ಇತ್ತೀಚಿನ ದಿನಗಳಲ್ಲಿ ಸಿನಿಮಾದಷ್ಟೇ ಸೀರಿಯಲ್ ಕೂಡ ಸಾಕಷ್ಟು ದೊಡ್ಡ ಮಟ್ಟದ ವೀಕ್ಷಕ ಬೆಳಗವನ್ನು ಪಡೆದುಕೊಳ್ಳುತ್ತಿರುವುದು ಈ ಪ್ರಕ್ರಿಯೆ ಎನ್ನುವುದು ಲಾಕ್ಡೌನ್ ನಂತರದಿಂದ ಜಾಸ್ತಿಯಾಗಿದೆ. ಅದರಲ್ಲೂ ವಿಶೇಷವಾಗಿ ಇಂದಿನ ಲೇಖನಿಯಲ್ಲಿ ನಾವು ಮಾತನಾಡಲು ಹೊರಟಿರುವುದು ಸದ್ಯದ ಮಟ್ಟಿಗೆ ದೊಡ್ಡ ಮಟ್ಟದ ವೀಕ್ಷಕ ಬಳಗವನ್ನು ಹೊಂದಿರುವಂತಹ ಲಕ್ಷಣ ಧಾರವಾಹಿಯ(Lakshana Serial) ಕುರಿತಂತೆ. ಹಾಗಿದ್ರೆ ಬನ್ನಿ ಅಷ್ಟಕ್ಕೂ ಇಷ್ಟೊಂದು ಸುದ್ದಿ ಆಗಲು ಕಾರಣವಾದಂತಹ ಘಟನೆಯಾದರೂ ಏನು ಎಂಬುದನ್ನು ತಿಳಿಯೋಣ.
ಅಗ್ನಿ ಸಾಕ್ಷಿ(Agni Sakshi) ಧಾರವಾಹಿಯಲ್ಲಿ ಮುದ್ದು ಮುದ್ದು ತಂಗಿಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದ ಸುಕ್ರತಾ ನಾಗ್(Sukratha Nag) ಲಕ್ಷಣ ಧಾರವಾಹಿಯಲ್ಲಿ ವಿಲನ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಈ ದಾರವಾಹಿಯಲ್ಲಿ ತಾನು ಮದುವೆ ಆಗಬೇಕೆನ್ನುವ ಹುಡುಗನನ್ನು ಮದುವೆಯಾಗಲು ಹೊರಟಿರುವಂತಹ ನಕ್ಷತ್ರಳನ್ನು ಹಣಿಯುವ ಪಾತ್ರ ಸುಕೃತಾ ನಾಗ್ ಅವರದ್ದಾಗಿದೆ.
ಶ್ವೇತಾ ಪಾತ್ರವನ್ನು ನಿರ್ವಹಿಸುತ್ತಿರುವ ಸುಕೃತ ನಾಗ್ ನಕ್ಷತ್ರಾಳನ್ನು ಬಹುಪತಿಯಿಂದ ದೂರ ಸರಿಸಿ ಆತನನ್ನು ತಾನೆ ಮದುವೆಯಾಗಬೇಕು ಎನ್ನುವುದಾಗಿ ಹುನ್ನಾರವನ್ನು ನಡೆಸುತ್ತಿದ್ದಾಳೆ. ಆದರೆ ಇಂದಿನ ಲೇಖನಿಯಲ್ಲಿ ನಾವು ಮಾತನಾಡಲು ಹೊರಟಿರುವುದು ಧಾರವಾಹಿಯ ವಿಚಾರವಲ್ಲ ಬದಲಾಗಿ ಸುಕೃತ ನಾಗ್ ಅವರ ನಿಜವಾದ ಜೀವನದ ವಿಚಾರದ ಕುರಿತಂತೆ. ಅಷ್ಟಕ್ಕೂ ಇದೇನಿದು ಹೊಸ ಸುದ್ದಿ ಎಂಬುದನ್ನು ಸಂಪೂರ್ಣ ವಿವರವಾಗಿ ತಿಳಿದುಕೊಳ್ಳೋಣ ಬನ್ನಿ.
ಹೌದು ತಮ್ಮ ಯುಟ್ಯೂಬ್ ಚಾನೆಲ್ ನಲ್ಲಿ ತಮ್ಮ ಗೆಳತಿಯರಿಗೆ ಹಾಗೂ ಧಾರವಾಹಿಯ ಸಹೋದ್ಯೋಗಿಗಳಿಗೂ ಕೂಡ ಸುಕ್ರತ ನಾಗ್(Sukratha Nag) ಕರೆ ಮಾಡಿ ಅಮ್ಮ ನೋಡಿರೋ ಹುಡುಗನ ಜೊತೆಗೆ ಮದುವೆ ಫಿಕ್ಸ್ ಆಗಿದೆ ಎನ್ನುವ ರೀತಿಯಲ್ಲಿ ಕರೆ ಮಾಡಿ ತಿಳಿಸಿದರು. ಆಮೇಲೆ ಎಲ್ಲರಿಗೂ ತಿಳಿಯಿತು ಅವರು ಕರೆ ಮಾಡಿ ತಿಳಿಸಿದ ದಿನಾಂಕ ಏಪ್ರಿಲ್ 1 ಹಾಗೂ ಅದು ಮೂರ್ಖರ ದಿನಾಚರಣೆ ಎಂಬುದಾಗಿ. ಒಂದು ಕ್ಷಣ ಖುಷಿಯಾಗಿದ್ದ ಪ್ರತಿಯೊಬ್ಬರೂ ಕೂಡ ನಮ್ಮನ್ನು ಫೂಲ್ ಮಾಡಲಾಗಿದೆ ಎಂಬುದಾಗಿ ತಿಳಿದು ಸುಕೃತಾ ನಾಗ್ ಅವರಿಗೆ ಬೈದಿದ್ದು ಕೂಡ ದೃಶ್ಯದಲ್ಲಿ ಕಂಡು ಬಂದಿತ್ತು.