Actress Ramya: ವಿಕೇಂಡ್ ವಿತ್ ರಮೇಶ್ ನಲ್ಲಿ ದಾಖಲೆ ಬರೆದ ರಮ್ಯಾ, ಇಲ್ಲಿದೆ ಸಿಹಿಸುದ್ದಿ

Advertisement
ಕಿರುತೆರೆಯ ಬಿಗ್ ಶೋ ವೀಕೆಂಡ್ ವಿತ್ ರಮೇಶ್ ಸೀಸನ್ 5 (Weekend With Ramesh 5) ರಲ್ಲಿ ಮೋಹಕತಾರೆ ರಮ್ಯಾ (Ramya) ಅವರು ತಮ್ಮ ಸಾಧನೆಯ ಯಾಶೋಗಾಥೆಯ ವಿಚಾರ ತಿಳಿಸಿದ್ದಾರೆ, ಆದರೆ ಎಲ್ಲಕ್ಕಿಂತ ಹೆಚ್ಚು ಜನರು ಗಮನಿಸಿದ್ದು ನಟಿಯ ಇಂಗ್ಲಿಷ್ ಭಾಷೆ ಬಳಕೆ, ಹೌದು ರಮ್ಯಾ ಅವರು ಇಂಗ್ಲಿಷ್ ಮಿಶ್ರಿತ ಭಾಷೆಯಲ್ಲಿ ಮಾತನಾಡಿದ್ದು ಕನ್ನಡಿಗರ ಕೋಪಕ್ಕೆ ಕಾರಣವಾಗಿತ್ತು, ನಟಿ ರಮ್ಯ ಬರ್ತಾರೆ ಅನ್ನುವಾಗ ಜನ ಈ ಶೋ ನೋಡಲು ಕಾದು ಕುಳಿತ್ತಿದ್ದರು ಆದರೆ ರಮ್ಯ ಮಾತನಾಡಿದ್ದು ಹಲವಷ್ಟು ಮಂದಿಗೆ ಅರ್ಥವಾಗಿಲ್ಲ ಎಂದು ವೀಕ್ಷಕರ ವಾದ
ಟ್ರೋಲ್ ಆದ್ರೂ ಎಪಿಸೋಡ್‌ಗೆ TRP ಎಷ್ಟು
ರಮ್ಯ ಮೇಲೆ ಪ್ರೀತಿ ಅಭಿಮಾನ ಜಾಸ್ತಿ ಇದೆ. ಆದರೆ ಕನ್ನಡ ಜಾಸ್ತಿ ಬಳಸದೆ ಇದ್ದದ್ದು ಖಂಡಿತ ತಪ್ಪು ಎಂದು ಹಲವಾರು ಟ್ರೋಲ್ ಮಾಡಿದ್ದರು, ಹೌದು ರಮ್ಯಾ ಸಂಚಿಕೆ ಸಾಕಷ್ಟು ನಿರೀಕ್ಷೆಗಳನ್ನು ಸೃಷ್ಟಿ ಸಿತ್ತು ಇಡೀ ಮನೆ ಮಂದಿ ಕೂತು ಕಾರ್ಯಕ್ರಮ ನೋಡುತ್ತಿದ್ದವರಿಗೆ ಕಿರಿಕಿರಿ ಮಾಡಿದ್ದು, ರಮ್ಯಾ ಇಂಗ್ಲಿಷ್, ಅದ್ರೂ ರಮ್ಯ ಎಪಿಸೋಡ್ ಹೈ ಟಿ ಆರ್ ಪಿ ಬಂದಿದೆ, ಹೌದು ಕನ್ನಡದ ಖಾಸಗಿ ವೆಬ್ ಸೈಟ್ ವರದಿ ಮಾಡಿರುವ ಪ್ರಕಾರ ರಮ್ಯಾ ಎಪಿಸೋಡ್‌ಗೆ 5.8 ಟಿಆರ್‌ಪಿ ಬಂದಿದೆ ಎನ್ನಲಾಗಿದೆ.
ರಮ್ಯ ಟ್ರೊಲ್ ಗೆ ಏನಂದ್ರು
ಈ ಬಗ್ಗೆ ಮಾತನಾಡಿದ ರಮ್ಯ ಕಾರ್ಯಕ್ರಮಕ್ಕೆ ಬಂದ ಅತಿಥಿಗಳು ಕನ್ನಡೇತರರು, ನಾನು ಎಲ್ಲರನ್ನು ಒಳಗೊಳ್ಳಲು ಪ್ರಯತ್ನಿಸುತ್ತಿದ್ದೆ, ನನ್ನ ಸ್ನೇಹಿತರಿಗೂ ಅರ್ಥವಾಗಲಿ ಎಂದು ಇಂಗ್ಲೀಷ್ ಮಾತನಾಡಿದೆ, ಮುಂದೆ ಕನ್ನಡ ದಲ್ಲಿಯೇ ಮಾತನಾಡುತ್ತೇನೆ ಎಂದಿದ್ದಾರೆ, ಕೆಲವರು ರಮ್ಯಾ ವಿರುದ್ಧ ಕಿಡಿಕಾರಿದ್ದಾರೆ. ತಪ್ಪಿದ್ದಾಗ ಒಪ್ಪಿಕೊಳ್ಳಬೇಕು, ಅದರ ಬದಲು ಈ ರೀತಿ ಹೇಳೋದು ಸರಿ ಅಲ್ಲ ಎಂದಿದ್ದಾರೆ, ಅದೇನೇ ಇರಲಿ ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮದ ರಮ್ಯ ಅವರ ಎಪಿಸೋಡ್ ಗಂತು ಹೈ ಟಿ ಆರ್ ಪಿ ಬಂದಿದೆ ಎನ್ನಲಾಗಿದೆ
ನಟ ರಮೇಶ್ ಏನಂದ್ರು
ಈ ಬಗ್ಗೆ ಮಾತನಾಡಿದ ರಮೇಶ್ ನನ್ನ ವೈಯಕ್ತಿಕ ಬದುಕಿನ ವಿಚಾರವಾದರೂ ತಪ್ಪಾಗಿದ್ದರೇ ಸರಿ ಪಡಿಸಿಕೊಳ್ಳಲೇ ಬೇಕು, ಹಾಗಾಗಿ ಏನೇ ಸಲಹೆ ಬಂದರೂ ಅದನ್ನು ತೆಗೆದುಕೊಳ್ಳಬೇಕು, ಅದರಲ್ಲಿ ಇರುವ ಸತ್ಯವನ್ನು ಅರಿತುಕೊಳ್ಳಬೇಕು ಅಂದರು, ನಾನು ಮತ್ತು ತಂಡದವರು ಈ ವಿಷಯದಲ್ಲಿ ಜವಾಬ್ದಾರಿಯಿಂದ ಇರ್ತೀವಿ ಅದರ ಬಗ್ಗೆ ಅನುಮಾನ ವಿಲ್ಲ ಎಂದು ತಿಳಿಸಿದ್ದಾರೆ