Karnataka Times
Trending Stories, Viral News, Gossips & Everything in Kannada

Yash: ರಾಮಾಯಣ ಚಿತ್ರದಲ್ಲಿ ರಾಕಿಂಗ್ ಸ್ಟಾರ್ ಯಶ್ ರಾವಣ ಪಾತ್ರದಲ್ಲಿ ನಟಿಸಲಿದ್ದರಾ? ಹೊರಬಿತ್ತು ಮಾಹಿತಿ

Advertisement

ರಾಮಾಯಣ (Ramayana) ಹಾಗೂ ಮಹಾಭಾರತ (Mahabharata) ಅಂತಹ ಐತಿಹಾಸಿಕ ಧಾರಾವಾಹಿಗಳು ಈಗಾಗಲೇ ಸಿದ್ಧವಾಗಿ ತೆರೆಕಂಡಿದೆ
ಈ ಮಹಾಕಾವ್ಯಗಳ ಕಥೆಯ ಒಂದೆಳೆ ಇಟ್ಟುಕೊಂಡು ಸಿನಿಮಾ ಸಿದ್ಧಪಡಿಸಿದ ಉದಾಹರಣೆಯೂ ಇದೆ. ಐತಿಹಾಸಿಕ ಸಿನಿಮಾಗಳಾದರೂ ಆಗೊಮ್ಮೆ ಈಗೊಮ್ಮೆ ಬಾಲಿವುಡ್‌ನಲ್ಲಿ (Bollywood) ಬರುತ್ತಿತ್ತು ಆದರೆ ಪೌರಾಣಿಕ ಕತೆಗಳನ್ನು ಬಿಟ್ಟೇ ಬಿಟ್ಟಿತ್ತು, ಆದರೇ ಈಗ ಹಠಾತ್ತನೆ ಪೌರಾಣಿಕ ಕತೆಗಳ ಮೇಲೆ ಬಾಲಿವುಡ್‌ಗೆ ಪ್ರೀತಿ ಹೆಚ್ಚಾಗಿದೆ. ಅಷ್ಟೆ ಅಲ್ಲ ಇತ್ತೀಚೆಗೆ ಪ್ರೇಕ್ಷಕರ ಕುತೂಹಲ ಹೆಚ್ಚಿಸುವಂತಹ ಐತಿಹಾಸಿಕ ಸಿನಿಮಾಗಳು ಸ್ಯಾಂಡಲ್ ವುಡ್ (Sandalwood) ಅಂಗಳದಲ್ಲಿಯು ಸದ್ದು ಮಾಡುತ್ತಿದೆ.

ಬಾಲಿವುಡ್ ಆಕ್ಷನ್ ಡ್ರಾಮಾಗಳು, ಪೌರಾಣಿಕ, ಐತಿಹಾಸಿಕ ಕಥೆಯುಳ್ಳ ಸಿನಿಮಾಗಳತ್ತ ಮುಖ ಮಾಡಿದೆ. ಮಹಾಭಾರತ ಸಿನಿಮಾವನ್ನು ಬಾಲಿವುಡ್‌ನಲ್ಲಿ ನಿರ್ಮಾಣ ಮಾಡಬೇಕು ಎಂಬುದಾಗಿ ಚರ್ಚೆ ಬಹು ದಿನಗಳಿಂದಲೂ ನಡೆಯುತ್ತಲೇ ಇದೆ. ಚಿತ್ರದಲ್ಲಿ ಯಾರೆಲ್ಲ ನಾಯಕರು ನಟಿಸ್ತಾರೇ, ಅನ್ನೋದು ಅಭಿಮಾನಿಗಳ ಪ್ರಶ್ನೆಯಾಗಿದೆ. ರಾಮಾಯಣ ಚಿತ್ರಕ್ಕೆ ಖ್ಯಾತ ನಿರ್ದೇಶಕ ನಿತೀಶ್ ತಿವಾರಿ (Nitesh Tiwari) ಆ್ಯಕ್ಷನ್ ಕಟ್ ಹೇಳುತ್ತಿದ್ದಾರೆ. ಈ ಸಿನಿಮಾ ಅನೌನ್ಸ್ ಆಗಿದೆ ಆದರೆ ಸ್ಟಾರ್ ಕಾಸ್ಟ್ ಯಾರು ಅನ್ನೋದು ಫೈನಲ್ ಆಗಿಲ್ಲ. ಹಾಗಾಗಿ ಅನೇಕ ಸ್ಟಾರ್‌ಗಳ ಹೆಸರು ಇದರಲ್ಲಿ ಕೇಳಿ ಬರುತ್ತಿದೆ. ಅಭಿಮಾನಿಗಳಂತೂ ವಿವಿಧ ಸ್ಟಾರ್ ಗಳ ಹೆಸರು ಹೇಳಿ ಕಾಮೆಂಟ್ ಮಾಡುತ್ತಿದ್ದಾರೆ.

Advertisement

ಯಶ್ ರಾವಣ ಪಾತ್ರದಲ್ಲಿ ನಟಿಸ್ತಾರಾ ?

ಚಿತ್ರರಂಗದಲ್ಲಿ ಸಂಚಲನ ಮೂಡಿಸಿ ಅತಿ ಹೆಚ್ಚು ಗಳಿಕೆ ಮಾಡಿದ ಭಾರತೀಯ ಚಲನಚಿತ್ರಗಳಲ್ಲಿ ಕೆಜಿಎಫ್​ ಒಂದಾಗಿದೆ. ಕೆಜಿಎಫ್​ 2 ರಿಲೀಸ್​ ಆಗಿ ಸಕ್ಸಸ್​ ಕಂಡು ಹಲವು ಸಮಯ ಕಳೆದಿದೆ. ಆದ್ರೆ ರಾಕಿಂಗ್ ಸ್ಟಾರ್ ಯಶ್ (Rocking Star Yash) ಮುಂದಿನ ಸಿನಿಮಾ ಯಾವುದು ಎನ್ನುವುದನ್ನು ಬಹಿರಂಗಪಡಿಸಿಲ್ಲ, ರಾಮಾಯಣ ಸಿನಿಮಾದಲ್ಲಿ ರಾವಣ ಪಾತ್ರಕ್ಕೆ ಯಶ್ ಹೆಸರು ಕೇಳಿಬರುತ್ತಿದೆ. ರಾಮಾಯಣ ಸಿನಿಮಾಗೆ ರಾಮನ ಪಾತ್ರಕ್ಕೆ ಬಾಲಿವುಡ್ ಸ್ಟಾರ್ ರಣಬೀರ್ ಕಪೂರ್ (Ranbir Kapoor) ಅವರನ್ನು ಅಪ್ರೋಚ್ ಮಾಡಲಾಗಿದೆ, ರಾವಣನ ಪಾತ್ರಕ್ಕೆ ಕನ್ನಡದ ಸ್ಟಾರ್ ಕೆಜಿಎಫ್ ಹೀರೋ ರಾಕಿ ಬಾಯ್ ಯಶ್ ಅವರಿಗೆ ಆಪ್ರೋಚ್ ಮಾಡಲಾಗಿದೆ ಎನ್ನುವ ಸುದ್ದಿ ಇದೆ, ಯಶ್ ನಟೀಸ್ತಾರಾ ಅನ್ನೋದು ಕಾದು ನೋಡ್ಬೇಕು.

ನಟ ರಣಬೀರ್ ಕೊನೆಯ ಬಾರಿಗೆ ಬ್ರಹ್ಮಾಸ್ತ್ರ ಚಿತ್ರದಲ್ಲಿ ಕಾಣಿಸಿಕೊಂಡಿದ್ದರು. ತು ಜೂಟಿ ಮೈ ಮಕ್ಕಾರ್ (Tu Jhoothi Main Makkaar) ಚಿತ್ರ ನಟ ಸಂದೀಪ್ ರೆಡ್ಡಿ ವಂಗಾ ಅವರ ಅನಿಮಲ್ ಚಿತ್ರದಲ್ಲಿಯು ಬ್ಯುಸಿ ಇದ್ದಾರೆ, ಇದರಲ್ಲಿ ರಶ್ಮಿಕಾ ಮಂದಣ್ಣ (Rashmika Mandanna), ಅನಿಲ್ ಕಪೂರ್ (Anil Kapoor) ಮತ್ತು ಬಾಬಿ ಡಿಯೋಲ್ (Bobby Deol) ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ. ರಾಮಾಯಣ ಎಂದರೆ ಅಲ್ಲಿ ಸೀತೆಯ ಪಾತ್ರ ಬಹಳ ಮಹತ್ವ ಪಡೆದುಕೊಳ್ಳಲಿದೆ. ಈ ಕಾರಣಕ್ಕೆ ಈ ಪಾತ್ರಕ್ಕಾಗಿ ನಿರ್ಮಾಪಕರು ಹುಡುಕಾಟ ನಡೆಸಿದ್ದಾರೆ. ಇದರ ಜತೆಗೆ ಇನ್ನೂ ಕೆಲ ಪ್ರಮುಖ ಪಾತ್ರಗಳಿಗೆ ಆಯ್ಕೆ ಪ್ರಕ್ರಿಯೆ ನಡೆಯಬೇಕಿದೆ ಎನ್ನಲಾಗಿದೆ. ಇದರ ಬಂಡವಾಳ ಬರೋಬ್ಬರಿ 750 ಕೋಟಿ ರೂಪಾಯಿ ಅನ್ನಲಾಗಿದೆ. ಇಷ್ಟೊಂದು ಬಜೆಟ್ ಹಾಕ್ತರಾ? ಎಂಬುದಾಗಿ ಎಲ್ಲರ ಹುಬ್ಬೇರಿಸುವಂತೆ ಮಾಡಿದೆ. ಚಿತ್ರದಲ್ಲಿ ಯಾರೆಲ್ಲ ನಟರು ನಟಿಸ್ತಾರೇ ಅನ್ನೋದು ಕಾದು ನೋಡ್ಬೇಕು.

Advertisement

Leave A Reply

Your email address will not be published.