Sudeep: ಅಭಿನಯ ಚಕ್ರವರ್ತಿಗೆ ಬೆದರಿಕೆ ಪತ್ರ ಬರೆದಿದ್ದು ಆ ವ್ಯಕ್ತಿ! ಸತ್ಯ ಹೊರಕ್ಕೆ

Advertisement
ರಾಜ್ಯ ವಿಧಾನ ಸಭೆ ಚುನಾವಣಾ ಪ್ರಚಾರಕ್ಕೆ ಸೆಲೆಬ್ರಿಟಿಗಳು ಕೂಡಿಕೊಂಡಿದ್ದು ಇತ್ತೀಚೆಗಷ್ಟೇ ನಟ ಸುದೀಪ್ (Sudeep). ಬಿಜೆಪಿ ಪರ ಪ್ರಚಾರಕ್ಕೆ ನಿಂತಿದ್ದು ದೊಡ್ಡ ಮಟ್ಟದ ಸುದ್ದಿಯಾಗಿದ್ದು ಇದೀಗ ಅವರಿಗೆ ಬೆದರಿಕೆ ಪತ್ರ ಒಂದು ಬಂದಿದ್ದು ಎಲ್ಲೆಡೆ ಈ ವಿಚಾರ ಚರ್ಚೆಗೆ ಗ್ರಾಸವಾಗಿದೆ. ನಟ ಕಿಚ್ಚ ಸುದೀಪ್ ಗೆ ಬೆದರಿಕೆ ಪತ್ರ ಬಂದ ಹಿನ್ನೆಲೆಯಲ್ಲಿ ಪುಟ್ಟೇನಹಳ್ಳಿ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಲೆಟರ್ ನಲ್ಲಿ ಇದ್ದದ್ದೇನು?
ಕಿಚ್ಚ ಸುದೀಪ್ ಅವರ ಖಾಸಗಿ ವೀಡಿಯೋ ಲೀಕ್ ಮಾಡುತ್ತೇವೆ ಎಂದು ಅವ್ಯಾಚವಾಗಿ ಬೈದು ನಿಂಧಿಸಿ ಲೆಟರ್ ಅನ್ನು ಬರೆಯಲಾಗಿದೆ ಎಂದು ತಿಳಿದು ಬಂದಿದ್ದು ಪತ್ರ ಬರೆದವರ ವಿರುದ್ಧ ಕಿಚ್ಚ ಸುದೀಪ್ ಅವರ ಮ್ಯಾನೇಜರ್ ಜಾಕ್ ಮಂಜು (Manager Jack Manju) ಅವರು ಠಾಣೆಯಲ್ಲಿ ಕೇಸ್ ಹಾಕಿದ್ದಾರೆ.
ಕಿಚ್ಚನ ಖಡಕ್ ವಾರ್ನಿಂಗ್
ಪ್ರಕರಣ ದಾಖಲಾಗುತ್ತಿದ್ದಂತೆ ಬಹುತೇಕ ಮಾಧ್ಯಮದವರು ಕಿಚ್ಚ ಸುದೀಪ್ ಅವರ ಮನೆ ಮುಂದೆ ಬಂದು ನಿಂತಿದ್ದಾರೆ. ಈ ಮೂಲಕ ಪ್ರಕರಣದ ಬಗ್ಗೆ ಮನ ಬಿಚ್ಚಿ ಮಾತನಾಡಿದ್ದಾರೆ. ಈ ಕೆಲಸ ಯಾರು ಮಾಡಿದ್ದಾರೆಂದು ನನಗೂ ಗೊತ್ತು. ಇದಕ್ಕೂ ರಾಜಕೀಯಕ್ಕೆ ಯಾವುದೇ ಸಂಬಂಧ ಇಲ್ಲ. ಎಲ್ಲ ಗಿಮಿಕ್ ಅಷ್ಟೇ ನಾನು ಯಾರಿಗೂ ಹೆದರೊಲ್ಲ ಸರ್ ಹಾಗಾಗಿ ಬರೆದವರಿಗೆ ಉತ್ತರ ಅವರದ್ದೇ ಸ್ಟೈಲ್ ನಲ್ಲಿ ಕೊಟ್ಟೆ ಕೊಡ್ತೆನೆ. ಈಗ ಬೇಡ ಸ್ವಲ್ಪ ದಿನದಲ್ಲೇ ಎಲ್ಲ ಬಹಿರಂಗ ಮಾಡೋಣ ಬಿಡಿ ಸರ್. ಮನೆ ಅಡ್ರೆಸ್ ಗೊತ್ತಿದೆ ಅಂತ ಪೋಸ್ಟ್ ಮಾಡೊದಲ್ಲ ಪೋಸ್ಟ್ ಮಾಡಿದ ಮೇಲೆ ಆಗೋ ಪರಿಣಾಮನೂ ಕಳುಹಿಸಿದವರಿಗೆ ಅಂದಾಜು ಇರಬೇಕಿತ್ತು. ಇನ್ನು ನನ್ನ ಕೈಲಿ ಯಾವುದು ಇಲ್ಲ ಎಂದು ಖಡಕ್ ಆಗೇ ಉತ್ತರಿಸಿದ್ದಾರೆ.
ಈ ಮೂಲಕ ಕಿಚ್ಚನ ರಾಜಕೀಯ ರಂಗದ ದ್ವೇಷಿಗಳು ಈ ಕೆಲಸ ಮಾಡಿದ್ದಾರೆ ಎನ್ನೊ ಮಾತು ಸಹ ಕೇಳಿಬರುತ್ತಿದೆ. ಅಷ್ಟು ಮಾತ್ರವಲ್ಲದೆ ಕಳೆದ ತಿಂಗಳಷ್ಟೇ ಸುದೀಪ್ ಅವರ ಕಾರು ಚಾಲಕ (Car Driver) ನನ್ನು ಕಾರಣ ನಿಮಿತ್ತ ಕೆಲಸದಿಂದ ವಜಾ ಮಾಡಲಾಗಿದ್ದು ಇದು ಆ ವ್ಯಕ್ತಿಯ ಕೈವಾಡ ಇರಬಹುದೇ ಎಂದು ತನಿಖೆ ನಡೆಯುತ್ತಿದ್ದು ಕೆಲವರ ಮೇಲೆ ಎಫ್ಐಆರ್ ದಾಖಲಿಸಲಾಗಿದೆ.