Nithyananda Swamiji: ನಿತ್ಯಾನಂದ ಸ್ವಾಮೀಜಿಯ ಆಶ್ರಮ ಸೇರಿದ ಮತ್ತೊಂದು ಕನ್ನಡದ ಖ್ಯಾತ ನಟಿ

Advertisement
ಬಿಡದಿಯ ಆಶ್ರಮದಲ್ಲಿ ಸನ್ಯಾಸವನ್ನು ಸ್ವೀಕರಿಸಿ ಈಗಾಗಲೇ ನಿತ್ಯಾನಂದ ಸ್ವಾಮೀಜಿ(Nithyananda Swamy) ಯಾವ ರೀತಿಯಲ್ಲಿ ಜನರಿಗೆ ಮರಳು ಮಾಡಿದೆ ಎನ್ನುವುದು ನಿಮಗೆಲ್ಲರಿಗೂ ತಿಳಿದಿರುವಂತಹ ವಿಚಾರವಾಗಿದ್ದು ಈಗಾಗಲೇ ದೇಶ ಬಿಟ್ಟು ಓಡಿ ಕೂಡ ಹೋಗಿದ್ದಾನೆ. ಇನ್ನು ಈತ ದಕ್ಷಿಣ ಭಾರತದ ಚಿತ್ರರಂಗದ ಖ್ಯಾತ ನಟಿ ಆಗಿರುವಂತಹ ರಂಜಿತ ಅವರ ಜೊತೆಗೆ ಯಾವ ಪ್ರಕರಣದಲ್ಲಿ ಸುದ್ದಿಯಾಗಿದೆ ಎನ್ನುವುದು ಕೂಡ ನಿಮಗೆಲ್ಲರಿಗೂ ತಿಳಿದಿರುವಂತಹ ವಿಚಾರವಾಗಿದೆ. ಈಗಾಗಲೇ ಕೈಲಾಸ ಎನ್ನುವ ದೇಶವನ್ನು ನಿರ್ಮಿಸಿಕೊಂಡು ನಿತ್ಯಾನಂದ ಅಲ್ಲಿನ ರಾಜನಂತೆ ಮೆರೆಯುತ್ತಿದ್ದಾನೆ.
ಇನ್ನು ಕೇವಲ ಇಷ್ಟು ಮಾತ್ರವಲ್ಲದೆ ಕನ್ನಡ ಚಿತ್ರರಂಗ ಮೂಲದ ಮತ್ತೊಬ್ಬ ನಟಿ ಕೂಡ ನಿತ್ಯಾನಂದ ಅವರ ಶಿಷ್ಯೆಯಾಗಿದ್ದಾರೆ. ಹೌದು ನಾವು ಮಾತಾಡ್ತಿರೋದು ನಟಿ ಕೌಸಲ್ಯ(Actress Kousalya) ಅವರ ಕುರಿತಂತೆ. ಬೆಂಗಳೂರಿನಲ್ಲಿ ಜನಿಸಿರುವಂತಹ ಇವರು ಚಿತ್ರರಂಗದಲ್ಲಿ ಮಿಂಚಿದ್ದು ಕೇವಲ ಕನ್ನಡ ಚಿತ್ರರಂಗದಲ್ಲಿ ಮಾತ್ರವಲ್ಲದೆ ತಮಿಳು ಹಾಗೂ ಮಲಯಾಳಂ ಸಿನಿಮಾಗಳಲ್ಲಿ ಕೂಡ ಕಾಣಿಸಿಕೊಂಡು ದೊಡ್ಡಮಟ್ಟದ ಜನಪ್ರಿಯತೆಯನ್ನು ಪಡೆದುಕೊಂಡಿದ್ದರು. ಇತ್ತೀಚಿನ ವರ್ಷಗಳಲ್ಲಿ ಇವರು ಪೋಷಕ ಕಲಾವಿದೆ ಆಗಿ ಕೂಡ ಬಹುಭಾಷಾ ತಾರೆಯಾಗಿ ಕಾಣಿಸಿಕೊಂಡಿದ್ದರು. ಇನ್ನು ಇವರು ಕೂಡ ನಿತ್ಯಾನಂದ ಸ್ವಾಮಿ ಅವರ ವಿರುದ್ಧ ನೆಗೆಟಿವ್ ವಿಚಾರವನ್ನು ಹೊಂದಿದ್ದರೂ ಕೂಡ ಅವರ ಶಿಷ್ಯರಾಗಿ ಕನ್ವರ್ಟ್ ಆಗ್ತಾರೆ.

ಯಾಕೆಂದರೆ ಒಂದು ಸಂದರ್ಭದಲ್ಲಿ ಅವರಿಗೆ ಅಸಾಧ್ಯ ಬೆನ್ನು ನೋ’ ವು ಇದ್ದ ಕಾರಣ ಸಾಕಷ್ಟು ಕಡೆಗಳಲ್ಲಿ ಚಿಕಿತ್ಸೆಯನ್ನು ಮಾಡಿದ್ದರೂ ಕೂಡ ಅದರ ಕುರಿತಂತೆ ಯಾವುದೇ ಪ್ರಯೋಜನವಾಗಿರಲಿಲ್ಲ. ನಂತರ ಯಾರದ್ದು ಸಲಹೆಯ ಮೇರೆಗೆ ನಿತ್ಯಾನಂದ ಸ್ವಾಮೀಜಿ ಆಶ್ರಮದಲ್ಲಿ ಹೀಲಿಂಗ್ ತೆರಪಿ ಪಡೆದುಕೊಂಡ ನಂತರ ಕೇವಲ 10 ದಿನಗಳ ಒಳಗೆ ಬೆನ್ನು ನೋ’ ವು ಸಂಪೂರ್ಣವಾಗಿ ಮಾಯವಾಗಿ ಹೋಗುತ್ತದೆ. ಆದ ನಂತರದಿಂದ ನಟಿ ಕೌಶಲ್ಯ ಅವರಿಗೆ ನಿತ್ಯಾನಂದ ಸ್ವಾಮೀಜಿಯವರ ಆಶ್ರಮ ಹಾಗೂ ಅವರ ಮೇಲೆ ಸಂಪೂರ್ಣವಾಗಿ ಭರವಸೆ ಮೂಡಲು ಪ್ರಾರಂಭವಾಗುತ್ತದೆ. ಇದಾದ ನಂತರದಿಂದ ನಿತ್ಯಾನಂದ(Nithyananda) ಅವರ ಅನುಯಾಯಿ ಎಂಬುದಾಗಿ ಕೂಡ ನಟಿ ಕೌಸಲ್ಯ ಘೋಷಣೆ ಮಾಡಿಕೊಳ್ಳುತ್ತಾರೆ. ಇನ್ನು ಇಂದಿಗೆ 42ರಿಂದ 45 ವರ್ಷ ವಯಸ್ಸಾಗಿದ್ದರು ಕೂಡ ಅವರು ಮದುವೆಯಾಗದೆ ಹಾಗೆ ಉಳಿದುಕೊಂಡಿದ್ದಾರೆ.