ತಮಗೆಲ್ಲರಿಗೂ ಕೂಡ ತಿಳಿದಿರುವ ಹಾಗೆ ಸಿನಿಮಾಗಲ್ಲಿ (Movies) ಕೆಲ ಸ್ಟಾರ್ಗಳು (Star’s) ಪ್ರತಿ ಸಿನಿಮಾಗೆ ಸರಿ ಸುಮಾರು 100 ಕೋಟಿ ರೂಪಾಯಿಗೂ ಅಧಿಕ ಸಂಭಾವನೆಯನ್ನು ಪಡೆಯುತ್ತಾರೆ. ಹೌದು ಬಾಲಿವುಡ್ ನಟರಾದ ಅಕ್ಷಯ್ ಕುಮಾರ್ (Akshay Kumar) ಶಾರುಖ್ ಖಾನ್ (Shahrukh Khan) ಸಲ್ಮಾನ್ ಖಾನ್ (Salman Khan) ಹಾಗೂ ತಮಿಳಿನ ದಳಪತಿ ವಿಜಯ್ (Thalapathy Vijay) ಮೊದಲಾದವರು ಈ ಸಾಲಿನಲ್ಲಿದ್ದಾರೆ. ಇದೀಗ ಅಲ್ಲು ಅರ್ಜುನ್ (Allu Arjun) ಅವರು ಇವರೆಲ್ಲರನ್ನೂ ಮೀರಿಸಿದ್ದಾರೆ ಎನ್ನಲಾಗುತ್ತಿದ್ದು ಪುಷ್ಪ 2 ಸಿನಿಮಾಗಾಗಿ (Pushpa 2 Movie) ಅವರು ದೊಡ್ಡ ಮೊತ್ತದ ಬೇಡಿಕೆ ಇಟ್ಟಿದ್ದಾರೆ ಎನ್ನಲಾಗಿದೆ. ಹೌದು ಅವರ ಬೇಡಿಕೆಯನ್ನು ಪೂರ್ತಿಯಾಗಿ ಈಡೇರಿಸಲು ಮೈತ್ರಿ ಮೂವಿ ಮೇಕರ್ಸ್ (Mytri Movie maker’s) ನಿರಾಕರಿಸಿದೆ ಎಂದು ವರದಿ ಆಗಿದ್ದು ಸದ್ಯ ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ (Social Media) ಚರ್ಚೆ ನಡೆಯುತ್ತಿದೆ.
ಸದ್ಯ ನಮ್ಮ ಕನ್ನಡದ ಕೆಜಿಎಫ್ (KGF) ಸಿನಿಮಾ ಸೂಪರ್ ಡೂಪರ್ ಹಿಟ್ ಆಗಿದ್ದು ಈ ಚಿತ್ರ ಬಾಲಿವುಡ್ (Bollywood) ನಲ್ಲಿ 44 ಕೋಟಿ ರೂಪಾಯಿ ಬಾಚಿತ್ತು. ಈ ಸಿನಿಮಾದ ಒಟ್ಟಾರೆ ಕಲೆಕ್ಷನ್ ಜೋರಾಗಿಯೇ ಆಗಿದ್ದು ಕೆಜಿಎಫ್ ನೋಡಿದವರಿಗೆ ಎರಡನೇ ಚಾಪ್ಟರ್ ಬಗ್ಗೆ ನಿರೀಕ್ಷೆ ಸೃಷ್ಟಿ ಆಗಿತ್ತು. ಇನ್ನು ಕೆಜಿಎಫ್ 2 (KGF 2) ಹಿಂದಿಯಲ್ಲಿ ಬರೋಬ್ಬರಿ 433 ಕೋಟಿ ರೂಪಾಯಿ ಬಾಚಿಕೊಂಡಿತು. ಇನ್ನು ಚಿತ್ರದ ಒಟ್ಟಾರೆ ಬಿಸ್ನೆಸ್ 1250 ಕೋಟಿ ರೂಪಾಯಿ ಆಸುಪಾಸಿನಲ್ಲಿದ್ದು ಸದ್ಯ ಈ ಕಾರಣಕ್ಕೆ ಪುಷ್ಪ 2 ತಂಡದವರಿಗೆ ಹೊಸ ಹುಮ್ಮಸ್ಸು ಬಂದಿದೆ ಎನ್ನಬಹುದು. ಇನ್ನು ಪುಷ್ಪ ಸಿನಿಮಾ ಹಿಂದಿಯಲ್ಲಿ ಸುಮಾರಿ 100 ಕೋಟಿ ರೂಪಾಯಿ ಗಳಿಸಿದ್ದು ಚಿತ್ರದ ಒಟ್ಟಾರೆ ಕಲೆಕ್ಷನ್ 300 ಕೋಟಿ ರೂಪಾಯಿ ಮೀರಿದೆ. ಹೌದು ಈ ಕಾರಣಕ್ಕೆ ಎರಡನೇ ಚಾಪ್ಟರ್ ಸಾವಿರಾರು ಕೋಟಿ ರೂಪಾಯಿ ಬಿಸ್ನೆಸ್ ಮಾಡಬಹುದು ಎಂಬುದು ಚಿತ್ರತಂಡದವರ ಊಹೆಯಾಗಿದೆ.
ಇನ್ನು ಇದರ ಜೊತೆಗೆ ಟಿವಿ ಹಕ್ಕು ಮತ್ತು ಹಂಚಿಕೆ ಹಕ್ಕು ಹಾಗೂ ಒಟಿಟಿ ಹಕ್ಕಿನಿಂದ ನಿರ್ಮಾಪಕರಿಗೆ ದುಡ್ಡಿನ ಹೊಳೆ ಹರಿಯಲಿದೆ ಎನ್ನಬಹುದು. ಇದೆಲ್ಲವನ್ನೂ ಗಮನದಲ್ಲಿಟ್ಟುಕೊಂಡು ನಟ ಅಲ್ಲು ಅರ್ಜುನ್ 150 ಕೋಟಿ ರೂಪಾಯಿ ಸಂಭಾವನೆಗೆ ಬೇಡಿಕೆ ಇಟ್ಟಿದ್ದರಂತೆ.
ಇನ್ನು ಒಬ್ಬ ಹೀರೋಗೆ 150 ಕೋಟಿ ರೂಪಾಯಿ ನೀಡೋದು ಎಂದರೆ ಅದು ಸುಲಭದ ಮಾತಲ್ಲ. ಹೌದು ಹೀರೋ ಸಂಭಾವನೆ ಬಿಟ್ಟು ಸಿನಿಮಾ ಇತರ ಕಲಾವಿದರಿಗೆ ನೀಡುವ ರೆಮ್ಯುನರೇಷನ್ ಬೇರೆ ಇರುತ್ತದೆ. ಮೇಕಿಂಗ್ ಖರ್ಚು ನಿರ್ದೇಶಕರ ಸಂಭಾವನೆ. ಹೀಗೆ ಪಟ್ಟಿ ಬೆಳೆಯುತ್ತಾ ಹೋಗುತ್ತದೆ. ಇದನ್ನು ಗಮನದಲ್ಲಿಟ್ಟುಕೊಂಡು ನಿರ್ಮಾಪಕರು ಅಲ್ಲು ಅರ್ಜುನ್ಗೆ 125 ಕೋಟಿ ರೂಪಾಯಿ ನೀಡಲು ಒಪ್ಪಿದ್ದಾರೆ ಎಂದು ಇದೀಗ ವರದಿ ಆಗಿದೆ.