Karnataka Times
Trending Stories, Viral News, Gossips & Everything in Kannada

Chandan Shetty-Niveditha: ಚಂದನ್ ಶೆಟ್ಟಿ ನಿವೇದಿತಾ ವಿಚ್ಛೇದನಕ್ಕೆ ಮಗುವಲ್ಲ ಕಾರಣ! ಇಲ್ಲಿದೆ ಅಸಲಿ ಸತ್ಯ

advertisement

ಸೆಲೆಬ್ರಿಟಿಗಳ ವಿಚಾರದಲ್ಲಿ ಚಿಕ್ಕ ಸಮಾಚಾರ ಕೂಡ ಯಾವ ರೀತಿಯಲ್ಲಿ ದೊಡ್ಡ ಮಟ್ಟದಲ್ಲಿ ಸುದ್ದಿ ಮಾಡುತ್ತೆ ಅನ್ನೋದನ್ನ ನಿಮಗೆಲ್ಲರಿಗೂ ತಿಳಿದಿರುವಂತಹ ವಿಚಾರವಾಗಿದೆ. ಇನ್ನು ಇವತ್ತಿನ ಲೇಖನದಲ್ಲಿ ನಾವು ನಿಮಗೆ ಹೇಳೋದಕ್ಕೆ ಹೊರಟಿರೋದು ಕನ್ನಡ ಚಿತ್ರರಂಗದ ಖ್ಯಾತ ನಟ ಸಂಗೀತ ನಿರ್ದೇಶಕ ಹಾಗೂ ಗಾಯಕ ಆಗಿರುವಂತಹ ಚಂದನ್ ಶೆಟ್ಟಿ (Chandan Shetty) ಹಾಗೂ ಸೋಶಿಯಲ್ ಮೀಡಿಯಾ ಸ್ಟಾರ್ ಆಗಿರುವಂತಹ ನಿವೇದಿತಾ ಗೌಡ (Niveditha Gowda) ದಂಪತಿಗಳ ಬಗ್ಗೆ.

ನಿಮಗೆಲ್ಲರಿಗೂ ನೆನಪಿರಬಹುದು ಇವರಿಬ್ರು ಮೈಸೂರಿನ ದಸರಾ ಕಾರ್ಯಕ್ರಮದಲ್ಲಿ ಪರಸ್ಪರ ಪ್ರಪೋಸ್ ಮಾಡಿ ನಂತರ ಸರಳವಾಗಿ ಮದುವೆಯಾಗುವ ಮೂಲಕ ದಾಂಪತ್ಯ ಜೀವನದಲ್ಲಿ ಕಾಲಿಟ್ಟಿದ್ರು. ಇವರಿಬ್ಬರ ನಡುವೆ ಸಾಕಷ್ಟು ದೊಡ್ಡ ಮಟ್ಟದಲ್ಲಿ ವಯಸ್ಸಿನ ಅಂತರ ಇದ್ದರೂ ಕೂಡ ಇವರಿಬ್ಬರೂ ಚೆನ್ನಾಗಿ ಅನ್ಯೋನ್ಯವಾಗಿ ಬಾಳುತ್ತಾರೆ ಎಂಬುದಾಗಿ ಪ್ರತಿಯೊಬ್ಬರೂ ಕೂಡ ಭಾವಿಸಿದ್ದರು ಆದರೆ ದಾಂಪತ್ಯ ಜೀವನಕ್ಕೆ ಕಾಲಿಟ್ಟ ನಾಲ್ಕು ವರ್ಷಗಳ ನಂತರ ಇಬ್ಬರೂ ಕೂಡ ಈಗ ಕೋರ್ಟಿಗೆ ಹೋಗಿ ಡಿವೋರ್ಸ್ (Divorce) ಗೆ ಅರ್ಜಿ ಸಲ್ಲಿಸಿದ್ದಾರೆ.

ಇಬ್ಬರು ಕೂಡ ಮೊದಲ ಬಾರಿಗೆ ಭೇಟಿಯಾಗಿದ್ದು ಕನ್ನಡ ಕಿರುತೆರೆಯ ಅತ್ಯಂತ ದೊಡ್ಡ ಹಾಗೂ ಶ್ರೀಮಂತ ರಿಯಾಲಿಟಿ ಶೋ ಕಾರ್ಯಕ್ರಮ ಆಗಿರುವಂತಹ ಬಿಗ್ ಬಾಸ್ (Bigg Boss) ನಲ್ಲಿ. ಬಿಗ್ ಬಾಸ್ ನಲ್ಲಿ ಇಬ್ಬರು ಅಣ್ಣ ತಂಗಿಯ ರೀತಿಯಲ್ಲಿ ಇದ್ರೂ ಆದರೆ ಅದು ಯಾವ ಮಾಯಕ ದಲ್ಲಿ ಮನೆಯಿಂದ ಹೊರಬಂದು ಇವರಿಬ್ಬರ ನಡುವೆ ಸ್ನೇಹ ಹಾಗೂ ಪ್ರೀತಿ ಪ್ರಾರಂಭ ಆಯ್ತು ಅನ್ನೋದು ಯಾರಿಗೂ ಕೂಡ ತಿಳಿಯದ ರೀತಿಯಲ್ಲಿ ಇವರಿಬ್ಬರ ನಡುವೆ ಲವ್ ಶುರುವಾಗಿತ್ತು. ಕೊನೆಗೆ ಇಬ್ಬರು ಮದುವೆ ಆಗಿರುವುದು ಕೂಡ ನಿಮಗೆಲ್ಲರಿಗೂ ತಿಳಿದಿರುವಂತಹ ವಿಚಾರವಾಗಿದೆ.

 

advertisement

Image Source: Headline Karnataka

 

ಚಂದನ್ ಶೆಟ್ಟಿ (Chandan Shetty) ಅವರ ಬಗ್ಗೆ ಬಹುತೇಕ ಎಲ್ಲರಿಗೂ ತಿಳಿದಿರುವಂತೆ ಸಿನಿಮಾಗಳಿಗೆ ಹಾಡುವುದು ಸಂಗೀತ ನಿರ್ದೇಶನ ಮಾಡೋದು ಹಾಗೂ ಕೆಲವೊಂದು ಸಿನಿಮಾಗಳಲ್ಲಿ ತಾವೇ ಕಲಾವಿದ ಹಾಗೂ ನಾಯಕನಾಗಿ ಕೂಡ ಕಾಣಿಸಿಕೊಂಡಿರುವುದನ್ನ ನೀವು ಇತ್ತೀಚಿನ ದಿನಗಳಲ್ಲಿ ನೋಡಬಹುದು.

ಇನ್ನು ನಿವೇದಿತಾ ಗೌಡ (Niveditha Gowda) ಅವರ ವಿಚಾರದ ಬಗ್ಗೆ ಮಾತನಾಡುವುದಾದರೆ ತಮ್ಮ ಯುಟ್ಯೂಬ್ ಚಾನೆಲ್ ಹಾಗೂ ಸೋಶಿಯಲ್ ಮೀಡಿಯಾ ಗಳ ಮೂಲಕ ಕಂಟೆಂಟ್ ಗಳನ್ನು ಪೋಸ್ಟ್ ಮಾಡಿಕೊಂಡು ತಮ್ಮ ಜೀವನದಲ್ಲಿ ಮಸ್ತ್ ಆಗಿದ್ದಾರೆ. ಆದರೆ ಸೋಶಿಯಲ್ ಮೀಡಿಯಾದಲ್ಲಿ ಜನರ ಮುಂದುಗಡೆ ಅಷ್ಟೊಂದು ಚೆನ್ನಾಗಿದ್ದ ಜೋಡಿ ಈಗ ಸಡನ್ ಆಗಿ ವಿವಾಹವಿಚ್ಛೇದನವನ್ನು ಪಡೆದುಕೊಳ್ಳುತ್ತಿರುವುದು ನಿಜಕ್ಕೂ ಕೂಡ ಶಾ-ಕಿಂಗ್ ಸುದ್ದಿಯಾಗಿದೆ ಎಂದು ಹೇಳಬಹುದಾಗಿದೆ.

 


ಇವರಿಬ್ಬರೂ ವಿವಾಹ ವಿಚ್ಛೇದನ (Divorce) ಪಡೆದುಕೊಳ್ಳುತ್ತಿರುವಂತಹ ವಿಡಿಯೋಗಳು ಕೂಡ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದು ಆದರೂ ಕೂಡ ಇವರಿಬ್ಬರೂ ಕೋರ್ಟಿನಿಂದ ಹೊರಗೆ ಬರುತ್ತಿರುವ ಸಂದರ್ಭದಲ್ಲಿ ಕೈ ಕೈ ಹಿಡಿದುಕೊಂಡು ಬರ್ತಾ ಇರೋದು ಎಲ್ಲರಿಗೂ ಕೂಡ ಆಶ್ಚರ್ಯವನ್ನು ತರಿಸಿದೆ ಎಂದು ಹೇಳಬಹುದಾಗಿದೆ. ತಿಳಿದು ಬಂದಿರುವ ಮಾಹಿತಿಯ ಪ್ರಕಾರ ವಿದೇಶದಲ್ಲಿ ನಿವೇದಿತ ಗೌಡ (Niveditha Gowda) ಅವರಿಗೆ ಸೆಟಲ್ ಆಗುವಂತಹ ಆಸೆ ಇತ್ತು ಆದರೆ ಈ ವಿಚಾರದ ಬಗ್ಗೆ ಚಂದನ್ ಶೆಟ್ಟಿ (Chandan Shetty) ರವರಿಗೆ ಅಸಮಾಧಾನ ಇತ್ತು ಎನ್ನುವ ಕಾರಣಕ್ಕಾಗಿ ವಿವಾಹವಿಚ್ಛೇದನವನ್ನು ಇಬ್ಬರು ಪಡೆದುಕೊಂಡಿದ್ದಾರೆ ಎಂಬುದಾಗಿ ತಿಳಿದು ಬಂದಿದೆ.

advertisement

Leave A Reply

Your email address will not be published.