Srinidhi Shetty: ಕೆಜಿಎಫ್ ನಟಿ ಶ್ರೀನಿಧಿ ಶೆಟ್ಟಿಗೆ ಏನಾಯ್ತು? ನಿಜಕ್ಕೂ ಬೇಸರದ ಸಂಗತಿ

Advertisement
ನಮ್ಮ ಕನ್ನಡ ಚಿತ್ರರಂಗದ (KFI) ಖ್ಯಾತ ನಟಿ ಎಂದೆನಿಕೊಂಡಿರುವ ನಟಿ ಶ್ರೀನಿಧಿ ಶೆಟ್ಟಿ (Srinidhi Shetty) ಅಭಿನಯದ ಕೆಜಿಎಫ್: ಚಾಪ್ಟರ್ 1 (KGF Chapter1) ಮತ್ತು ಕೆಜಿಎಫ್: ಚಾಪ್ಟರ್ 2 (KGF Chapter 2) ಚಿತ್ರಗಳು ತೆರೆಕಂಡಿದ್ದು ಇವೆರಡೂ ಚಿತ್ರಗಳಿಂದ ಶ್ರೀನಿಧಿ ಶೆಟ್ಟಿಗೆ ಇನ್ನಿಲ್ಲದಷ್ಟು ಜನಪ್ರಿಯತೆ ಸಿಕ್ಕಿದೆ. ಇನ್ನು ಬೇರೆ ಯಾರಾದರೂ ನಟಿಯರಾಗಿದ್ದರೆ ಸಿಕ್ಕಿರುವ ಈ ಜನಪ್ರಿಯತೆಗೆ ಸಾಲು ಸಾಲು ಚಿತ್ರಗಳನ್ನು ಮಾಡುತ್ತಿದ್ದರು.
ಆದರೆ ಮಾತ್ರ ಶ್ರೀನಿಧಿ 6-7 ವರ್ಷ ಸಮಯವನ್ನು ಕೇವಲ ಕೆಜಿಎಫ್ ಸರಣಿಗೆ (KGF Series) ಮೀಸಲಿಟ್ಟಿದ್ದು ಇದರ ನಡುವೆ ಅವರು ಒಪ್ಪಿಕೊಂಡಿದ್ದು ತಮಿಳಿನ ಕೋಬ್ರಾ (Cobra)ಸಿನಿಮಾವನ್ನು ಮಾತ್ರ. ಇದು ಚಿಯಾನ್ ವಿಕ್ರಮ್ (Vikram) ಹೀರೋ ಆಗಿರುವ ಸಿನಿಮಾವಾಗಿದ್ದು ಈ ಸಿನಿಮಾಗೆ ಶ್ರೀನಿಧಿ ಶೆಟ್ಟಿ ಪಡೆದ ಸಂಭಾವನೆ ಎಷ್ಟು ಎಂಬ ವಿಚಾರ ಬಾರಿ ಸದ್ದು ಮಾಡಿತ್ತು.
ಶ್ರೀನಿಧಿ ಶೆಟ್ಟಿ ಆಸಲಿ ಸಂಭಾವನೆ?
ಇನ್ನು ಈ ಹಿಂದಿನ ಕೆಜಿಎಫ್ ಚಾಪ್ಟರ್ 2 ಗೆ ಶ್ರೀನಿಧಿ ಪಡೆದಿದ್ದ ಸಂಭಾವನೆಗಿಂತಲೂ ಕೂಡ ಎರಡು ಪಟ್ಟು ಅಧಿಕ ಹಣ ಕೋಬ್ರಾ ಸಿನಿಮಾದಿಂದ ಶ್ರೀನಿಧಿಗೆ ಸಿಕ್ಕಿದೆ ಎನ್ನಲಾಗಿದೆ. ಇನ್ನು ರಾಕಿಂಗ್ ಸ್ಟಾರ್ ಯಶ್ (Yash) ಹೀರೋ ಆಗಿದ್ದ ಕೆಜಿಎಫ್: ಚಾಪ್ಟರ್ 2 ಸಿನಿಮಾದಲ್ಲಿ ರೀನಾ ದೇಸಾಯಿ (Reena Desai) ಎಂಬಯವಂತಹ ಪಾತ್ರದಲ್ಲಿ ಶ್ರೀನಿಧಿ ಕಾಣಿಸಿಕೊಂಡಿದ್ದು ಆ ಪಾತ್ರ ಮಾಡಲು ಅವರು ಭರ್ತಿ 3 ಕೋಟಿ ರೂ. ಸಂಭಾವನೆ ಪಡೆದುಕೊಂಡಿದ್ದರು ಎಂಬ ಮಾಹಿತಿ ಇದೆ. ಆಧೆ ವಿಕ್ರಮ್ ಜೊತೆಗೆ ಕೋಬ್ರಾ ಸಿನಿಮಾದಲ್ಲಿ ನಟಿಸಿದ್ದಕ್ಜೆ ಶ್ರೀನಿಧಿ ಅದಕ್ಕಿಂತಲೂ ಎರಡು ಪಟ್ಟು ಅಧಿಕ ಸಂಭಾವನೆ ಪಡೆದುಕೊಂಡಿದ್ದಾರೆ ಎನ್ನಲಾಗಿದೆ.
ಕೋಬ್ರಾ ಸಿನಿಮಾ ಸಂಭಾವನೆ ಎಷ್ಟು?
ಕೋಬ್ರಾ ಚಿತ್ರಕ್ಕಾಗಿ ಶ್ರೀನಿಧಿಗೆ ಬರೋಬ್ಬರಿ 6ರಿಂದ 7 ಕೋಟಿ ರೂ. ಸಂಭಾವನೆ ನೀಡಲಾಗಿದೆ ಎಂಬ ಮಾಹಿತಿ ಸಿಕ್ಕಿದ್ದು ಇನ್ನು ಮೂರನೇ ಸಿನಿಮಾಗೆ ಇಷ್ಟೊಂದು ಸಂಭಾವನೆ ಸಿಕ್ಕಿರುವುದು ನಿಜಕ್ಕೂ ಅಚ್ಚರಿ ಮೂಡಿಸಿದೆ. ಕೆಜಿಎಫ್ ಚಾಪ್ಟರ್-2 ಕ್ಲೈಮ್ಯಾಕ್ಸ್‌ನಲ್ಲಿ ಚಮಕ್ ಕೊಟ್ಟಿದ್ದ ತಂಡ ಚಾಪ್ಟರ್- 3 ಬಗ್ಗೆ ಕುತೂಹಲ ಮೂಡುವಂತೆ ಮಾಡಿದೆ ಎನ್ನಬಹುದು. ಇನ್ನು ಸರಣಿಯ ಮತ್ತೊಂದು ಸಿನಿಮಾ ಯಾವಾಗ ಬರುತ್ತೋ ಎಂದು ಸಿನಿರಸಿಕರು ಕಾಯುತ್ತಿದ್ದು ಮುಂದಿನ ಸೀಕ್ವೆಲ್‌ನಲ್ಲಿ ರಾಕಿ ಪತ್ನಿ ರೀನಾ ಪಾತ್ರ ಇರುತ್ತಾ? ಎನ್ನುವ ಪ್ರಶ್ನೆಗೆ ಇದೀಗ ಮೂಡಿದೆ.
ನಟಿ ಶ್ರೀನಿಧಿ ಶೆಟ್ಟಿ ಲಕ್ ಕಡಿಮೆ ಆಯ್ತಾ!
ಇನ್ನು ನಟಿ ಶ್ರೀನಿಧಿ ಶೆಟ್ಟಿ ಅವರು ಇದೀಗ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಜನಪ್ರಿಯತೆ ಪಡೆದುಕೊಂಡಿದ್ದು ಅವರ ಅಭಿನಯಕ್ಕೆ ಮೆಚ್ಚಿ ಅವರಿಗೆ ನಿರ್ಮಾಪಕರು ಸಾಲು ಸಾಲು ಸಿನಿಮಾಗಳ ಆಫರ್ ಗಳನ್ನು ಕೂಡ ನೀಡುತ್ತಿದ್ದಾರೆ ಎನ್ನಬಹುದು. ಆದರೆ ನಟಿ ಇದೀಗ ತಮ್ಮ ಸಂಭಾವನೆಯನ್ನು ಹೆಚ್ಚಿಸಿಕೊಂಡಿದ್ದು ತಮ್ಮ ಬಾರಿ ಸಂಭಾವನೆಯ ಕಾರಣದಿಂದ ಅವರ ಸಿನಿಮಾಗಳ ಆಫರ್ ಗಳು ಅವರ ಕೈ ತಪ್ಪಿ ಹೋಗುತ್ತಿದೆ ಎನ್ನುವ ಮಾತುಗಳು ಸದ್ಯ ಸಾಮಾಜಿಕ ಜಾಲತಾಣದಲ್ಲಿ ಕೇಳಿ ಬರುತ್ತಿದೆ.