಿದ್ದಾರೆ.

Advertisement

ಇನ್ನು ಸೋಶಿಯಲ್ ಮೀಡಿಯಾದಲ್ಲಿ ಕೂಡ ಸಾಕಷ್ಟು ದೊಡ್ಡ ಮಟ್ಟದ ಅಭಿಮಾನಿ ಬಳಗವನ್ನು ಹೊಂದಿರುವಂತಹ ಮೇಘ ಶೆಟ್ಟಿ ಆಗಾಗ ತಮ್ಮ ಖಾಸಗಿ ಹಾಗೂ ಪ್ರೊಫೆಷನಲ್ ಜೀವನಕ್ಕೆ ಸಂಬಂಧಿಸಿದ ಫೋಟೋ ಹಾಗೂ ವಿಡಿಯೋಗಳನ್ನು ಹಂಚಿಕೊಳ್ಳುತ್ತಲೇ ಇರುತ್ತಾರೆ. ಇತ್ತೀಚಿಗಷ್ಟೇ ಮೇಘ ಶೆಟ್ಟಿ (Megha Shetty) Ramp Walk ನಲ್ಲಿ ಭಾಗವಹಿಸಿರುವ ವಿಡಿಯೋ ಯೂಟ್ಯೂಬ್ ನಲ್ಲಿ ವೈರಲ್ ಆಗುತ್ತಿದ್ದು ಇದರಲ್ಲಿ ನಮ್ಮ ಭಾರತೀಯ ಸಂಸ್ಕೃತಿಯ ಪ್ರತಿಕವಾಗಿರುವ ಸೀರೆಯನ್ನು ಉಟ್ಟು ಮೇಘ ಶೆಟ್ಟಿ ಅವರು ಮಿಂಚುತ್ತಿರುವ ದೃಶ್ಯಗಳನ್ನು ನೀವು ನೋಡಬಹುದಾಗಿದೆ. ಈ ವಿಡಿಯೋ ಈಗಾಗಲೇ ಸಖತ್ ವೈರಲ್ ಆಗಿದ್ದು ನೀವು ಕೂಡ ನೋಡಬಹುದಾಗಿದ್ದು ಸೀರಿಯಲ್ ಮೇಘ ಶೆಟ್ಟಿ ಅವರು ಹೇಗೆ ಕಾಣಿಸಿಕೊಳ್ಳುತ್ತಿದ್ದಾರೆ ಎಂಬ ಕುರಿತಂತೆ ನಿಮ್ಮ ಅಭಿಪ್ರಾಯಗಳನ್ನು ಹಂಚಿಕೊಳ್ಳಿ.

Advertisement

Leave A Reply

Your email address will not be published.