Karnataka Times
Trending Stories, Viral News, Gossips & Everything in Kannada

Upendra: ನರೇಂದ್ರ ಮೋದಿ ಆಡಳಿತ ಹೇಗಿದೆ ಎಂದು ಉತ್ತರ ಕೊಟ್ಟ ಉಪೇಂದ್ರ.

Advertisement

ಸದ್ಯ ಕರ್ನಾಟಕ ವಿಧಾನಸಭಾ ಚುನಾವಣೆ (Karnataka Assembly Election) ಸಮೀಸುತ್ತಿದೆ. ಹೌದು ಈಗಾಗಲೇ ಚುನಾವಣಾ ರಂಗು ಕಾವೇರಿದ್ದು ಎಲ್ಲಾ ರಾಜಕೀಯ ಪಕ್ಷಗಳು (Political Parties) ಅಖಾಡಕ್ಕೆ ಇಳಿದಿವೆ ಎನ್ನಬಹುದು. ರಾಜಕೀಯ ಮುಖಂಡರುಗಳು (Political leaders) ತಮ್ಮ ತಮ್ಮ ಕ್ಷೇತ್ರದಲ್ಲಿ ಭರ್ಜರಿಯಾಗಿ ಪ್ರಚಾರ ಮಾಡಲು ಆರಂಭಿಸಿದ್ದು ಈ ಮಧ್ಯೆ ರಿಯಲ್ ಸ್ಟಾರ್ ಉಪೇಂದ್ರ (Real Star Upendra) ಅವರ ಉತ್ತಮ ಪ್ರಜಾಕೀಯ (Prajakiya) ಪಕ್ಷ ಕೂಡ ಚುನಾವಣೆಗೆ ಸದ್ದಿಲ್ಲದೆ ತಯಾರಿಗಳನ್ನು ಮಾಡಿಕೊಳ್ಳುತ್ತಿದೆ. ಹೌದು ಚುನಾವಣಾ ಆಯೋಗ ಉಪ್ಪಿಯ (Upendra) ಉತ್ತಮ ಪ್ರಜಾಕೀಯ ಪಕ್ಷಕ್ಕೆ ಆಟೋರಿಕ್ಷಾ ಗುರುತನ್ನು ನೀಡಿದ್ದು ಈ ಬಗ್ಗೆ ಉಪೇಂದ್ರ ರವರು ತಮ್ಮ ಟ್ವಿಟರ್ (Tweeter) ಖಾತೆಯ ಮೂಲಕ ಸಂತಸ ವಿಷಯವನ್ನು ಹಂಚಿಕೊಂಡಿದ್ದಾರೆ.

ಇನ್ನು ಚುನಾವಣಾ ಆಯೋಗ ಪಕ್ಷದ ಸಿಂಬಲ್ ಅನ್ನು ನೀಡುತ್ತಿದ್ದಂತೆ ಉಪ್ಪಿ ಟ್ವೀಟ್ ಮಾಡಿದ್ದು ಉತ್ತಮ ಪ್ರಜಾಕೀಯ ಪಕ್ಷಕ್ಕೆ ಈ ಬಾರಿಯ 2023 ವಿಧಾನಸಭಾ ಚುನಾವಣೆಗೆ ಕಾಮನ್ ಸಿಂಬಲ್ ಆಟೋ ರಿಕ್ಷಾ ಚಿಹ್ನೆ ಲಭಿಸಿದೆ. ಎಲ್ಲರಿಗೂ ಶುಭಾಶಯಗಳು ಎಂದು ಟ್ವೀಟ್ ಮಾಡಿದ್ದಾರೆ. ಉತ್ತಮ ಪ್ರಜಾಕೀಯ ಪಕ್ಷದಿಂದ ಸ್ಪರ್ಧೆ ಮಾಡುವ ಅಭ್ಯರ್ಥಿಗಳು ಆಟೋರಿಕ್ಷಾವನ್ನು ಚಿಹ್ನೆಯಾಗಿ ಬಳಸ ಬೇಕೆಂದು ಚುನಾವಣಾ ಆಯೋಗ ಹೇಳಿದೆ. ಉತ್ತಮ ಪ್ರಜಾಕೀಯ ಪಕ್ಷ ನೋಂದಾಯಿತ ಮಾನ್ಯತೆ ಇಲ್ಲ ಪಕ್ಷವಾಗಿರುವ ಕಾರಣ ಪ್ರತಿಬಾರಿ ಚುನಾವಣಾ ಆಯೋಗದಿಂದ ಚಿಹ್ನೆಯನ್ನು ಪಡೆಯಬೇಕಿದೆ.

Advertisement

ಈ ನಡುವೆ ಉಪ್ಪಿ ಸಾಲು ಸಾಲು ಸಂದರ್ಶನದಲ್ಲಿ ಕಾಣಿಸಿಕೊಳ್ಳುತ್ತಿದ್ದು ನ್ಯೂಸ್ ಚಾನಲ್ ನಲ್ಲಿ ಕುಳಿತು ಸಾಮಾನ್ಯ ಜನರ ಪ್ರಶ್ನೆಗೆ ಉತ್ತರಿಸುತ್ತಿದ್ದಾರೆ. ಈ ಬೆನ್ನಲ್ಲೆ ವ್ಯಕ್ತಿಯೊಬ್ಬ ಪ್ರದಾನಿ ನರೇಂದ್ರ ಮೋದಿ (Narendra Modi) ಯವರ ಆಡಳಿತದ ಬಗ್ಗೆ ನಿಮ್ಮ ಅಭಿಪ್ರಾಯವೇನು ಎಂದು ಪ್ರಶ್ನೆ ಮಾಡಿದ್ದು ಇದಕ್ಕೆ ಉತ್ತರಿಸಿ ಉಪ್ಪಿಯ ಪ್ರತಿಕ್ರಿಯೆ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಬಹಳಾನೇ ವೈರಲ್ ಆಗುತ್ತಿದೆ.

ಏನಾದ್ರು ಸಮಸ್ಯೆ ಆಯ್ತು ಅನ್ಕೊಳಿ. ನನಗೆ ಟ್ವೀಟ್ ಮಾಡ್ತರೇ.. ಏನ್ರೀ ನಿಮ್ದೇನೂ ರಿಯಾಕ್ಷನೇ ಬರಲಿಲ್ಲ ಅಂತ.. ನಾನ್ ಕೇಳೋದ್ ಏನಂದ್ರೆ ಮೊದಲು ನಿನ್ನ ರಿಯಾಕ್ಷನ್ ಹೇಳಿಪ್ಪ. ಇದು ಸರಿ ಅನಿಸುತ್ತಿದ್ಯ ನಿನ್ಗೆ ಅಂದ್ರೆ ನಮ್ದು ಬಿಡಿ ನಿಮ್ದು ಹೇಳಿ ಅಂತಾರೇ.. ಹೀಗೆ ಎಲ್ಲರಿಗೂ ಎಲ್ಲಾದಕ್ಕೂ ನಾಯಕ ಬೇಕು ಎಂದು ಮಾತು ಆರಂಭಿಸಿದರು ಉಪೇಂದ್ರ.

ಮೊದಲು ವಯಕ್ತಿಕ ಅಭಿಪ್ರಾಯವಿರಬೇಕು. ಹೀಗೆ ನನ್ನ ಅಭಿಪ್ರಾಯ ನನ್ನದು ನಿಮ್ಮ ಅಭಿಪ್ರಾಯ ನಿಮ್ಮದು ಎಂದು ಪ್ರಶ್ನೆ ಮಾಡಿದ ವ್ಯಕ್ತಿಗೆ ಹಾಸ್ಯದ ಮೂಲಕ ಚಾಟಿ ಬೀಸಿದ್ದಾರೆ. ದೇಶದ ಪ್ರಜೆಯಾಗಿ ಮೋದಿ ಅವರು ಯುವಕರಿಗೆ ಏನು ಸಂದೇಶ ಕೊಡ್ತಿದ್ದಾರೆ ಹೇಳಿ ಎಂಬ ಪ್ರಶ್ನಗೆ ಉಪ್ಪಿ ಅವ್ರ ಸಂದೇಶ ಅವ್ರು ಕೊಡ್ತಿದ್ದಾರೆ ಅದನ್ನ ನಾನ್ ಯಾಕೆ ಹೇಳ್ಳಿ? ನಾನು ನನ್ನ ಸಂದೇಶ ಕೊಡ್ತಿನಿ ಎಂದು ಹೇಳುವ ಮೂಲಕ ಪ್ರದಾನಿ ಬಗ್ಗೆ ಪಾಸಿಟಿವ್ ಹಾಗೂ ನೆಗಿಟಿವ್ ಎರಡೂ ಮಾತನಾಡದೆ ನುಣಿಚಿಕೊಂಡಿದ್ದಾರೆ ಉಪ್ಪಿ. ಸದ್ಯ ಈ ಸಂದರ್ಶನದ ವಿಡಿಯೋ ಬಹಳ ವೈರಲ್ ಆಗುತ್ತಿದೆ.

Advertisement

Leave A Reply

Your email address will not be published.