Karnataka Times
Trending Stories, Viral News, Gossips & Everything in Kannada

Anushka Shetty: ಖ್ಯಾತ ನಟಿ ಅನುಷ್ಕಾ ಶೆಟ್ಟಿಗಿ ಇದೆ ಈ ಭಯಾನಕ ಕಾಯಿಲೆ

Advertisement

ಸಾಮಾಜಿಕ ಸಿನಿಮಾರಂಗದಲ್ಲಿರುವಂತಹ (Filim Industry) ತಾರೆಯರು ತಮಗಿರುವಂತಹ ಆರೋಗ್ಯ ಸಮಸ್ಯೆಗಳ (Health Issues) ಬಗ್ಗೆ ಬಹಿರಂಗವಾಗಿ ಮಾತನಾಡುತ್ತಿರುತ್ತಾರೆ. ಹೌದು ಕೆಲವೇ ದಿನಗಳ ಹಿಂದೆಯಷ್ಟೇ ದಕ್ಷಿಣ ಭಾರತದ ಖ್ಯಾತ ನಟಿ ಸಮಂತಾ (Samantha) ಮಯೋಸೈಟಿಸ್ ಎನ್ನುವ ಅಪರೂಪದ ಕಾಯಿಲೆಯಿಂದ ಬಳಲುತ್ತಿರುವುದಾಗಿ ಹೇಳಿಕೊಂಡಿದ್ದರು. ಸದ್ಯ ಈ ಬೆನ್ನಲ್ಲೇ ಇದೀಗ ನಟಿ ಅನುಷ್ಕಾ ಶೆಟ್ಟಿ (Anushka Shetty) ತಮಗಿರುವ ವಿಚಿತ್ರ ಸಮಸ್ಯೆಯ ಬಗ್ಗೆ ಹೇಳಿಕೊಂಡಿದ್ದಾರೆ. ಹೌದು ಸೈಜ್ ಜೀರೊ (Size Zero) ಎಂಬ ಚಿತ್ರಕ್ಕಾಗಿ ತೂಕ ಹೆಚ್ಚಿಸಿಕೊಂಡು ನಟಿ ಸ್ವೀಟಿ ಎಡವಟ್ಟು ಮಾಡಿಕೊಂಡಿದ್ದು ಪಾತ್ರಕ್ಕಾಗಿ ತೂಕ ಹೆಚ್ಚಿಸಿಕೊಂಡು ಮತ್ತೆ ತೂಕ ಇಳಿಸಿಕೊಳ್ಳಲು ನಾನಾ ಕರಸತ್ತು ಕೂಡ ನಡೆಸುವಂತಾಯಿತು. ಹೌದು ಇದೇ ಕಾರಣಕ್ಕೆ ಇತ್ತೀಚಿನ ವರ್ಷಗಳಲ್ಲಿ ಅನುಷ್ಕಾ ಸಿನಿಮಾಗಳಲ್ಲಿ (Movies) ನಟಿಸೋದು ಕಮ್ಮಿ ಆಗಿದ್ದು ಇದೀಗ ಅನುಷ್ಕಾ ತೂಕ ಇಳಿಸಿಕೊಂಡು ಮತ್ತೆ ಸಿನಿಮಾಗಳಲ್ಲಿ ಕೆಲಸ ಮಾಡುತ್ತಿದ್ದಾರೆ. ಹೌದು ಆದರೆ ಮೊದಲಿನ ಪಿಜಿಕ್ ಮಾತ್ರ ಮರಳಿ ಪಡೆಯಲು ಸಾಧ್ಯವಾಗುತ್ತಿಲ್ಲ ಎನ್ನಬಹುದು. ಸದ್ಯ ಇದೀಗ ಸಂದರ್ಶನವೊಂದರಲ್ಲಿ ಅನುಷ್ಕಾ ಶೆಟ್ಟಿ ತಮಗಿರುವ ವಿಚಿತ್ರ ಸಮಸ್ಯೆಯ ಬಗ್ಗೆ ಹೇಳಿಕೊಂಡಿದ್ದಾರೆ.

ಹೌದು ದೇವಸೇನಾ ಅನುಷ್ಕಾ ಶೆಟ್ಟಿಗೆ ನಗುವ ಸಮಸ್ಯೆ ಇದೆಯಂತೆ. ಅಯ್ತೋ ನಗುವುದರಲ್ಲಿ ಸಮಸ್ಯೆ ಏನಪ್ಪಾ? ನಗು ಆರೋಗ್ಯಕ್ಕೆ ಒಳ್ಳೆಯದೇ ಅಲ್ಲವೇ ಎಂದರೆ ಅಯ್ಯೋ ನಾನು ಒಮ್ಮೆ ನಗುವುದಕ್ಕೆ ಪ್ರಾರಂಭ ಮಾಡಿದರೆ 15 ರಿಂದ 20 ನಿಮಿಷ ನಗುತ್ತಲೇ ಇರುತ್ತೀನಿ ಎಂದು ಅನುಶ್ಕಾ ಹೇಳಿದ್ದಾರೆ. ಹೌದು ಶೂಟಿಂಗ್ ಸೆಟ್‌ನಲ್ಲಿ ಜೋರಾಗಿ ನಗುವುದಕ್ಕೆ ಆರಂಭಿದರೆ ಎಲ್ಲರೂ ತಮ್ಮ ಕೆಲಸಗಳನ್ನು ನಿಲ್ಲಿಸಿ ನನ್ನನ್ನೇ ನೋಡುತ್ತಾ ನಿಂತುಬಿಡುತ್ತಾರೆ ಎಂದು ನಟಿ ಹೇಳಿದ್ದು ಯಾವುದರರೂ ಫನ್ನಿ ಘಟನೆ ನೆನಪಿಸಿಕೊಂಡರೆ ಯಾರಾದರೂ ಜೋಕ್ ಮಾಡಿದರೆ ಕಥೆ ಮುಗಿಯಿತು ನಿರಂತರವಾಗಿ ನಗುತ್ತಲೇ ಇರ್ತೀನಿ ಎಂದು ಹೇಳಿದ್ದಾರೆ..

Advertisement

ಹೌದು ಶೂಟಿಂಗ್ ನಡುವೆ ನಾನು ನಗುವುದಕ್ಕೆ ಆರಂಭಿದರೆ ಕೆಲವರು ತಿಂಡಿ ತಿಂದು ಮುಗಿಸಿದರೂ ನನ್ನ ನಗು ಮಾತ್ರ ನಿಂತಿರುವುದಿಲ್ಲ ಎಂದು ದೇವಸೇನಾ ಹೇಳಿದ್ದು ನನಗೆ ಕೂಡಲೇ ನಗುವನ್ನು ನಿಯಂತ್ರಿಸಲು ಸಾಧ್ಯವಿಲ್ಲ. ಸಾಕಷ್ಟು ಸಂದರ್ಶನಗಳಲ್ಲಿ ಹಾಗಞ ವೇದಿಕೆಗಳಲ್ಲಿ ಅನುಷ್ಕಾ ಶೆಟ್ಟಿ ಹೀಗೆ ನಗುವುದನ್ನು ನೋಡಿದ್ದೇವೆ. ಇನ್ನು ದೇವಸೇನಾ ಮಾತು ಕೇಳಿದ ಅಭಿಮಾನಿಗಳು ನೀವು ನಕ್ಕರೆ ಕ್ಯೂಟ್ ಆಗಿ ಇರುತ್ತದೆ ನೀವು ನಕ್ಕರೆ ನಮಗೂ ಸಂತೋಷ ಎಂದು ಕಾಮೆಂಟ್ ಮಾಡುತ್ತಿದ್ದಾರೆ.

ಸದ್ಯ ಇದೀಗ ಯುವನಟ ನವೀನ್ ಪೊಲಿಶೆಟ್ಟಿ (Naveen Polishetty) ಜೊತೆ ಅನುಷ್ಕಾ ಶೆಟ್ಟಿ ಸಿನಿಮಾವೊಂದರಲ್ಲಿ ನಟಿಸ್ತಿದ್ದಾರೆ. ಹೌದು ಚಿತ್ರದಲ್ಲಿ ಶೆಫ್ ಪಾತ್ರದಲ್ಲಿ ಸ್ವೀಟಿ ಬಣ್ಣ ಹಚ್ಚಿದ್ದು ಈ ಚಿತ್ರದಲ್ಲಿ 40 ವರ್ಷ ವಯಸ್ಸಿನ ನಾಯಕಿ ಹಾಗೂ 20ರ ನಾಯಕನ ನಡುವಿನ ಪ್ರೇಮಕಥೆ ಇದೆ ಎಂದು ಹೇಳಲಾಗುತ್ತಿದೆ. ಹೌದು ಹಾಗಾಗಿ ಚಿತ್ರಕ್ಕೆ ಸ್ವೀಟಿಯನ್ನು ಆಯ್ಕೆ ಮಾಡಿಕೊಂಡಿದ್ದಾರಂತೆ. ಬಹಳ ಇಷ್ಟಪಟ್ಟು ಆಕೆ ಸಿನಿಮಾ ಒಪ್ಪಿಕೊಂಡಿದ್ದಾರೆ. ಇನ್ನು ಸದ್ದಿಲ್ಲದೇ ಸಿನಿಮಾ ಚಿತ್ರೀಕರಣ ನಡೀತಿದ್ದು ಪಿ. ಮಹೇಶ್ ಬಾಬು ಎಂಬುವವರು ಚಿತ್ರಕ್ಕೆ ಆಕ್ಷನ್ ಕಟ್ ಹೇಳ್ತಿದ್ದಾರೆ.

Advertisement

Leave A Reply

Your email address will not be published.