ಕಳೆದ ವರುಷದಿಂದ ನಟಿ ಪವಿತ್ರ ಲೋಕೇಶ್ (Pavithra Lokesh) ಮತ್ತು ತೆಲುಗು ನಟ ನರೇಶ್ (Telugu Actor Naresh) ನಡುವಿನ ಪ್ರೇಮ್ ಕಹಾನಿ ಬಗ್ಗೆ ದೊಡ್ಡ ಮಟ್ಟದಲ್ಲಿ ಸುದ್ದಿ ಆಗುತ್ತಲೇ ಇದೆ. ಹೌದು ಇವರಿಬ್ಬರ ಪ್ರೇಮಾ ವಿಚಾರ ವಿವಾದಕ್ಕೆ ತಿರುಗಿದ್ದು ಕೂಡ ಹೌದು. ಸದ್ಯ ಈಗ ನರೇಶ್ ಹಾಗೂ ಪವಿತ್ರ ಲೋಕೇಶ್ ಇಬ್ಬರೂ ಕೂಡ ವಿವಾಹ(Marriage) ಆಗಿದ್ದಾರೆ ಎನ್ನುವಂತಹ ಸುದ್ದಿ ಟಾಲಿವುಡ್ (Tollywood) ಅಂಗಳದಲ್ಲಿ ಹರಿದಾಡುತ್ತಿದೆ. ಇದಕ್ಕೆ ಪೂರಕ್ಕೆ ಎನ್ನುವಂತೆ ಸ್ವತಃ ನಟ ನರೇಶ್ ರವರೇ ವಿಡಿಯೋ ಬಿಡುಗಡೆ ಮಾಡಿದ್ದಾರೆ.
ಹೌದು ನಟ ನರೇಶ್ ರವರು ತಮ್ಮ ಟ್ವಿಟರ್ ಖಾತೆಯಲ್ಲಿ (Tweet) ಪವಿತ್ರಾ ಲೋಕೇಶ್ ಜೊತೆ ಸಪ್ತಪದಿ ತುಳಿಯುತ್ತಿರುವ ವಿಡಿಯೋವನ್ನು (Video) ಶೇರ್ ಮಾಡಿದ್ದಾರೆ. ಹೌದು ಚಿಕ್ಕ ವಿಡಿಯೋವನ್ನು ಹೊರಬಿಟ್ಟಿದ್ದು ಒಂದು ಪವಿತ್ರ ಬಂಧ ಎರಡು ಮನಸ್ಸುಗಳು ಮೂರು ಮುಳ್ಳುಗಳು ಏಳು ಪಾದಗಳ ಎಂದು ಬರೆದುಕೊಂಡಿದ್ದಾರೆ. ಸದ್ಯ ಈ ವಿಡಿಯೋ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ (Social Media) ಹಾಗೂ ಚಿತ್ರರಂಗದಲ್ಲಿ (Filim Industry) ಸಿಕ್ಕಾಪಟ್ಟೆ ಚರ್ಚೆಯಾಗುತ್ತಿದೆ.
ಇನ್ನು ಈ ವರುಷದ ಆರಂಭದಲ್ಲಿ ನರೇಶ್ ಹಾಗೂ ಪವಿತ್ರಾ ಲೋಕೇಶ್ ಇಬ್ಬರೂ ಕೂಡ ಒಂದು ವಿಡಿಯೋ ಹಂಚಿಕೊಂಡಿದ್ದರು. ಈ ವಿಡಿಯೋದಲ್ಲಿ ಇಬ್ಬರೂ ಪರಸ್ಪರ ತುಟಿಗೆ ಚುಂಬಿಸಿಕೊಂಡು ಹೊಸ ವರ್ಷಕ್ಕೆ (New Year) ಶುಭಾಶಯವನ್ನು ಕೋರಿದ್ದರು. ಆಗಲೂ ಕೂಡ ಇಬ್ಬರೂ ಶೀಘ್ರದಲ್ಲಿಯೇ ಮದುವೆ ಆಗಲಿದ್ದಾರೆ ಎನ್ನು ಮಾತುಗಳು ಕೇಳಿ ಬಂದಿದ್ದವು. ಈಗ ಮದುವೆ ವಿಡಿಯೋ ಬಿಡುಗಡೆ ಮಾಡಲಾಗಿದೆ.
ಇನ್ನು ತೆಲುಗು ನಟ ನರೇಶ್ ಹಂಚಿಕೊಂಡ ಈ ಮದುವೆ ವಿಡಿಯೋ ಅಸಲಿ ಎಂದೇ ಕೆಲವು ತೆಲುಗು ಮಾಧ್ಯಮಗಳು ವರದಿ ಮಾಡಿದ್ದು ಆದರೆಈ ಹಿಂದೆ ನರೇಶ್ ಹಾಗೂ ಪವಿತ್ರಾ ಇಬ್ಬರೂ ತಮ್ಮ ಲೈಫ್ ಸ್ಟೋರಿಯನ್ನೇ ಸಿನಿಮಾ ಮಾಡುತ್ತಿದ್ದಾರೆ ಎಂದು ಸುದ್ದಿಯಾಗಿತ್ತು.
ಹೌದು ಆ ಸಿನಿಮಾದ ತುಣುಕನ್ನೇ ಹೊಸ ವರ್ಷಕ್ಕೆ ರಿಲೀಸ್ ಮಾಡಲಾಗುತ್ತು ಎಂದು ಗುಲ್ಲೆದ್ದಿತ್ತು. ಈಗಲೂ ಕೂಡ ಇಬ್ಬರ ಮದುವೆ ವಿಡಿಯೋ ರಿಲೀಸ್ ಆಗುತ್ತಂದೆ ಸಿನಿಮಾದ ವಿಡಿಯೋನೇ ಇರಬಹುದು ಎಂದು ಮಾತಾಡಿಕೊಳ್ಳುತ್ತಿದ್ದಾರೆ. ಆದರೆ ತೆಲುಗು ಮಾಧ್ಯಮದವರು ಅಸಲಿ ಮದುವೆ ಎಂದಿದ್ದಾರೆ. ಇನ್ನೂ ಪವಿತ್ರಾ ಲೋಕೇಶ್ ಮತ್ತು ನರೇಶ್ ಮದುವೆಗೆ 5 ಕೋಟಿ ಖರ್ಚಾಗಿದೆ ಎಂದು ನೆಟ್ಟಿಗರು ಕಾಮೆಂಟ್ ಮಾಡುತ್ತಿದ್ದು ಈ ದುಡ್ಡಲ್ಲಿ ಸಾವಿರ ವಿವಾಹ ಮಾಡಬಹುದಿತ್ತು ಎಂದು ಕೂಡ ಕಾಲೆಳೆಯುತ್ತಿದ್ದಾರೆ.5 ಕೋಟಿ ಖರ್ಚು ಮಾಲ್ಡೀವ್ಸ್ ಹನಿಮೂನ್ ಇಂಥ ಸುಖ ಎಷ್ಟು ಜನರಿಗೆ ಸಿಗುತ್ತೆ. ಅದೂ ಈ ವಯಸ್ಸಲ್ಲಿ ಅಂತ ಸೋಷಿಯಲ್ ಮೀಡಿಯಾದಲ್ಲಿ ನರೇಶ್ ಕಾಲೆಳೆಯುತ್ತಿದ್ದಾರೆ.