ನಮ್ ಚಂದನವನದ ಅರಸ ಚಾಲೆಂಜಿಂಗ್ ಸ್ಟಾರ್ ದರ್ಶನ್ (Darshan) ಅಂದ್ರೆ ಅಭಿಮಾನಿಗಳಿಗೆ ಏನೋ ಒಂತರ ಖುಷಿ. ಇನ್ನಾ ದಚ್ಚು,ಎರಡು ವರ್ಷಗಳ ಬ್ಯಾಕ್ ಟೂ ಬ್ಯಾಕ್ ಸಿನಿಮಾಗಳ ಮೂಲಕ ಸಖತ್ ಬ್ಯುಸಿಯಾಗಿರುವ ನಟ ಅಂದ್ರೆ ತಪ್ಪಾಗಲಿಕ್ಕಿಲ್ಲ.
ಕಳೆದ ಜನವರಿಯಲ್ಲಿ ‘ಕ್ರಾಂತಿ’ಸಿನಿಮಾ ಬಿಡುಗಡೆಯಾಗಿ ಯಶಸ್ಸಿನ್ನ ಕಂಡ ಬೆನ್ನಲ್ಲೇ, ದರ್ಶನ್ ಹುಟ್ಟುಹಬ್ಬದಂದು ಮುಂದಿನ ಸಿನಿಮಾ ಕಾಟೇರ ಬಗ್ಗೆ ನಿರ್ದೇಶಕ ತರುಣ್ ಸುಧೀರ್ ಅನೌನ್ಸ್ ಮಾಡಿರುವುದು ನಿಜ. ಆದ್ರೆ ದಚ್ಚು ಮತ್ತೊಂದು ಗುಡ್ ನೀವ್ಸ್ ಕೊಡ್ತಿದಾರಂತೆ, ಎಸ್ ಇದೀಗ ನಿರ್ದೇಶಕ ದುನಿಯಾ ಸೂರಿ (Actor Darshan – Duniya Suri) ತಮ್ಮ ಸಾಮಾಜಿಕ ಜಾಲತಾಣದಲ್ಲಿ ನಟ ದರ್ಶನ್ ಅಭಿನಯದ “D58” ಸಿನಿಮಾದ ಬಗ್ಗೆ ಹೊಸದೊಂದು ಅಪ್‌ಡೇಟ್ ಕೊಟ್ಟು ಅಭಿಮಾನಿಗಳ ಕುತೂಹಲವನ್ನು ಮತ್ತಷ್ಟು ಕೆರಳುವಂತೆ ಮಾಡಿದ್ದಾರೆ.
ಸೂರಿ ತಮ್ಮ ಟ್ವೀಟರ್‌ನಲ್ಲಿ, “ಸ್ನೇಹಿತರೆ, ಸಾಮಾಜಿಕ ಮಾಧ್ಯಮದಿಂದ ವಿರಾಮ ತೆಗೆದುಕೊಳ್ಳುತ್ತಿದ್ದೇನೆ. 2025 ರಂದು D58 ಚಿತ್ರದ ಅಪ್‌ಡೇಟ್ ಜೊತೆ ಬರಲಿದ್ದೇನೆ. ತಡವಾಗುವ ಕಾರಣ ಡಿ ಬಾಸ್ ಅವರು ಬರುವ ದಿನಗಳಲ್ಲಿ ರಾಜ ವೀರ ಮದಕರಿ ನಾಯಕ ಸಿನಿಮಾದ ಶೂಟಿಂಗ್‌ನಲ್ಲಿ ಬಾಗಿಯಾಗಿದ್ದಾರೆ! ಬ್ಯಾಡ್ ಮಾನರ್ಸ್ ಇನ್ನೇನು ಬಿಡುಗಡೆಯಾಗಲಿದೆ, ನೋಡಿ ಎಂದಿನಂತೆ ಅರಸಿ!” ಎಂದು ಪೋಸ್ಟ್ ಮಾಡಿಕೊಳ್ಳುವುದರ ಮೂಲಕ ದಚ್ಚು ಅಭಿಮಾನಿಗಳಿಗೆ ಮತ್ತಷ್ಟು ಕುತೂಹಲ ಕೆರಳಿಸಿದ್ದಾರೆ.
ಸ್ನೇಹಿತರೆ, ಸಾಮಾಜಿಕ ಮಾಧ್ಯಮದಿಂದ ವಿರಾಮ ತೆಕೆದುಕೊಳ್ಳುತಿದ್ದೇನೆ. 2025 ರಂದು #D58 ಚಿತ್ರದ Update ಜೊತೆ ಬರಲಿದ್ದೇನೆ. ತಡವಾಗುವ ಕಾರಣ #DBoss ಅವರು ಬರುವ ದಿನಗಳಲ್ಲಿ #RajaVeeraMadakariNayaka ಚಿತ್ರದ ಶೂಟಿಂಗ್ ನಲ್ಲಿ ಬಾಗಿಯಾಗಳಿದ್ದರೆ!#BadManners ಇನ್ನೇನು ಬಿಡುಗಡೆಯಾಗಲಿದೆ, ನೋಡಿ ಎಂದಿನಂತೆ ಅರಸಿ!🤗#Kaatera
— Duniya Suri (@DirectorSuri_) March 10, 2023