Dr CN Manjunath: ವಿಕೇಂಡ್ ವಿತ್ ರಮೇಶ್ ಗೆ ಬಂದ ಡಾ ಸಿ ಎನ್ ಮಂಜುನಾಥ್ ಯಾರ ಅಳಿಯ ಗೊತ್ತಾ? ಸತ್ಯ ಇಲ್ಲಿದೆ.
ಸಿ.ಎನ್ ಮಂಜುನಾಥ್ (C, N Manjunath) ಮಾಜಿ ಪ್ರಧಾನಿ ದೇವೇಗೌಡರ (Deve Gowda) ಅಳಿಯ ಎಂಬ ವಿಷಯ ಹಲವಾರು ಮಂದಿಗೆ ತಿಳಿದಿಲ್ಲ, ಯಾಕಂದ್ರೆ ಅವರ ಸರಳತೆ ಹಾಗೇ ಇದೆ, ಇವರು ತಮ್ಮ ವ್ಯಕ್ತಿತ್ವ, ಕೆಲಸ, ಶಿಸ್ತು, ಸೂಕ್ತ ನಿರ್ದೇಶನ, ಮಾರ್ಗದರ್ಶನ ಸೇರಿದಂತೆ ಉತ್ತಮ ಗುಣಗಳಿಂದ ಗುರುತಿಸಿಕೊಂಡಿರುವ ನೆಚ್ಚಿನ ವ್ಯಕ್ತಿ, ವೈದ್ಯಕೀಯ ಕ್ಷೇತ್ರಕ್ಕೆ ಇವರ ಕೊಡುಗೆಗಳು ಅಪಾರ, ಎಷ್ಟೋ ಜನರ ಜೀವ ಉಳಿಸದ ಶ್ರೇಷ್ಠ ವೈದ್ಯ,ಡಾ. ಸಿ.ಎನ್. ಮಂಜುನಾಥ್ ಅವರ ಸಾಧನೆ ಮತ್ತು ಆಡಳಿತ ವೈಖರಿ ಎಲ್ಲರಿಗೂ ಮಾದರಿ ಎನ್ನಬಹುದು.
ಜಯದೇವ ಆಸ್ಪತ್ರೆ ಯ ಮುಖ್ಯ ಸರದಾರ
ಸಿ, ಎನ್ ಮಂಜುನಾಥ್ ಬೆಂಗಳೂರಿನ ಜಯದೇವ (Jayadeva) ಆಸ್ಪತ್ರೆಯ ಹೃದ್ರೋಗ ವಿಜ್ಞಾನ ಹಾಗೂ ಸಂಶೋಧನಾ ಸಂಸ್ಥೆಯ ನಿರ್ದೇಶಕರು. ಕಳೆದ ಹಲವು ವರ್ಷಗಳಿಂದ ಇದೇ ಸಂಸ್ಥೆಯಲ್ಲಿ ದುಡಿದು ಸೇವೆ ಸಲ್ಲಿಸುತ್ತಿದ್ದಾರೆ, ಇವರ ಸೇವಾವಧಿ ಜುಲೈ 20ರಂದು ಅಂತ್ಯಗೊಳ್ಳಲಿದ್ದು, ಸಾರ್ವಜನಿಕರು ಮತ್ತು ಸಂಸ್ಥೆಯ ಹಿತದೃಷ್ಠಿಯಿಂದ 2023ರ ಜುಲೈ 19 ರವರೆಗೆ ಅವರ ಸೇವೆಯನ್ನು ಮುಂದುವರಿಸಲಾಗಿದೆ, ಯಾಕಂದ್ರೆ ಈ ಆಸ್ಪತ್ರೆ ಯ ರುವಾರಿ ಇವರೇ ಆಗಿದ್ದಾರೆ, ಸುಸಜ್ಜಿತ ವ್ಯವಸ್ಥೆ ಗಳನ್ನು ನಿರ್ಮಾಣ ಮಾಡಿ ಎಷ್ಟೋ ಬಡ ಜನರಿಗೆ ನೇರವಾಗಿದ್ದಾರೆ.
ಪ್ರಶಸ್ತಿಗಳ ಸರದಾರ
ಜಯದೇವ ಆಸ್ಪತ್ರೆ ನಿರ್ದೇಶಕ ಡಾ.ಸಿ.ಎನ್ ಮಂಜುನಾಥ್ ಅವರ ಸೇವಾವಧಿಯನ್ನ ಈಗಾಗಲೇ ಅವಧಿ ವಿಸ್ತರಣೆ ಮಾಡಲಾಗಿದೆ, ಇವರ ಸಾಧನೆಯನ್ನು ಕಂಡು ಹಲವಾರು ಪ್ರಶಸ್ತಿ ಗಳನ್ನು ಕೂಡ ನೀಡಲಾಗಿದೆ, ರಾಜೀವ್ ಗಾಂಧಿ ಯೂನಿವರ್ಸಿಟಿ ಆಫ್ ಹೆಲ್ತ್ ಸೈನ್ಸಸ್ ಡಾಕ್ಟರ್ ಆಫ್ ಸೈನ್ಸ್ ಪದವಿ ನೀಡಿ ಗೌರವಿಸಿದೆ. ಮಂಜುನಾಥ್‍ರವರ ನಿಸ್ವಾರ್ಥ ವೈದ್ಯಕೀಯ ಸೇವೆಗಾಗಿ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ದೊರೆತಿದೆ. ಹೃದ್ರೋಗ ವಿಜ್ಞಾನ ಕ್ಷೇತ್ರಕ್ಕೆ ನೀಡಿದ ಕೊಡುಗೆಗಾಗಿ ಸ್ಕಾಟ್ಲೆಂಡ್‍ನ ರಾಯಲ್ ಕಾಲೇಜ್ ಫಿಜಿಷಿಯನ್ಸ್‍ನ ಫೆಲೋಶಿಪ್ ಪ್ರಶಸ್ತಿ ಗೂ ಭಾಜನರಾಗಿದ್ದಾರೆ,
ಜಯದೇವ ಆಸ್ವತ್ರೆಯನ್ನು ಸುಸಜ್ಜಿತವಾಗಿ ನಿರ್ಮಾಣ ಮಾಡಿದ ಸಾಧಕ
ಒಂದು ಕಾಲದಲ್ಲಿ ಜಯ ದೇವ ಆಸ್ವತ್ರೆಯಲ್ಲಿ ಯಾವುದೇ ಸುಸಜ್ಜಿತ ವ್ಯವಸ್ಥೆ ಇರಲಿಲ್ಲ, ವೈದ್ಯಕೀಯ ಸೌಲಭ್ಯ, ಕಟ್ಟಡಗಳ ನಿರ್ಮಾಣ, ಸಿಬ್ಬಂದಿ ವ್ಯವಸ್ಥೆ ಹೀಗೆ ಯಾವುದೇ ರೀತಿಯಲ್ಲಿ ವ್ಯವಸ್ಥೆ ಸರಿ ಇರಿಲಲ್ಲ, ಇಸ್ಪೀಟ್ ಆಡುವ ದಂಧೆ ರೀತಿಯಲ್ಲಿ ಈ ಆಸ್ಪತ್ರೆಯ ಸ್ಥಿತಿ ನಿರ್ಮಾಣ ವಾಗಿತ್ತು, ಅದ್ರೆ ಯಾವತ್ತು ಮಂಜುನಾಥ್ ಅವರು ಈ ಆಸ್ಪತ್ರೆ ಯ ನಿರ್ದೆಶಕರಾದರೋ ಅಂದಿನಿಂದ ಆಸ್ಪತ್ರೆ ಯ ವ್ಯವಸ್ಥೆಯೇ ಬದಲಾಯಿತು, ಹಲವಾರು ರೋಗಿಗಳಿಗೆ ಉಚಿತ ಚಿಕಿತ್ಸೆ ಯನ್ನು ಕೂಡ ನೀಡಿದ್ದಾರೆ, ಬಡ ಕುಟುಂಬದಿಂದ ಬಂದ ಇವರು ಸಣ್ಣ ಹಳ್ಳಿಯಲ್ಲಿ ಬದುಕಿದವರು, ಆದರೆ ಯಾವುದೇ ರಾಜಕೀಯ ರಂಗಕ್ಕೆ ಪ್ರವೇಶ ಮಾಡದೇ ತಮ್ಮ ಸರಳತೆಯನ್ಜು ಇಂದಿಗೂ ಉಳಿಸಿ ಕೊಂಡವರು.