Karnataka Times
Trending Stories, Viral News, Gossips & Everything in Kannada

Actor Ganesh: ರಿಯಾಲಿಟಿ ಶೋಗಳಿಗೆ ನಟ ಗಣೇಶ್ ಕೇಳುವ ಸಂಭಾವನೆ ಎಷ್ಟು ಗೊತ್ತಾ

Advertisement

ಮೊದಲೆಲ್ಲಾ ಸಿನಿಮಾ ನಟ ನಟಿಯರಿಗೆ (Movie Actors) ಬಹಳ ಕ್ರೇಜ್ (Craze) ಇತ್ತು ಮತ್ತು ಬಹಳ ಬೇಡಿಕೆ ಇರುತ್ತಿತ್ತು. ಆದರೆ ಆಗ ಕಿರುತೆರೆಗೆ (Television) ಅಷ್ಟು ಪ್ರಾಮುಖ್ಯತೆ ಇರಲಿಲ್ಲ ಎನ್ನಬಹುದು. ಆದರೆ ಇತ್ತೀಚಿನ ದಿನಗಳಲಂತೂ ದೊಡ್ಡ ದೊಡ್ಡ ಸ್ಟಾರ್ ಗಳ ಸಹ ಕಿರುತೆರೆಯ ರಿಯಾಲಿಟಿ ಶೋಗಳನ್ನು (Reality Show) ಹೋಸ್ಟ್ (Host) ಮಾಡುತ್ತಾರೆ. ಇನ್ನು ಸಿನಿಮಾಗಳಿಗೆ ಕೋಟಿಕೋಟಿ ಸಂಭಾವನೆಯನ್ನು ಪಡೆಯುವ ಸೆಲೆಬ್ರಿಟಿಗಳು (Celebrities) ಕಿರುತೆರೆ ಕಾರ್ಯಕ್ರಮಗಳನ್ನು ನಿರೂಪಣೆಗಳ(Anchors) ಸಂಭಾವನೆಯನ್ನು ಪಡೆಯುತ್ತಾರೆ.

ದೊಡ್ಡ ದೊಡ್ಡ ಸ್ಟಾರ್ ಗಳಾದ ಕಿಚ್ಚ ಸುದೀಪ್ (Kiccha Sudeep) ಸೇರಿದಂತೆ ಗೋಲ್ಡನ್ ಸ್ಟಾರ್ ಗಣೇಶ್ ದಿವಂಗತ ನಟ ಪುನೀತ್ ರಾಜಕುಮಾರ್ (Puneeth Rajkumar) ಹಾಗೆಯೇ ರಮೇಶ್ ಅರವಿಂದ್ (Ramesh Arvind) ಸೇರಿದಂತೆ ಹೀಗೆ ಹಲವಾರು ಸ್ಟಾರ್ ನಟರಿಗೆ ಕಿರುತೆರೆ ಶೋಗಳಲ್ಲಿ ನಿರೂಪಣೆ ಮಾಡುತ್ತಾರೆ. ಹಾಗಾದರೆ ಕಿರುತೆರೆಯ ಖ್ಯಾತ ನಿರೂಪಕ ಎನಿಸಿಕೊಂಡಿರುವಂತಹ ಗೋಲ್ಡನ್ ಸ್ಟಾರ್ ಗಣೇಶ್ (Ganesh) ರವರು ನಿರೂಪಣೆ ಮಾಡಲು ಒಂದು ಸಂಚಿಕೆಗೆ ಪಡೆಯುವ ಸಂಭಾವನೆ ಎಷ್ಟು ಎಂದು ತಿಳಿದುಕೊಂಡರೆ ಆಶ್ಚರ್ಯ ಪಡುತ್ತೀರ.

ಗಣೇಶ್ ವೃತ್ತಿ ಜೀವನ..

ಇನ್ನು ನಟ ಗೋಲ್ಡನ್ ಸ್ಟಾರ್ ಗಣೇಶ್ ರವರು ನಮಸ್ಕಾರ ನಮಸ್ಕಾರ ಎಂದು ಹೇಳುತ್ತಾ ಕಾಮಿಡಿ ಟೈಮ್ ಕಾರ್ಯಕ್ರಮದ ಮೂಲಕ ಇಷ್ಟೊಂದು ಪ್ರಸಿದ್ಧಿ ಪಡೆದು ನಂತರ ಸಿನಿಮಾದಲ್ಲಿ ಅಭಿನಯಿಸುವ ಅವಕಾಶ ಗಿಟ್ಟಿಸಿಕೊಂಡಿದ್ದು ಈ ಮಟ್ಟಕ್ಕೆ ಸ್ಟಾರ್ ಆಗಿ ಬೆಳೆದು ನಿಂತವರು. ಈ ರೀತಿಯಾಗಿ ತಾವು ನಡೆದು ಬಂದ ಹಾದಿಯನ್ನು ಎಂದು ಸಹ ಮರೆಯಬಾರದು ಎಂಬಂತೆ ಗಣೇಶ್ ರವರು ಯಾವುದೇ ಸಂದರ್ಭದಲ್ಲಿ ನಿರೂಪಣೆ ಮಾಡಲು ಕರೆದರೆ ಇಲ್ಲ ಎನ್ನದೆ ಸೂಪರ್ ಮಿನಿಟ್ ಗೋಲ್ಡನ್ ಗ್ಯಾಂಗ್ ಸೇರಿದಂತೆ ಇನ್ನೂ ಹಲವಾರು ಕಾರ್ಯಕ್ರಮದಲ್ಲಿ ತಮ್ಮ ಅದ್ಭುತ ನಿರೂಪಣಾ ಶಕ್ತಿಯನ್ನು ತೋರಿಸಿದವರು ಎನ್ನಬಹುದು. ಇನ್ನು ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಗೋಲ್ಡನ್ ಗ್ಯಾಂಗ್ ಪ್ರೇಕ್ಷಕರಿಂದ ಉತ್ತಮ ರೆಸ್ಪಾನ್ಸ್ ಅನ್ನು ಪಡೆದುಕೊಂಡಿತ್ತು ಎನ್ನಬಹುದು.

ಗಣೇಶ್ ಸಂಭಾವನೆ…

ಹೌದು ಈ ಕಾರ್ಯಕ್ರಮದ ಅದ್ಭುತ ನಿರೂಪಣಾಗಾರರಾಗಿ ಗೋಲ್ಡನ್ ಸ್ಟಾರ್ ಗಣೇಶ್ ರವರು ತಮ್ಮ ಪಟಪಟ ಮಾತುಗಳಿಂದಲೇ ಬಂದಂತಹ ಸೆಲೆಬ್ರಿಟಿಗಳ ಕಾಲೆಳೆಯುತ್ತಾ ವೀಕೆಂಡ್ನಲ್ಲಿ ಪ್ರೇಕ್ಷಕರಿಗೆ ಮನೋರಂಜನೆಯ ಮಹದೂಟವನ್ನು ಬಡಿಸಿದ್ದರು ಎಂದು ಹೇಳಿದರೆ ನಿಜಕ್ಕೂ ತಪ್ಪಾಗಲಾರದು. ಅಷ್ಟೇ ಅಲ್ಲದೆ ಅದೆಷ್ಟೋ ಜನ ಗೋಲ್ಡನ್ ಸ್ಟಾರ್ ಗಣೇಶ್ ಅಭಿಮಾನಿ ತನ್ನ ನೆಚ್ಚಿನ ನಟನ ಮಾತುಗಳನ್ನು ಕೇಳಲು ಕಾರ್ಯಕ್ರಮವನ್ನು ನೋಡುವುದಾಗಿ ಹಲವಾರು ಮಾಧ್ಯಮಗಳಲ್ಲಿ ತಿಳಿಸಿದರು.

ಹೀಗೆ ಅಪಾರ ಅಭಿಮಾನಿ ಬಳಗವನ್ನು ತಮ್ಮ ಅದ್ಭುತ ನಿರೂಣೆಯಿಂದಲೇ ಸಂಪಾದಿಸಿದ್ದ ಗಣೇಶ್ ಒಂದು ಸಂಚಿಕವಗೆ ಬರೋಬ್ಬರಿ 2.4 ಲಕ್ಷ ಸಂಭಾವನೆಯನ್ನು ಪಡೆದುಕೊಳ್ಳುತ್ತಾರೆ ಎಂಬುದು ಮೂಲಗಳಿಂದ ತಿಳಿದುಬಂದಿತ್ತು. ಇದಕ್ಕೂ ಮುಂಚೆ ಗಣೇಶ್ ಸೂಪರ್ ಮಿನಿಟ್ ಕಾರ್ಯಕ್ರಮಕ್ಕೆ 1.5 ಲಕ್ಷ ಪಡೆಯುತ್ತಿದ್ದರು..

Leave A Reply

Your email address will not be published.