Radhika Pandit: ಹುಟ್ಟುಹಬ್ಬದ ದಿನವೇ ಸಿಹಿಸುದ್ದಿ ಕೊಡುತ್ತಾರಂತೆ ರಾಧಿಕಾ ಪಂಡಿತ್

Advertisement
ಮೊಗ್ಗಿನ ಮನಸ್ಸು ಸಿನೆಮಾ ಮೂಲಕ ಚೆಂದನವನಕ್ಕೆ ಕಾಲಿಟ್ಟ ಚೆಂದುಳ್ಳಿ ಚಲುವೆ ರಾಧಿಕಾ ಪಂಡಿತ್ (Radhika Pandit) ಅವರು ಸದ್ಯ ಫುಲ್ ಖುಷ್ ಆಗಿದ್ದಾರೆ. ಇಂದು ಅವರ ದಿನ ಎಂದರೂ ತಪ್ಪಾಗಲಾರದು. ಅದ್ಧೂರಿ, ಡ್ರಾಮಾ, ಕೃಷ್ಣನ್ ಲವ್ ಸ್ಟೋರಿ, ಬಹದ್ದೂರ್, ಬ್ರೇಕಿಂಗ್ ನ್ಯೂಸ್, ಸಾಗರ್, ಕಡ್ಡಿಪುಡಿ, ಆದಿಲಕ್ಷ್ಮೀ ಪುರಾಣ, ರಾಮಾಚಾರಿ, ದೊಡ್ಮನೆ ಹುಡುಗ, ಹುಡುಗರು ಇನ್ನು ಅನೇಕ ಸಿನೆಮಾದಲ್ಲಿ ನಟಿಸಿ ಸ್ಯಾಂಡಲ್ವುಡ್ ಸಿಂಡ್ರೆಲಾ ಎಂಬ ಹೆಗ್ಗುರುತಲ್ಲಿ ಗುರುತಿಸಿಕೊಂಡ ರಾಧಿಕಾ ಅವರ ಜನ್ಮದಿನ ಮಾ. 7 ಅವರ ಅಭಿಮಾನಿಗಳ ಪಾಲಿಗೆ ದೊಡ್ಡ ಹಬ್ಬವೆಂದೇ ಹೇಳಬಹುದು.
ರಾಧಿಕಾ ಅವರು ಎಲ್ಲ ರೀತಿಯ ಕ್ಯಾರೆಕ್ಟರಿಗೂ ಸೂಟ್ ಆಗೊ ಹಿರೋಹಿನ್, ಅದೇ ರೀತಿ ಸಾಲು ಸಾಲು ಹಿಟ್ ಸಿನೆಮಾಗಳನ್ನು ನೀಡಿದ್ದ ಇವರು ಸ್ಯಾಂಡಲ್ ವುಡ್ ನ ರಾಕಿಂಗ್ ಸ್ಟಾರ್ ಯಶ್ (Rocking star Yash) ಜೊತೆ ಪ್ರೇಮ ವಿವಾಹವಾಗಿ ಸದ್ಯ ಸಿನೆಮಾ ರಂಗದಿಂದ ದೂರವಿದ್ದಾರೆ. ಈ ಮೂಲಕ ಅಭಿಮಾನಿಗಳಿಗೆ ಪೋಸ್ಟ್ ಒಂದನ್ನು ರಾಧಿಕಾ ಪಂಡಿತ್ ಅವರು ಹಾಕಿದ್ದಾರೆ
ಏನಿದೆ ಆ ಪೋಸ್ಟರ್ ನಲ್ಲಿ?
Advertisement
ರಾಧಿಕಾ ಪಂಡಿತ್ ಅವರು ಪ್ರತಿ ವರ್ಷ ಕೂಡ ತಮ್ಮ ಮನೆಯಲ್ಲಿ ಆಗೋ ವಿಶೇಷ ಹಬ್ಬದ ಆಚರಣೆಯ ಬಗ್ಗೆ ಹಾಗೂ ಮಕ್ಕಳ ಮತ್ತು ಪತಿಯ ಹುಟ್ಟುಹಬ್ಬದ ಬಗ್ಗೆ ಹಾಗೂ ವಿದೇಶ ಪ್ರವಾಸಕ್ಕೆ ತೆರಳಿದೆಲ್ಲವನ್ನು ತಮ್ಮ ಅಭಿಮಾನಿಗಳಿಗೆ ಸಂತಸದಿಂದಲೇ ತಿಳಿಸಿ ಪೋಸ್ಟ್ ಮಾಡುತ್ತಿರುತ್ತಾರೆ ಅದರಂತೆ ಅವರ ಹುಟ್ಟು ಹಬ್ಬಕ್ಕೂ ಒಂದು ಪೋಸ್ಟ್ ಹಾಕಿದ್ದಾರೆ. ಈ ಬಾರಿ ವೈಯಕ್ತಿಕ ಕಾರಣದಿಂದ ನಾನು ಮನೆಯಲ್ಲಿರಲ್ಲ. ನನಗೆ ಗೊತ್ತಿದೆ ಇದು ನಿಮಗೆಲ್ಲ ಬೇಜಾರಾಗ್ತಿದೆ ಎಂದು, ನಿಮ್ಮ ಜೊತೆ ಟಚ್ ನಲ್ಲಿ ಇರ್ತೇನೆ ಎಂದು ಪೋಸ್ಟ್ ಹಾಕಿದ್ದಾರೆ.
ಈ ಮೂಲಕ ಸಿಂಡ್ರೆಲ್ಲ ಹೊಸ ಸಿನೆಮಾ ಅನೌನ್ಸ್ ಮಾಡಬಹುದು ಎಂದು ಕಾದಿದ್ದ ಅಭಿಮಾನಿಗಳಿಗೆ ನಿರಾಸೆಯಾಗಿದೆ ಈ ಬಾರಿಯೂ ಯಾವುದೇ ಸಿನೆಮಾ ಅಪ್ಡೇಟ್ ಅನ್ನು ಅವರು ನೀಡಿಲ್ಲ. ಆದರೂ ಒಂದೊಳ್ಳೆ ಸ್ಕ್ರಿಪ್ಟ್ ಗಾಗಿ ರಾಧಿಕಾ ಪಂಡಿತ್ ಕಾಯುತ್ತಿದ್ದಾರೆ ಎಂಬುದು ಅಭಿಮಾನಿಗಳ ಊಹೆಯಾಗಿದೆ. ಚಿತ್ರರಂಗದಲ್ಲಿ ಕೂಡ ಎಲ್ಲರು ಗೌರವಿಸುವ ನಾಯಕಿಯರಲ್ಲಿ ರಾಧಿಕಾ ಸಹ ಒಬ್ಬರು. ಸ್ಯಾಂಡಲ್ ವುಡ್ ಸಿಂಡ್ರೆಲಾ ಮರಳಿ ಚಿತ್ರರಂಗಕ್ಕೆ ಬರಲಿ ಎನ್ನುವುದು ಎಲ್ಲಾ ಅಭಿಮಾನಿಗಳ ಆಸೆ ಆಗಿದೆ, ರಾಧಿಕಾ ಪಂಡಿತ್ ಅವರು ಹೊಸ ಸಿನಿಮಾ ಒಪ್ಪಿಕೊಳ್ಳಲಿ, ಅವರು ಹೊಸ ಸಿನಿಮಾ ಘೋಷಣೆ ಮಾಡಲಿ ಎಂದು ಫ್ಯಾನ್ಸ್ ಕಾಯುತ್ತಿದ್ದಾರೆ. ಇದಕ್ಕೆ ಯಾವಾಗ ಪ್ರತಿಕ್ರಿಯೆ ಸಿಗುತ್ತೆ ಕಾದು ನೋಡ್ಬೇಕು.
View this post on Instagram
Advertisement