Karnataka Times
Trending Stories, Viral News, Gossips & Everything in Kannada

Jaggesh: ಕೋಮಲ್ ರೀತಿಯಲ್ಲೇ ಮಿಮಿಕ್ರಿ ಮಾಡಿದ ಜಗ್ಗೇಶ್, ವಿಡಿಯೋ ಇಲ್ಲಿದೆ

ಕನ್ನಡ ಚಿತ್ರರಂಗದ (KFI) ಖ್ಯಾತ ಕಾಮಿಡಿ ನಟ (Comedy Hero) ಹಾಗೂ ನವರಸ ನಾಯಕ ಜಗ್ಗೇಶ್ (Jaggesh) ರವರ ಸಹೋದರ ಕೋಮಲ್ ಕುಮಾರ್ (Komal Kumar) ರವರು ಇದೀಗ ಎಲ್ಲರೊಗೂ ಉಂಡೆನಾಮ (Undenama) ಹಾಕಲು ರೆಡಿಯಾಗಿದ್ದಾರೆ. ಏನಿದು ಅಂತ ಜಾಸ್ತಿ ತಲೆಕೆಡಿಸಿಕೊಳ್ಳಬೇಡಿ.. ಉಂಡೆನಾಮ ಎಂಬ ಸಿನಿಮಾದಲ್ಲಿ (Movie) ಅಭಿನಯಿಸುತ್ತಿದ್ದಾರೆ. ಸದ್ಯ ಇತ್ತೀಚಿಗಷ್ಟೆ ಉಂಡೆನಾಮ ಚಿತ್ರತಂಡ (Film Team) ಟ್ರೈಲರ್ (Trailer) ರಿಲೀಸ್ ಮಾಡುವ ಮೂಲಕವಾಗಿ ಮಾಧ್ಯಮದ ಮುಂದೆ ಹಾಜರಾಗಿತ್ತು. ಇನ್ನು ಕೋಮಲ್ ರವರ ಸಿನಿಮಾ ಕಾರ್ಯಕ್ರಮಕ್ಕೆ ವಿಶೇಷ ಅತಿಥಿಯಾಗಿ (Special Guest) ನಟ ನವರಸನಾಯಕ ಜಗ್ಗೇಶ್ ಕೂಡ ಭಾಗಿಯಾಗಿದ್ದು ತಮ್ಮನ ಬಗ್ಗೆ ಹಾಗೂ ಸಿನಿಮಾದ ಬಗ್ಗೆ ಜಗ್ಗೇಶ್ ಮೆಚ್ಚುಗೆಯ ಮಾತುಗಳನ್ನು ಆಡಿದ್ದಾರೆ.

Advertisement

ಅಗಲಿಕೆಯ ದವಡೆಯಲ್ಲಿ ಕೋಮಲ್ !

Advertisement

ಇನ್ನು ಸಿನಿಮಾದ ಟ್ರೈಲರ್ ರಿಲೀಸ್ ಕಾರ್ಯಕ್ರಮದಲ್ಲಿ ನಟ ಜಗ್ಗೇಶ್ ರವರು ಪ್ರೀತಿಯ ಸಹೋದರ ಕೋಮಲ್ ಪ್ರಾಣ ಕಳೆದುಕೊಳ್ಳುವ ದವಡೆಯಿಂದ ಪಾರಾದ ಬಗ್ಗೆ ಬಹಿರಂಗ ಪಡಿಸಿದ್ದು ಕೊರೊನಾ ಸಮಯದಲ್ಲಿ ಕೋಮಲ್‌ಗೂ ಕೂಡ ಈ ರೋಗ ತಗುಲಿತ್ತು. ಆ ಕಷ್ಟದ ಸಮಯದಿಂದ ಹೊರಬಂದ ಬಗ್ಗೆ ಜಗ್ಗೇಶ್ ರವರು ವಿವರಿಸಿದ್ದು ಕೋಮಲ್‌ನನ್ನು ಕಾಪಾಡಿದ ತನ್ನ ಕುಲದೇವರು ಭೈರವನಿಗೆ ಧನ್ಯವಾದ ಕೂಡ ತಿಳಿಸಿದರು. ಇನ್ನು ಅದೇ ಸಮಯದಲ್ಲಿ ತಮ್ಮನಿಗೆ ಕೇತು ದಸೆ ಇದ್ದ ಬಗ್ಗೆಯೂ ಬಹಿರಂಗ ಪಡಿಸಿದ್ದು ಕೇತು ದಸೆ ಮುಳುಗಿಸಿ ಬಿಡುತ್ತದೆ ಅಮಿತಾಭ್ ಬಚ್ಚನ್ (Amithabh Bacchan) ಅವರನ್ನೇ ಬಿಟ್ಟಿಲ್ಲ ಎನ್ನುವ ವಿಚಾರವನ್ನು ಜಗ್ಗೇಶ್ ಹೇಳಿದರು.

Advertisement

ಕೋಮಲ್ ಮಿಮಿಕ್ರಿ ಮಾಡಿದ ಜಗ್ಗೇಶ್:

Advertisement

ಇನ್ನು ನಟ ಕೋಮಲ್ ಕೊರೊನಾದಿಂದ ಪಾರಾದಿದ್ದು ಆ ಭೈರವನಿಂದ ಎಂದಿರುವ ಜಗ್ಗೇಶ್ ರವರು ಸ್ನೇಹಿತನ ಮಗ ಕೊರೊನಾದಿಂದ ಅಗಲಿಕೆ ಹೊಂದಿದ ನಂತರ ಕೊಮಲ್‌‌ಗೂ ಕೊರೊನಾ ಬಂದಿತು. ಚೆನ್ನಾಗಿಯೇ ಇದ್ದ ಸ್ನೇಹಿತನ ಮಗ ದಿಢೀರ್ ಅಗಲಿಕೆ ಹೊಂದಿದ್ದು ತುಂಬಾ ಆಘಾತವಾಗಿತ್ತು. ಇನ್ನು ಕೆಲವೇ ದಿನಗಳಲ್ಲಿ ಕೋಮಲ್ ಸಹ ಅದೇ ಸ್ಥಿತಿಗೆ ತಲುಪಿದ್ದ ಎಂದು ಹೇಳಿದರು. ಬಳಿಕ ಎಲ್ಲರನ್ನು ನಕ್ಕು ನಲಿಸುವ ಸಲುವಾಗಿ ಕೋಮಲ್ ರವರ ಮಿಮಿಕ್ರಿ ಮಾಡಿದ ಜಗ್ಗೇಶ್ ಎಲ್ಲರನ್ನು ಹೇಗೆ ನಗಿಸಿದ್ದಾರೆ ನೀವೆ ನೋಡಿ..

Leave A Reply

Your email address will not be published.