Jothe Jotheyali Serial: ಜೊತೆ -ಜೊತೆಯಲಿ ಸಿರಿಯಲ್ ಕಥೆಯಲ್ಲಿ ಮತ್ತಷ್ಟು ಟ್ವಿಸ್ಟ್, ಆಗಿದ್ದೇ ಬೇರೆ
ಜೊತೆ ಜೊತೆಯಲಿ (Jothe Joteyali) ಸೀರಿಯಲ್, ಜೀ ಕನ್ನಡದ (Zee Kannada) ಜನಪ್ರಿಯ ಧಾರಾವಾಹಿಗಳಲ್ಲಿ (Serials) ಪ್ರೀತಿಗೆ ವಯಸ್ಸಿನ ಅಂತರ ಇಲ್ಲ, ಪ್ರೀತಿ ಇದ್ದರೆ ಏನನ್ನಾದರೂ ಗೆಲ್ಲಬಹುದು ಎನ್ನುವ ಕಥೆ ಈ ಸಿರಿಯಲ್ ನಲ್ಲಿ ಇದೆ, ಅನಿರುದ್ದ್ ಮತ್ತು ಅನು ಜೋಡಿ ಹಿಟ್ ಆಗಿದ್ದರೂ ಆರ್ಯ ಪಾತ್ರ ಔಟ್ ಆದ ಮೇಲೆ , ಹರೀಶ್ ರಾಜ್ (Harish Raj) ಬರುತ್ತಾರೆ, ಆದ್ರೂ ಸಿರಿಯಲ್ ಕಥೆಮುಂದೆ ಸಾಗುತ್ತೋ ಅನ್ನುವವರಿಗೆ ಜೊತೆಜೊತೆಯಲಿ ಸಿರಿಯಲ್ ಮತ್ತಷ್ಟು ಟ್ವಿಸ್ಟ್ ನೀಡಿದೆ.
ಕಥೆಯಲ್ಲಿ ಮತ್ತಷ್ಟು ತಿರುವು:
ಸಾಮಾನ್ಯವಾಗಿ ಸೀರಿಯಲ್ ಅನ್ನು ನಿರಂತರವಾಗಿ ನೋಡುತ್ತಿದ್ದವರಿಗೆ ಕಥೆ ಹೀಗೆ ಹೋಗಬಹುದು ಅನ್ನೋ ಐಡಿಯಾ ಇರುತ್ತೆ. ಆದರೆ ಜೊತೆ ಜೊತೆಯಲಿ ಸೀರಿಯಲ್ ನೋಡುವುದೇ ಇಲ್ಲ ಅಂದ ವರೆಲ್ಲ ಸಲಿರಿಯಲ್ ಚೆನ್ನಾಗಿದೆ ಅಂತಿದ್ದಾರೆ, ಯಾಕಂದ್ರೆ ಮತ್ತಷ್ಟು ಇಂಟ್ರಸ್ಟಿಂಗ್ ವಿಚಾರ ಸಿರಿಯಲ್ ನಲ್ಲಿ ಬಂದಿದೆ, ಹಾಗೆ ನೋಡಿದರೆ ಹೊಸ ಆರ್ಯವರ್ಧನ್ ಆ ಬಗೆಯ ಎಂಟ್ರಿಯನ್ನು ಯಾರೂ ಊಹಿಸಿರಲಿಲ್ಲ. ಆದರೆ ಯಾಕೋ ಅನಿರುದ್ಧ್ ಅವರಷ್ಟು ಹರೀಶ್ ರಾಜ್ ವೀಕ್ಷಕರಿಗೆ ಹತ್ತಿರವಾದ ಹಾಗಿಲ್ಲ. ಕಥೆ ಬೇರೆ ಬಗೆಯಲ್ಲಿ ಸಾಗುತ್ತಿದೆ ಅನ್ನುತ್ತಿದ್ದರು, ಅದರೆ ಸಿರಿಯಲ್ ನಲ್ಲಿ ಮಾನ್ಸಿ ಯ ಪಾತ್ರ ಮತ್ತಷ್ಟು ಹಿಡಿದಿಟ್ಟು ಕೊಳ್ಳುತ್ತೆ
ಸಿರಿಯಲ್ ನಲ್ಲಿ ಹೊಸ ಪಾತ್ರಗಳ ಎಂಟ್ರಿ:
ಆರ್ಯ ಹಾಗೂ ಅನು ಮೂವರು ಕೂಡ ಕಂಪನಿಯ ಮರ್ಜಿಂಗ್ ಕೆಲಸಕ್ಕಾಗಿ ಅಮೆರಿಕಾಗೆ ಹೋಗಿದ್ದಾರೆ, ಇತ್ತ ಬಂದಿರುವ ಸಂಜೀವಿನಿಯ ಪ್ಲಾನಿಂಗ್ ಜೋರಾಗಿಯೇ ನಡೆಯುತ್ತಿದೆ, ಮಾನ್ಸಿ ಇನ್ನೂ ಮನೆ ಕೆಲಸದವಳ ಪಾತ್ರದ ವೇಷದಲ್ಲೇ ಇದ್ದಾಳೆ. ಸಂಜೀವಿನಿಯ ಮಕ್ಕಳನ್ನು ಆರ್ಯ, ಹರ್ಷ ನಿಗೆ ಮತ್ತ ಷ್ಟು ಹತ್ತಿರ ಮಾಡಿಸ ಮಾಡಬೇಕೆಂದು ಮತ್ತಷ್ಟು ನೆಪ ಹೇಳುತ್ತಿದ್ದಾರೆ, ಸಂಜೀವಿನಿ ಮೇಲೆ ಮಾನ್ಸಿ ಹಾಗೂ ಗೀತಾ ಇಬ್ಬರೂ ಅನುಮಾನ ಪಡುತ್ತಾರೆ. ಇವರ ಮುಖವಾಡವನ್ನು ಮಾನ್ಸಿ ಪತ್ತೆ ಹಚ್ಚುತ್ತರಾ ಕಾದು ನೋಡ್ಬೆಕು.
ಜೋಗ್ತವ್ವನ ಎಂಟ್ರಿ:
ಶಾರದಾ ದೇವಿ ಮೆಟ್ಟಿಲಿನಿಂದ ಕಾಲು ಜಾರಿ ಬೀಳುವಾಗಲೇ ಜೋಗವ್ವ ಎಂಟ್ರಿ ಕೊಡ್ತಾರೆ, ಈ ಮನೆಯಲ್ಲಿ ಕಂಟಕವಿದೆ. ಎಚ್ಚರ ಎಂದು ಮಾತು ಕೊಟ್ಟು ಹೊರಟು ಹೋಗುತ್ತಾರೆ, ಪುಷ್ಪ ಬಳಿಯೂ ಜೋಗ್ತವ್ವ ನಿನ್ನ ಮಗಳಿಗೂ ಅವಳ ಹೊಟ್ಟೆಯಲ್ಲಿರುವ ಮಗುವಿಗೂ ಬಹಳ ತೊಂದರೆ ಇದೆ, ಜಾಗ್ರತೆ ವಹಿಸಿ, ನಿನ್ನ ಮಗಳನ್ನು ಮೊಮ್ಮಗನ್ನು ಕಾಪಾಡಿಕೋ ಎಂದು ಹೇಳಿ ಹೋಗುತ್ತಾಳೆ. ಶಾರದಾ ದೇವಿಗೆ ಪುಷ್ಪ ಫೋನ್ ಮಾಡುತ್ತಾಳೆ. ಆಗ ಮಾನ್ಸಿ ರಿಸೀವ್ ಮಾಡಿ, ಶಾರದಾಗೆ ಕಾಲು ಜಾರಿ ಬಿದ್ದಿದ್ದನ್ನು ಹೇಳುತ್ತಾಳೆ. ಆಗ ಅನು ತಾಯಿ ಮತ್ತಷ್ಟು ಗಾಬರಿ ಪಡುತ್ತಾರೆ. ಸಂಜೀವಿನಿ ಇನ್ನು ಏನೆಲ್ಲಾ ಪ್ಲಾನ್ ಮಾಡಿ ಮನೆಯಲ್ಲಿ ತೊಂದರೆ ಅಗುವಂತೆ ಮಾಡುಬಹುದೆಂದು ವೀಕ್ಷಕರ ಅನಿಸಿಕೆ, ಕಥೆ ಯಾವ ರೀತಿ ತಿರುವು ಪಡೆಯುತ್ತದೆ ಕಾದು ನೋಡ್ಬೆಕು.