Kantara 2: ಕಾಂತಾರ 2 ಬಗ್ಗೆ ಇದುವರೆಗಿನ ಹೊಸ ಮಾಹಿತಿ ಕೊಟ್ಟ ಪ್ರಮೋದ್ ಶೆಟ್ಟಿ, ಟ್ವಿಸ್ಟ್ ಇಲ್ಲಿದೆ

Advertisement
ಈಗಾಗಲೇ ನಿಮಗೆಲ್ಲರಿಗೂ ತಿಳಿದಿರುವ ಹಾಗೆ ರಿಷಬ್ ಶೆಟ್ಟಿ(Rishab Shetty) ನಾಯಕನಾಗಿ ಹಾಗೂ ನಿರ್ದೇಶಕನಾಗಿ ಕಾಣಿಸಿಕೊಂಡಿರುವಂತಹ ಕಾಂತಾರ(Kantara) ಸಿನಿಮಾ 19 ಕೋಟಿಗೂ ಕಡಿಮೆ ಬಜೆಟ್ ನಲ್ಲಿ ನಿರ್ಮಾಣವಾಗಿ ನಾನು ಐವತ್ತು ಕೋಟಿಗೂ ಅಧಿಕ ಕಲೆಕ್ಷನ್ ಮಾಡುವ ಮೂಲಕ ಇಡೀ ಭಾರತೀಯ ಚಿತ್ರರಂಗದಲ್ಲಿ ಸೂಪರ್ ಹಿಟ್ ಎನ್ನುವ ಪದಕ್ಕೆ ನಿಜವಾದ ಅರ್ಥವನ್ನು ನೀಡುವಂತೆ ಮಾಡಿತ್ತು. ಬಜೆಟ್ ಕಡಿಮೆ ಇದ್ದರೂ ಕಂಟೆಂಟ್ ದೊಡ್ದಾಗಿದ್ರೆ ಜನರ ಮನಸ್ಸನ್ನು ಗೆಲ್ಲುವುದು ಎಷ್ಟು ಸುಲಭ ಎಂಬುದನ್ನು ಈ ಮೂಲಕ ರಿಷಬ್ ಶೆಟ್ಟಿ ಸಾಬೀತುಪಡಿಸಿ ತೋರಿಸಿದ್ದಾರೆ.
ಇನ್ನು ಸದ್ಯಕ್ಕೆ ಎಲ್ಲ ಬಿಟ್ಟು ರಿಷಬ್ ಶೆಟ್ಟಿ ಕಾಡಿಗೆ ಹೋಗೋಕ್ಕೆ ಸಜ್ಜಾಗಿ ನಿಂತಿದ್ದಾರೆ ಎನ್ನುವುದಾಗಿ ಇತ್ತೀಚಿಗಷ್ಟೇ ಸಂದರ್ಶನ ಒಂದರಲ್ಲಿ ಸಿನಿಮಾದಲ್ಲಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿರುವ ಹಾಗೂ ವೃಷಭ ಶೆಟ್ಟಿ ಅವರ ಆಪ್ತ ಗೆಳೆಯ ಆಗಿರುವಂತಹ ಪ್ರಮೋದ್ ಶೆಟ್ಟಿ(Pramod Shetty) ರಿವೀಲ್ ಮಾಡಿದ್ದಾರೆ. ಇಷ್ಟೊಂದು ಯಶಸ್ವಿ ಸಿನಿಮಾ ಜೀವನವನ್ನು ನಡೆಸುತ್ತಿರುವ ರಿಷಬ್ ಶೆಟ್ಟಿ ಯಾಕೆ ಕಾಡಿಗೆ ಹೋಗುತ್ತಿದ್ದಾರೆ ಎನ್ನುವುದಾಗಿ ಪ್ರತಿಯೊಬ್ಬರೂ ಕೂಡ ಆಶ್ಚರ್ಯ ಚಕಿತರಾಗಿದ್ದಾರೆ ಆದರೆ ಅವರು ಕಾಡಿಗೆ ಹೋಗುತ್ತಿರುವುದು ಕಾಂತಾರ 2(Kantara 2) ಚಿತ್ರಕ್ಕಾಗಿ. ಕಾಂತರಾ 2 ಸಿನಿಮಾದ ಕಥೆಯನ್ನು ಬರೆಯುವುದಕ್ಕಾಗಿ ಸಾಕಷ್ಟು ಸಮಯಗಳಿಂದ ರಿಷಭ್ ಶೆಟ್ಟಿ ಪ್ರಯತ್ನ ಪಡುತ್ತಿದ್ದರಂತೆ ಆದರೆ ಒಂದಲ್ಲ ಒಂದು ಕಾರ್ಯಕ್ರಮಗಳಿಗೆ ಅವರನ್ನು ಅತಿಥಿಯಾಗಿ ಕರೆಯಲಾಗುತ್ತಿತ್ತು.
ಇದೇ ಕಾರಣಕ್ಕಾಗಿ ಯಾರ ಸಹವಾಸವು ಬೇಡ ಎನ್ನುವ ಕಾರಣಕ್ಕಾಗಿ ಪಟ್ಟಣವನ್ನು ಬಿಟ್ಟು ಕಾಡಿಗೆ ಹೋಗಿ ಮೂರು ತಿಂಗಳುಗಳ ಕಾಲ ಕಾಂತಾರ2 ಸಿನಿಮಾದ ಕಥೆಯನ್ನು ಅಲ್ಲಿನ ಪರಿಸರಕ್ಕೆ ಅನುಗುಣವಾಗಿ ಬರೆದು, ಪ್ರತಿಯೊಂದು ಚಿಕ್ಕ ವಿಚಾರವನ್ನು ಕೂಡ ಆಚರಣೆ ಹಾಗೂ ಸಂಸ್ಕೃತಿಯ ಕುರಿತಂತೆ ಸಂಶೋಧನೆ ನಡೆಸಿ ನಂತರವೇ ಸಿನಿಮಾದ ಚಿತ್ರೀಕರಣವನ್ನು ಆಗಸ್ಟ್ ನಂತರ ಪ್ರಾರಂಭಿಸಬೇಕು ಎನ್ನುವ ಗುರಿಯನ್ನು ಹೊಂದಿದ್ದಾರೆ ಎಂಬುದಾಗಿ ಪ್ರಮೋದ್ ಶೆಟ್ಟಿ ಅವರು ಕಾಂತಾರ 2 ಸಿನಿಮಾದ ಕುರಿತಂತೆ ರಿಷಬ್ ಶೆಟ್ಟಿ(Rishab Shetty) ಅವರು ಹೊಂದಿರುವಂತಹ ಯೋಜನೆಯನ್ನು ಇದೇ ಸಂದರ್ಶನದಲ್ಲಿ ಬಿಚ್ಚಿಟ್ಟಿದ್ದಾರೆ. ಈ ಬಗ್ಗೆ ನಿಮ್ಮ ನಿರೀಕ್ಷೆ ಹಾಗೂ ಅಭಿಪ್ರಾಯಗಳನ್ನು ತಪ್ಪದೆ ಕಾಮೆಂಟ್ ಮೂಲಕ ನಮ್ಮೊಂದಿಗೆ ಹಂಚಿಕೊಳ್ಳಬಹುದಾಗಿದೆ.