Yuva Rajkumar: ಯುವ ರಾಜಕುಮಾರ್ ಗೆ ಬಾಡಿಗಾರ್ಡ್ ಆಗ್ತೀರಾ ಕೇಳಿದ್ದಕ್ಕೆ ಅಪ್ಪು ಗನ್ ಮ್ಯಾನ್ ಖಡಕ್ ಉತ್ತರ.

Advertisement
ಛಲಪತಿ (Chalpathi) ಅವರು ಪುನೀತ್ ರಾಜಕುಮಾರ್ (Puneeth Rajkumar) ಅವರ ಪ್ರೀತಿಯ ಬಾಡಿಗಾರ್ಡ್ (Bodyguard) ಆಗಿದ್ದು ಪ್ರತಿ ದಿನ ಸಹ ಅಪ್ಪು (Appu)ಅವರು ಚನ್ನಾಗಿ ಆರೋಗ್ಯವಾಗಿ ಇದ್ದರು ಅಂದರೆ ಅಪ್ಪು ಅವರನ್ನ ಚನ್ನಾಗಿ ನೋಡಿಕೊಳ್ಳುತ್ತಿದ್ದು ಈ ಛಲಪತಿ ಅವರೇ. ಹೌದು ಇವರು ಅಪ್ಪು ಅವರ ನೆಚ್ಚಿನ ಬಾಡಿಗಾರ್ಡ್ ಆಗಿದ್ದು ಛಲಪತಿ ಯವರು ಮೊದಲು ಮಿಲಿಟರಿಯಲ್ಲಿ ಕೆಲಸವನ್ನ ಮಾಡುತ್ತಿದ್ದರು. ಸುಮಾರು ನಾಲ್ಕರಿಂದ ಐದು ವರ್ಷಗಳ ಕಾಲ ಅಪ್ಪು ಅವರ ಜೊತೆಗೆ ಕೆಲಸವನ್ನ ಮಾಡಿದ್ದರು ಛಲಪತಿ.
ಗನ್ ಮ್ಯಾನ್ (Gunman) ಹಾಗು ಬಾಡಿಗಾರ್ಡ್ ಎರಡು ಕೂಡ ಈ ಛಲಪತಿ ಅವರೆ ಆಗಿದ್ದರು. ಅಪ್ಪು ಅವರು ಎಲ್ಲೆ ಇದ್ದರೂ ಸಹ ಅವರನ್ನ ರಕ್ಷಣೆ ಮಾಡುತ್ತಿದ್ದು ಈ ಛಲಪತಿ ಅವರೇ. ಪ್ರತಿದಿನ ತುಂಬಾನೇ ಚನ್ನಾಗಿ ಅಪ್ಪು ಅವರನ್ನ ನೋಡಿಕೊಳ್ಳುತ್ತಿದ್ದರು. ಅಪ್ಪು ಅಗಲಿದಾಗ ಅವರ ನೋವು ಸಂಕಟವನ್ನ ನೀವು ಖಂಡಿತ ನೋಡಿರುತ್ತೀರಾ. ಮಾದ್ಯಮದ (Media) ಮೂಲಕ ಅಪ್ಪು ಪಾರ್ಥಿವ ಶರೀರದ ಮುಂದೆ ಕುಳಿತು ಎಷ್ಟರಮಟ್ಟಿಗೆ ಕಣ್ಣೀರಿಟ್ಟಿದ್ದರು ಎಂದು. ಇಂದಿಗೂ ಕೂಡ ಈ ಒಂದು ದುಃಖದಿಂದ ಹೊರಬರಲು ಅವರಿಂದ ಸಾಧ್ಯವಾಗುತ್ತಿಲ್ಲ ಕಣ್ಣೀರಲ್ಲೇ ಕೈ ತೊಳೆಯುತ್ತಿದ್ದಾರೆ.
ಇನ್ನು ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರು ನಮ್ಮನ್ನೆಲ್ಲಾ ಅಗಲಿ ಅದಾಗಲೇ ಒಂದುವರೆ ವರುಷ ಕಳೆದು ಹೋಗಿದ್ದು ಅಪ್ಪು ಅವರ ಅಗಲಿಕೆಯ ನೋವನ್ನು ಇನ್ನು ಸಹ ದೊಡ್ಡ ಮನೆಯಾಗಲಿ ಅಥವಾ ಅವರ ಅಭಿಮಾನಿಗಳಿಂದ ಮರೆಯುವುದಕ್ಕೆ ಸಾಧ್ಯವಾಗುತ್ತಿಲ್ಲ.
ಹೌದು ಪುನೀತ್ ರಾಜಕುಮಾರ್ ಅವರು ಕರುನಾಡಿಗರ ಮನೆ ಮನಸ್ಸಿನಲ್ಲಿ ಸದಾ ಅಚ್ಚಳಿಯದೆ ಚಿರಕಾಲ ಉಳಿದಿದ್ದು ಅವರು ನಮ್ಮ ನಡುವೆ ದೈಹಿಕವಾಗಿ ಇಲ್ಲ ಎಂದರು ಕೂಡ ಅವರು ಮಾಡಿರುವ ಒಳ್ಳೆಯ ಕಾರ್ಯಗಳ ಮೂಲಕವಾಗಿ ಅವರು ನಮ್ಮ ನಡುವೆ ಇದ್ದಾರೆ ಎಂಬ ರೀತಿಯಲ್ಲಿ ಭಾಸವಾಗುತ್ತಿದ್ದು ಅವರು ಇಲ್ಲ ಎಂದು ನೆನೆಸಿಕೊಳ್ಳುವುದಕ್ಕೆ ಎಲ್ಲರಿಗೂ ಕೂಡ ದುಃಖವಾಗುತ್ತಿದೆ.
Advertisement
ಅದರಲ್ಲಿಯೂ ಕೂಡ ಅವರ ಆಪ್ತರಿಗೆ ಅವರ ಕುಟುಂಬದವರಿಗೆ ತುಂಬಾ ದುಃಖ ಉಂಟಾಗುತ್ತದೆ. ಸದ್ಯ ಪುನೀತ್ ರಾಜಕುಮಾರ್ ಅವರ ಬಾಡಿಗಾರ್ಡ ಛಲಪತಿ ಕೂಡ ಇದೇ ಸ್ಥಿತಿಯಲ್ಲಿದ್ದಾರೆ.
ಆದರೆ ಯುವರಾಜ್ ಕುಮಾರ್ (Yuva Rajkumar) ನಿಮ್ಮನ್ನ ಬಾಡಿಗಾರ್ಡ ಆಗಿ ಕರಿದ್ರೆ ಹೋಗ್ತೀರಾ ಎಂಬ ಪ್ರಶ್ನಗೆ ಛಲಪತಿ ಏನು ಹೇಳುತ್ತಾರೆ ಗೊತ್ತಾ? ಖಂಡಿತವಾಗಿಯೂ ಇಲ್ಲ. ಯಾಕೆಂದರೆ ಇದರ ಬಗ್ಗೆ ಬಹಳ ಆಳವಾಗಿ ಯೋಚನೆ ಮಾಡಿದ್ದೇನೆ. ನಾನು ಯಜಮಾನ್ರು(ಅಪ್ಪು) ಕ್ಯಾರವನ್ ನಿಂದ ರೆಡಿಯಾಗಿ ಬರುವವರಿಗೂ ಸಿನಿಮಾ ಸೆಟ್ ಗೆ ಹೋಗುತ್ತಿರಲಿಲ್ಲ.
ಯಜಮಾನ್ರು ಜೊತೆಗೆ ಹೊಗುತ್ತಿದೆ ಯಜಮಾನ್ರು ಜೊತೆಗೆ ಆಚೆಗೆ ಬರುತ್ತಿದೆ. ನನ್ನನ್ನ ಅಲ್ಲಿ ಬಿಟ್ಟು ಯಜಮಾನ್ರು ಬೇರೆ ಕಡೆ ಹೋದರು ಕೂಡ ನಾನು ಸೆಟ್ ಅಲ್ಲಿ ಇರುತ್ತಿರಲಿಲ್ಲ. ಯಾವಗ್ಲೂ ಯಜಮಾನ್ರು ಜೊತೆ ಇರುತ್ತಿದೆ. ಈಗ ಅವರಿಲ್ಲದೇ ಶೂಟಿಂಗ್ ಸೆಟ್ ಗೆ ಹೋಗೋಕೆ ಕಷ್ಟವಾಗುತ್ತದೆ.
ಯುವ ಅಣ್ಣ ಏನಾದರು ನನ್ನ ಕೇಳಿದರೆ ನಾನು ರಿಕ್ವೇಸ್ಟ್ ಮಾಡಿಕೊಳ್ಳುತ್ತೇನೆ ಆಗಲ್ಲ ಅಂತ. ಕಷ್ಟ ಆಗುತ್ತೆ ಎಂದಿದ್ದಾರೆ ಛಲಪತಿ. ಅಲ್ಲದೇ ಯುವ ರವರ ಸಿನಿಮಾಗೆ ಅಭಿಮಾನಿಯಾಗಿ ಕಾಯುತ್ತಿದ್ದೇನೆ ಎಂದು ಕೂಡ ಹೇಳಿದ್ದಾರೆ. ಸದ್ಯ ಈ ಸಂದರ್ಶನದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.
Advertisement