ಕನ್ನಡ ಕಿರುತೆರೆಯ ಜೋಡಿ ನಿವೇದಿತ ಗೌಡ ಹಾಗೂ ಚಂದನ್ ಶೆಟ್ಟಿ (Chandan Shetty). ಪ್ರೀತಿಸಿ ಮದುವೆ ಆಗಿರುವ ಈ ಜೋಡಿ ಇದೀಗ ಮೂರನೇ ವರ್ಷದ ವಾರ್ಷಿಕೋತ್ಸವ ಆಚರಿಸಿಕೊಳ್ಳುತ್ತಿದ್ದಾರೆ. ಗಿಚ್ಚಿ ಗಿಲಿ ಗಿಲಿ ಸೀಸನ್ 2 (Gicchi Gili Gili S02) ನಿವೇದಿತ ಗೌಡ (Niveditha Gowda) ಕೂಡ ಸ್ಪರ್ಧಿಸುತ್ತಿದ್ದಾರೆ. ವೇದಿಕೆಯಲ್ಲಿ ಫ್ಯಾಮಿಲಿ ರೌಂಡ್ ನಡೆಯುತ್ತಿರುವ ಸಂದರ್ಭದಲ್ಲಿ ನಿವೇದಿತಾ ಗೌಡ ಅವರಿಗೆ ಚಂದನ್ ಸರ್ಪ್ರೈಸ್ ಕೊಟ್ಟಿದ್ದಾರೆ.
ಫ್ಯಾಮಿಲಿ ರೌಂಡ್ ನಲ್ಲಿ ನಿವೇದಿತಾ ಗೌಡ ತಾಯಿ ಪಾತ್ರ ಮಾಡಿದ್ದರು. ತಮಾಷೆಯ ಜೊತೆಗೆ ಭಾವನಾತ್ಮಕವಾಗಿಯೂ ಇತ್ತು ಈ ಸ್ಕಿಟ್. ಇನ್ನು ಸ್ಕಿಟ್ ಮುಗಿದ ನಿರಂಜನ್ ದೇಶಪಾಂಡೆ ನಿಮ್ಮ ಮಗುವಿನ ಎಂಟ್ರಿ ಯಾವಾಗ ಎಂದು ನಿವೀ ಅವರನ್ನು ಪ್ರಶ್ನೆ ಮಾಡಿದ್ದಾರೆ. ಇದಕ್ಕೆ ಉತ್ತರಿಸಿರುವ ನಿವೇದಿತ ಗೌಡ ಸ್ವಲ್ಪ ವರ್ಷ ಆದ್ಮೇಲೆ ಮಗು ಮಾಡಿಕೊಳ್ಳುತ್ತೇನೆ. ಮಗು ಸಾಕಬಹುದು ಎನ್ನುವ ನಂಬಿಕೆ ಮೊದಲು ಬರಬೇಕು ನನಗೆ ಹೆಣ್ಣು ಮಗು ಆಗಬೇಕು ನೋಡಲು ನನ್ನಂತೆ ಇರಬೇಕು. ಹೈಟ್ ಚಂದನ್ ಹಾಗೆ ಇರಬೇಕು. ಬೆಕ್ಕಿನ ಕಣ್ಣು ನನಗೆ ಇಷ್ಟ. ಕಣ್ಣು ಮೂಗು ನನ್ನ ರೀತಿಯೇ ಇರಬೇಕು ಎಂದು ನೀವು ಹೇಳಿದ್ದಾರೆ.
ನಮಗೂ ನನ್ನ ಮಗಳ ಹಾಗೆಯೇ ಇರಬೇಕು ಎಂದು ನಿವೇ ಪೋಷಕರು ಕೂಡ ಹೇಳಿದ್ದಾರೆ ಅವರಿಗೂ ಹೆಣ್ಣು ಪಾಪು ಹುಟ್ಟಬೇಕು ಎನ್ನುವುದೇ ಅಭಿಲಾಷೆ. ಇನ್ನು ಉತ್ತಮ ಮೂರನೇ ವಾರ್ಷಿಕೋತ್ಸವದ ಸಮಯದಲ್ಲಿ ಚಂದನ ಶೆಟ್ಟಿ ನಿವೇದಿತಾ ಗೌಡ ಅವರಿಗೆ ಸರ್ಪ್ರೈಸ್ ಕೊಡುವುದಕ್ಕಾಗಿ ರಾಗಿ ಮುದ್ದೆಯಿಂದ ಕೇಕ್ ತಯಾರಿಸಿದ್ದೇನೆ ಎಂದು ಹಾಸ್ಯ ಮಾಡಿದರು ನಂತರ ಕೇಕ್ ಕತ್ತರಿಸಿ ಸೆಲೆಬ್ರೇಟ್ ಮಾಡಲಾಗಿದೆ. ಹ್ಯಾಪಿ ಆನಿವರ್ಸರಿ ಪಪ್ಪಿ ಎಂದು ಕೇಕ್ ಮೇಲೆ ಚಂದನ್ ಬರೆಸಿದ್ದರು ಇನ್ನು ಈ ಕೇಕ್ ತಂದಿದ್ದು, ಚಂದನ್ ಶೆಟ್ಟಿ ಗಿಚ್ಚಿ ಗಿಲಿ ಗಿಲಿ ವೇದಿಕೆ ಮೇಲೆ ಬಂದಿದ್ದು ಎಲ್ಲವೂ ನಿವೇದಿತಾ ಅವರಿಗೆ ಸರ್ಪ್ರೈಸ್ ಆಗಿತ್ತು. ಬೇರೆ ಎಲ್ಲೋ ಮ್ಯೂಸಿಕ್ ಕಾರ್ಯಕ್ರಮಕ್ಕೆ ಹೋಗಬೇಕು ಎಂದು ಹೇಳಿದ ಚಂದನ್ ಶೆಟ್ಟಿ ಈ ವೇದಿಕೆಗೆ ಬಂದಿದ್ದಾರೆ ನಿವೇದಿತಾ, ಚಂದನ್ ಶೆಟ್ಟಿ ತಮ್ಮ ಮೂರನೇ ವಾರ್ಷಿಕೋತ್ಸವ (Third Anniversary) ಆಚರಣೆಯಲ್ಲಿ ಇರುವುದಿಲ್ಲ ಎಂದು ಬೇಸರಪಟ್ಟಿಕೊಂಡಿದರಂತೆ.
ಇನ್ನು ತಮ್ಮ ಮದುವೆಯ ಸಂದರ್ಭದಲ್ಲಿ ಮಾತನಾಡಿದ ಚಂದನ್ ಶೆಟ್ಟಿ, ಮೊದಲು ನಿವಿಯನ್ನು ನೋಡಿದಾಗ ಕ್ಯೂಟ್ ಅನಿಸುತ್ತಿತ್ತು. ಬಿಗ್ ಬಾಸ್ ಮನೆಯಲ್ಲಿ ಮದುವೆ ಆಗುವ ಯೋಚನೆ ಇರಲಿಲ್ಲ. ಹೊರಗೆ ಬಂದಾಗ ಫೀಲಿಂಗ್ ಶುರುವಾಯ್ತು. ಪ್ರೊಪೋಸ್ ಮಾಡಿದೆ ಈಗ ಒಬ್ಬರನ್ನೊಬ್ಬರು ಅರ್ಥ ಮಾಡಿಕೊಂಡು ಜೀವನ ಸಾಗಿಸುತ್ತಿದ್ದಾರೆ ಎಂದು ಚಂದನ್ ಶೆಟ್ಟಿ ಹೇಳಿದ್ದಾರೆ ಅಲ್ಲದೆ ಯಾವುದೇ ಸಂದರ್ಭದಲ್ಲಿಯೂ ನಿನ್ನ ಕೈ ಬಿಡುವುದಿಲ್ಲ ನಾವು ಜೊತೆಯಾಗಿ ಇರೋಣ ಎಂದು ನಿವಿಗೆ ಪ್ರೀತಿಯ ಮಾತುಗಳನ್ನ ಆಡಿದ್ದಾರೆ ಚಂದನ್ ಶೆಟ್ಟಿ.