Puneeth Rajkumar: ಅಪ್ಪು ಹುಟ್ಟುಹಬ್ಬಕೆ ದಿನಗಣನೆ ಆರಂಭ,ಅಶ್ವಿನಿ ದೃಢ ನಿರ್ಧಾರ

Advertisement
ಮಾರ್ಚ್ 17 ಅಪ್ಪು ಅಭಿಮಾನಿಗಳ ಪಾಲಿಗೆ ಎಂದು ಮರೆಯಲಾಗದ ದಿನ. ಹಾಗೆ ಪ್ರತಿವರ್ಷ ಈ ದಿನವನ್ನು ಪ್ರೀತಿಯ ಅಪ್ಪು ಜೊತೆ ಸೆಲೆಬ್ರೇಶನ್(Celebration)ಮಾಡುತ್ತಿದ್ದ ಪುನೀತ್ ಅಭಿಮಾನಿಗಳು ಇದೀಗ ಅಪ್ಪು ಇಲ್ಲದೆ ಅವರ ಹುಟ್ಟಿದ ದಿನವನ್ನು ಆಚರಿಸುವಂತಾಗಿದೆ.ಆದ್ರೆ ಇಂಥ ಟೈಮ್ ನಲ್ಲೇ ಅಪ್ಪು ಮಡದಿ ಅಶ್ವಿನಿ ಒಂದು ನಿರ್ಧಾರವನ್ನ ತೆಗೆದು ಕೊಂಡಿದ್ದಾರೆ. ಹೌದು ಮಾರ್ಚ್ 17 ಬಂತು ಅಂದ್ರೆ ಸಾಕು ಸದಾಶಿವನಗರದ ಮನೆಯಲ್ಲಿ ಜನ ಜಂಗುಳಿ ಸೇರುತ್ತಿತ್ತು. ಅಲ್ಲಿ ಸಂತೋಷ ಸಡಗರ ತುಂಬಿ ತುಳುಕುತಿತ್ತು.
Advertisement
ಅಪ್ಪು ಯಾವುದೇ ಕಾರಣಕ್ಕೂ ಅಭಿಮಾನಿಗಳನ್ನ ಮನೆ ಬಳಿ ಬರಬೇಡಿ ಅಂದವರಲ್ಲ. ಹೀಗಿರುವಾಗ ಅವರ ಅಗಲಿಕೆ ನಂತರ ಅಭಿಮಾನಿಗಳನ್ನು ಮನೆ ಬಳಿ ಬರಬೇಡಿ ಎಂದು ಹೇಳುವುದಕ್ಕೆ ಆಗದೆ, ಅಪ್ಪು ಹುಟ್ಟು ಹಬ್ಬಕ್ಕೂ ಮುನ್ನ ವಿದೇಶದಲ್ಲಿರುವ ಮಗಳ ಬಳಿ ಹೊರಡಲು ಅಶ್ವಿನಿ ಪುನೀತ್ ರಾಜ್ ಕುಮಾರ್ ರವರು ನಿರ್ಧಾರ ಮಾಡಿದ್ದರಂತೆ, ಅಪ್ಪು ನೆನಪು ಮತ್ತೆ ಮತ್ತೆ ನನ್ನ ಕಾಡುತ್ತಿದೆ ಎನ್ನುವ ಅಶ್ವಿನಿ, ಈ ನಿರ್ಧಾರ ಮಾಡಿದ್ದಾರೆ ಎನ್ನಲಾಗಿದೆ.
Advertisement