Actress Shruti: ನಿವೇದಿತಾ ಗೌಡ ಜೊತೆ ನಟಿ ಶ್ರುತಿ ಕ್ಯೂಟ್ ಡಾನ್ಸ್ ವಿಡಿಯೋ

Advertisement
ನಮ್ಮ ಕಿರುತೆರೆ ಲೋಕದ (Small Screen)ಖ್ಯಾತ ನಟಿ ನಿವೇದಿತಾ ಗೌಡ (Niveditha Gowda) ಇತ್ತೀಚಿನ ದಿನಗಳಲ್ಲಿ ಬಹಳ ಆಕ್ಟೀವ್ ಇದ್ದು ಸದಾ ಸುದ್ದಿಯಲ್ಲಿರುತ್ತಾರೆ.. ಅಲ್ಲದೇ ಒಂದರ ಬಳಿಕ ಒಂದು ಎಂಬಂತೆ ಸಾಲು ಸಾಲು ಕಿರುತೆರೆಯ ರಿಯಾಲಿಟಿ ಶೋಗಳನ್ನು (Reality Show) ಕೂಡ ಅವರು ಒಪ್ಪಿಕೊಂಡಿದ್ದು ಇದೀಗ ಜನರ ಅಚ್ಚುಮೆಚ್ಚಿನ ಗಿಚ್ಚಿ ಗಿಲಿಗಿಲಿ ಸೀಸನ್ ೨ ಶೋನಲ್ಲಿ ಬಹಳ ಬ್ಯುಸಿ ಇದ್ದಾರೆ. ಸದ್ಯ ಸಾಮಾಜಿಕ ಜಾಲತಾಣದಲ್ಲಿ (Social Media) ವಿಡಿಯೋ (Video) ಮತ್ತು ಫೋಟೋಗಳನ್ನು (Photo) ಶೇರ್ ಮಾಡಿಕೊಳ್ಳುತ್ತಿರುತ್ತಾರೆ. ಇದೆಲ್ಲದೆ ಜೊತರಗೆ ನಿವೇದಿತಾ ಗೌಡ ರವರು ಹಲವಾರಿ ಬಾರಿ ಟ್ರೋಲ್ (Troll) ಕೂಡ ಆಗಿದ್ದಾರೆ. ಅದರಲ್ಲೂ ಕನ್ನಡ (Kannada) ಮಾತನಾಡುವ ವಿಚಾರವಾಗಿ ಟೀಕೆಗಳನ್ನು ಎದುರಿಸಿದ್ದಾರೆ ಎನ್ನಬಹುದು.
ಬೀಮನ ಅಮವಾಸೆ ಮಾಡ್ತರಂತೆ ನಿವೇದಿತಾ:
ಕಳೆದ ಆವೃತ್ತಿಯ ಗಿಚ್ಚಿ ಗಿಲಿ ಗಿಲಿ ಕಾರ್ಯಕ್ರದಲ್ಲಿ ನಿವೇದಿತಾ ಮಾತನಾಡಿರುವುದು ಎಲ್ಲೆಡೆ ವೈರಲ್ ಆಗಿತ್ತು. ಹೌದು ಕೆಲವರು ಅದನ್ನು ಟೀಕೆ ಮಾಡಿದ್ದು ಈ ಕಾರ್ಯಕ್ರದಲ್ಲಿ ಚಂದನ್ ಶೆಟ್ಟಿ ಕೂಡ ಭಾಗವಹಿಸಿದ್ದರು. ಆ ಸಂದರ್ಭದಲ್ಲಿ ಕಾರ್ಯಕ್ರಮದ ನಿರೂಪಕ ನಿಮ್ಮ ಪಾದ ಪೂಜೆ ಆಗಿಲ್ವಾ ಎಂದು ಚಂದನ್ ಅವರ ಬಳಿ ಕೇಳಿದ್ದು ಆಗ ಚಂದನ್ ಇಲ್ಲಾ ಇನ್ನೂ ಆಗಿಲ್ಲ ಎಂದರು. ತಕ್ಷಣ ನಿವೇದಿತಾ ಸಂಜೆ ಮನೆಗೆ ಹೋದ ಬಳಿಕ ಪೂಜೆ ಮಾಡ್ತೀನಿ ಎಂದಿದ್ದಾರೆ. ಆದರೆ ಈ ಸಮಯದಲ್ಲಿ ಭೀಮನ ಅಮವಾಸ್ಯೆ ಎನ್ನಲು ಹೋಗಿ ಭೀಮನ ಅಮಮಾಸೆ ಮಾಡ್ತಿನಿ ಅಂತಾ ಹೇಳಿದ್ದರು. ಅದು ಅಲ್ಲಿದ್ದವರನ್ನು ನಗೆಗಡಲಲ್ಲಿ ತೇಲಿಸಿತ್ತು ಎನ್ನಬಹುದು.
ಶ್ರುತಿ ಜೊತೆ ನಿವೀ ಭರ್ಜರಿ ಡ್ಯಾನ್ಸ್:
ಸಾಮಾನ್ಯವಾಗಿ ನಿವೇದಿತಾ ರವರು ದಿನಕ್ಕೆ ಒಂದಾದರೂ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಾಕುತ್ತಾರೆ ಎನ್ನಬಹುದು. ಅವರ ಅಭಿಮಾನಿಗಳು ಹಾಗೂ ಜನರೂ ಕೂಡ ಅವರ ಫೋಟೋ ಹಾಗೂ ವಿಡಿಯೋಗಾಗಿ ಕಾಯುತ್ತಿರುತ್ತಾರೆ. ಅದೇರೀತಿ ಇವರಿಗೆ ಫಾಲೋವರ್ಸ್ಗಳಿಗೇನು ಕಡಿಮೆ ಇಲ್ಲ. ಸಾಮಾಜಿಕ ಜಾಲತಾಣದ ಮೂಲಕ ಫೇಮ್ ಪಡೆದು ನಂತರ ಬಿಗ್ಬಾಸ್ ಸೀಸನ್ನಲ್ಲಿ ತಮ್ಮ ವಿಶಿಷ್ಟ ರೀತಿಯ ಮಾತು ಹಾಗೂ ಫ್ಯಾಷನ್ ಕಾರಣದಿಂದ ಪ್ರಸಿದ್ದರಾದವರು ಈ ಸುಂದರಿ. ಸದ್ಯ ಇದೀಗ ಹೊಸ ವಿಡಿಯೋ ವೈರಲ್ ಆಗುತ್ತಿದ್ದು ಇಲ್ಲಿ ನಿವೀ ನಟಿ ಶ್ರುತಿ ಹಾಗೂ ನಿರಂಜನ್ ದೇಶ್ ಪಾಂಡೆ ಜೊತೆ ಸೇರಿ ಹೇಗೆ ನೃತ್ಯ ಮಾಡಿದ್ದಾರೆ ನೀವೆ ನೋಡಿ.