Karnataka Times
Trending Stories, Viral News, Gossips & Everything in Kannada

Pushpa Movie: ಪುಷ್ಪ ಚಿತ್ರದಲ್ಲಿ ಹೆಚ್ಚು ಸಂಭಾವನೆ ಸಿಕ್ಕಿದ್ದು ಯಾರಿಗೆ? ಸತ್ಯ ಹೊರಕ್ಕೆ.

ತೆಲುಗು ಚಿತ್ರರಂಗದ ಖ್ಯಾತ ನಟ ಆಗಿರುವಂತಹ ಅಲ್ಲು ಅರ್ಜುನ್(Allu Arjun) ಅವರಿಗೆ ರಾಷ್ಟ್ರೀಯ ಮಟ್ಟದಲ್ಲಿ ಪ್ಯಾನ್ ಇಂಡಿಯನ್ ಬಿರುದು ಕೊಟ್ಟಂತಹ ಸಿನಿಮಾ ಎಂದರೆ ಅದು ಪುಷ್ಪ(Pushpa). ಕೇವಲ ಅವರಿಗೆ ಮಾತ್ರವಲ್ಲದೆ ನಟಿ ರಶ್ಮಿಕ ಮಂದಣ್ಣ(Rashmika Mandanna) ಅವರಿಗೂ ಕೂಡ ಪರಭಾಷೆಗಳಲ್ಲಿ ದೊಡ್ಡ ಮಟ್ಟದ ಅಭಿಮಾನಿ ಬಳಗವನ್ನು ಈ ಸಿನಿಮಾ ತಂದುಕೊಟ್ಟಿತು. ಪ್ರತಿಯೊಬ್ಬರೂ ಕೂಡ ಅವರ ಪಾತ್ರ ಶ್ರೀವಲ್ಲಿ ಪಾತ್ರವನ್ನು ಸಾಕಷ್ಟು ಇಷ್ಟ ಪಟ್ಟಿದ್ದರು. ಹಳ್ಳಿ ಹುಡುಗಿಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು ಕೂಡ ಸೊಗಸಾಗಿ ಕಾಣಿಸಿಕೊಂಡಿದ್ದರು.

Advertisement

ಎಲ್ಲಕ್ಕಿಂತ ಪ್ರಮುಖವಾಗಿ ಈ ಸಿನಿಮಾ ಸರಿಸುಮಾರು 400 ಕೋಟಿ ಕಲೆಕ್ಷನ್ ಅನ್ನು ಮೊದಲ ಭಾಗದಿಂದಲೇ ಕಲೆಕ್ಷನ್ ಮೂಲಕ ಪಡೆದುಕೊಂಡಿರುವುದು ಮತ್ತೊಂದು ಮೆಚ್ಚ ಬೇಕಾಗಿರುವಂತಹ ವಿಚಾರ. ಇನ್ನು ಈ ಸಿನಿಮಾದಲ್ಲಿ ನಟಿ ಸಮಂತ(Samantha) ಅವರು ವಿವಾಹ ವಿಚ್ಛೇದನದ ಸುದ್ದಿ ಓಡಾಡುತ್ತಿದ್ದ ಸಂದರ್ಭದಲ್ಲಿ ಐಟಂ ಡ್ಯಾನ್ಸ್ ಮಾಡುವ ಮೂಲಕ ಕೂಡ ದೊಡ್ಡ ಮಟ್ಟದಲ್ಲಿ ಸುದ್ದಿಯಾಗಿದ್ದರು. ಇದು ಕೂಡ ಪುಷ್ಪ ಸಿನಿಮಾದ(Pushpa Film) ಮತ್ತೊಂದು ಪ್ರಮುಖ ಆಕರ್ಷಣೆಯಾಗಿತ್ತು.

Advertisement

ಇನ್ನು ಹಲವಾರು ಮೂಲಗಳ ಪ್ರಕಾರ ಚಿತ್ರದ ನಾಯಕನಹಟ್ಟಿ ಆಗಿದ್ದ ರಶ್ಮಿಕಾ ಮಂದಣ್ಣ ಅವರಿಗಿಂತ ಹೆಚ್ಚಾಗಿ ಕೇವಲ ಐಟಂ ಡ್ಯಾನ್ಸ್ ಗೆ ಸ್ವಂತ ಬಳುಕಿಸಿದ್ದ ಸಮಂತ ಅವರು ಹೆಚ್ಚಿನ ಸಂಭಾವನೆಯನ್ನು ಪಡೆದುಕೊಂಡಿದ್ದಾರೆ ಎಂಬುದಾಗಿ ತಿಳಿದು ಬಂದಿದೆ. ಅಷ್ಟಕ್ಕೂ ಇಬ್ಬರು ಪಡೆದಿರುವಂತಹ ಸಂಭಾವನೆ ಕುರಿತಂತೆ ಸಂಪೂರ್ಣ ವಿವರವಾಗಿ ತಿಳಿದುಕೊಳ್ಳೋಣ ಬನ್ನಿ.

Advertisement

ನಾಯಕ ನಟಿಯಾಗಿ ಕಾಣಿಸಿಕೊಂಡಿರುವ ರಶ್ಮಿಕಾ ಮಂದಣ್ಣ(Rashmika Mandanna) ಅವರಿಗೆ 3 ಕೋಟಿ ರೂಪಾಯಿ ಸಂಭಾವನೆ ಆದರೆ ಕೇವಲ ಒಂದು ಹಾಡಿನಲ್ಲಿ ಅದರಲ್ಲೂ ಐಟಂ ಡ್ಯಾನ್ಸ್ ನಲ್ಲಿ ಕುಣಿದಿರುವಂತಹ ಸಮಂತ(Samantha) ಅವರಿಗೆ ಭರ್ಜರಿ 5 ಕೋಟಿ ರೂಪಾಯಿ ಸಂಭಾವನೆಯನ್ನು ನೀಡಲಾಗಿದೆ ಎಂದು ತಿಳಿದು ಬಂದಿದೆ. ಇದು ಚಿತ್ರರಂಗದಲ್ಲಿ ಸಮಂತ ಅವರು ಹೊಂದಿರುವ ಅನುಭವ ಹಾಗೂ ಮಾರುಕಟ್ಟೆಯ ಬೇಡಿಕೆಗೆ ಒಂದು ಜ್ವಲಂತ ಸಾಕ್ಷಿ ಎಂದರೆ ತಪ್ಪಾಗಲಾರದು. ಈ ಬಗ್ಗೆ ನಿಮ್ಮ ಅಭಿಪ್ರಾಯಗಳನ್ನು ಕಾಮೆಂಟ್ ಮೂಲಕ ನಮ್ಮೊಂದಿಗೆ ಹಂಚಿಕೊಳ್ಳಬಹುದಾಗಿದೆ.

Leave A Reply

Your email address will not be published.