Weekend with Ramesh: ವೀಕೆಂಡ್ ವಿತ್ ರಮೇಶ್ ಮೊದಲ ಎಪಿಸೋಡ್ ನ ಕೆಂಪು ಕುರ್ಚಿ ಅಲಂಕರಿಸುವವರು ಯಾರು? ಇಲ್ಲಿದೆ ಡಿಟೇಲ್ಸ್
ಜೀ ಕನ್ನಡ (Zee Kannada )ವಾಹಿನಿ ಈಗಾಗಲೇ ಜನರಿಗೆ ಇಷ್ಟವಾಗುವಂತಹ ಸಾಕಷ್ಟು ವಿವಿಧ ರೀತಿಯ ಧಾರಾವಾಹಿಗಳು ಹಾಗೂ ರಿಯಾಲಿಟಿ ಶೋ ಗಳ (Reality show) ಮೂಲಕ ಮನೋರಂಜನೆಯನ್ನು ನೀಡಿದೆ. ಅದರಲ್ಲಿ ಜನರು ಅತಿ ಹೆಚ್ಚು ಇಷ್ಟಪಡುವ ಶೋ ಅಂದರೆ ವೀಕೆಂಡ್ ವಿತ್ ರಮೇಶ್ (Weekend with Ramesh). ಬೇರೆ ಬೇರೆ ವಿಭಾಗದಲ್ಲಿ ಸಾಧನೆ ಮಾಡಿದ ಎಲೆಮರೆಯ ಕಾಯಿಯಂತಿರುವ ಸಾಧಕರನ್ನ ಈ ಕಾರ್ಯಕ್ರಮದಲ್ಲಿ ಕರೆಸಿ ಸನ್ಮಾನಿಸಲಾಗುತ್ತದೆ.
ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮದ ಕೆಂಪು ಕುರ್ಚಿಯಲ್ಲಿ ಕುಳಿತುಕೊಳ್ಳುವ ಪ್ರತಿಯೊಬ್ಬ ಸಾಧಕನ ಬದುಕಿನ ಕಥೆ ಇನ್ನೊಬ್ಬರಿಗೆ ಮಾದರಿಯಾಗುತ್ತದೆ. ಅವರು ಸಾಧನೆಯ ಹಾದಿಯಲ್ಲಿ ಯಾವೆಲ್ಲ ನೋವು, ಸಂಕಷ್ಟ, ಏಳು ಬೀಳುಗಳನ್ನು ಕಂಡಿದ್ದಾರೆ ಎಂಬುದು ಈ ಕಾರ್ಯಕ್ರಮದಲ್ಲಿ ತೋರಿಸಲಾಗುತ್ತದೆ. ಹಾಗಾಗಿ ಇದು ಜನರ ಮಧ್ಯದಲ್ಲಿ ಹೆಚ್ಚು ಜನಪ್ರಿಯತೆಯನ್ನು ಪಡೆದುಕೊಂಡಿದೆ. ಸುದೀರ್ಘ ಬ್ರೇಕ್ ನ ನಂತರ ಇದೇ ಬರುವ ಮಾರ್ಚ್ 25 ರಿಂದ ಶನಿವಾರ ಹಾಗೂ ಭಾನುವಾರ ರಾತ್ರಿ 9:00ಗೆ ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮ ಪ್ರಸಾರವಾಗಲಿದೆ ಎನ್ನುವ ಮಾಹಿತಿ ಲಭ್ಯವಾಗಿದೆ.
ಈಗಾಗಲೇ ಈ ಕಾರ್ಯಕ್ರಮದ ಮೊದಲ ಎಪಿಸೋಡ್ (Episode) ಚಿತ್ರೀಕರಣ ಪೂರ್ಣಗೊಂಡಿದೆ. ಮಾರ್ಚ್ 8ರಂದು ಬೆಂಗಳೂರಿನ ಅಬ್ಬಯ್ಯ ನಾಯ್ಡು ಸ್ಟುಡಿಯೋದಲ್ಲಿ(studio) ಮೊದಲ ಎಪಿಸೋಡ್ ಚಿತ್ರೀಕರಣ ನಡೆಸಲಾಗಿದೆ ಎನ್ನುವ ವರದಿ ಇದೆ. ಇನ್ನು ಈ ಕಾರ್ಯಕ್ರಮಕ್ಕೆ ಮೊದಲ ಸಾಧಕರ ಪಟ್ಟಿಯಲ್ಲಿ ಯಾರ ಹೆಸರಿದೆ ಎಂದು ಎಲ್ಲರಿಗೂ ಕುತೂಹಲ ಇದ್ದೇ ಇರುತ್ತದೆ. ಮೈಸೂರು ಮೂಲದ ನಟ ನಿರ್ದೇಶಕ ಅತ್ಯದ್ಭುತ ನೃತ್ಯಗಾರ ಪ್ರಭುದೇವ ಅವರು ಈ ಚಿತ್ರೀಕರಣದಲ್ಲಿ ಭಾಗಿಯಾಗಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ.
ಜೀ ಕನ್ನಡ ವಾಹಿನಿಯಲ್ಲಿ ವೀಕೆಂಡ್ ವಿತ್ ರಮೇಶ್ ಸದ್ಯದಲ್ಲಿಯೇ ನಿಮ್ಮ ಮುಂದೆ ಬರಲಿದೆ ಎಂದು ಪ್ರೊಮೋ ಕೂಡ ( Promo codes) ಪ್ರಸಾರವಾಗಿತ್ತು. “ಸ್ಪೂರ್ತಿದಾಯಕ ಕಥೆಗಳ ಜೊತೆಗೆ ವೀಕೆಂಡ್ ಗೆ ಸಾರ್ಥಕತೆ ತುಂಬೋಕೆ ಬರ್ತಿದ್ದಾರೆ ನಿಮ್ಮ ರಮೇಶ್ ಅರವಿಂದ್” ಎಂದು ಜಿ ವಾಹಿನಿ ಪೋಸ್ಟ್ ಹಂಚಿಕೊಂಡಿತ್ತು. ಹಾಗಾಗಿ ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮ ಯಾವಾಗ ಆರಂಭವಾಗುತ್ತೆ ಅಂತ ನೋಡುವುದಕ್ಕೆ ಜನರಂತು ಕುತೂಹಲದಿಂದ ಕಾಯುತ್ತಿದ್ದಾರೆ.