ದಕ್ಷಿಣ ಭಾರತ (South Indian) ಚಿತ್ರರಂಗದ ಖ್ಯಾತ ಐಕಾನ್ ಸ್ಟಾರ್ (Icon Star) ನಟ ಅಲ್ಲು ಅರ್ಜುನ್ (Allu Arjun) ರವರು ಸದ್ಯ ಬಹುನಿರೀಕ್ಷಿತ ಪುಷ್ಪ 2 (Pushoa 2) ಸಿನಿಮಾದ ಚಿತ್ರೀಕರಣದಲ್ಲಿ ಬಹಳ ಬ್ಯುಸಿ ಆಗಿದ್ದಾರೆ. ಹೌದು ಪುಷ್ಪ (Pushpa) ಸೂಪರ್ ಚಿತ್ರ ಹಿಟ್ ಆಗಿರುವುದರಿಂದ ಅವರ ಸಂಭಾವನೆ ಕೂಡ ಏರಿಕೆಯಾಗಿದ್ದು ಪುಷ್ಪ ಸಿನಿಮಾವು ಪ್ಯಾನ್ ಇಂಡಿಯಾ (Pan India) ಲೆವೆಲ್‌ನಲ್ಲಿ ಬಿಡುಗಡೆಯಾಗಿ ಬಾಲಿವುಡ್‌ನಲ್ಲೂ (Bollywood) ಕೂಡ ಅಲ್ಲು ಅರ್ಜುನ್‌ಗೆ ಮಾರ್ಕೆಟ್ ಸೃಷ್ಟಿಯಾಗಿತ್ತು.
ಹೌದು ಈ ಕಾರಣದಿಂದಾಗಿ ಪುಷ್ಪ 2 ಸಿನಿಮಾವನ್ನು ಇನ್ನೂ ದೊಡ್ಡಮಟ್ಟದಲ್ಲಿ ನಿರ್ಮಾಣ ಮಾಡಲಾಗುತ್ತಿದ್ದು ಈ ನಡುವೆ ಅಲ್ಲು ಅರ್ಜುನ್ ಸಂಭಾವನೆ ಬಗ್ಗೆ ಚರ್ಚೆ ಪ್ರಾರಂಭವಾಗಿದೆ. ಹೌದು ಪ್ಯಾನ್ ಇಂಡಿಯಾ ಸ್ಟಾರ್ ಎನಿಸಿಕೊಂಡಿರುವ ಪ್ರಭಾಸ್ (Prabhas) ರವರಿಗಿಂತ ಕೂಡ ಅಲ್ಲು ಅರ್ಜುನ್ ಸಂಭಾವನೆ ಜಾಸ್ತಿ ಎಂದು ಇದೀಗ ಹೇಳಲಾಗುತ್ತಿದೆ.
ಹೌದು ನಟ ಅಲ್ಲು ಅರ್ಜುನ್ ಇದೀಗ ಹೊಸ ಸಿನಿಮಾವೊಂದನ್ನ ಒಪ್ಪಿಕೊಂಡಿದ್ದು ಟೀ-ಸಿರೀಸ್‌ನ (T – Series) ಭೂಷಣ್ ಕುಮಾರ್ (Bhushan Kumar) ರವರು ನಿರ್ಮಾಣ ಮಾಡಲಿರುವ ಆ ಸಿನಿಮಾವನ್ನು ಅರ್ಜುನ್ ರೆಡ್ಡಿ (Arjun Reddy) ಖ್ಯಾತಿಯ ಸಂದೀಪ್ ರೆಡ್ಡಿ ವಂಗಾ (Sandeep Reddy Vangaa) ಅವರು ನಿರ್ದೇಶನ ಮಾಡಲಿದ್ದು ಈ ಚಿತ್ರದಲ್ಲಿ ನಟಿಸುವುದಕ್ಕಾಗಿ ಅಲ್ಲು ಅರ್ಜುನ್ ಅವರು ಬರೋಬ್ವರಿ 150 ಕೋಟಿ ರೂ. ಡಿಮ್ಯಾಂಡ್ ಮಾಡಿದ್ದರು ಎಂಬ ಮಾಹಿತಿ ಸಿಕ್ಕಿದೆ. ಹೌದು ಆದರೆ ಅಂತಿಮವಾಗಿ 125 ಕೋಟಿ ರೂ. ಸಂಭಾವನೆಗೆ ಅಲ್ಲು ಅರ್ಜುನ್ ಒಪ್ಪಿಕೊಂಡಿದ್ದು ಆದರೂ 125 ಕೋಟಿ ರೂ.ಗಳೇನೂ ಸಣ್ಣ ಮೊತ್ತವಲ್ಲ ಬಿಡಿ. ಅಂದಹಾಗೆ ಈ ಸಿನಿಮಾವು ಸದ್ಯಕ್ಕಂತೂ ಸೆಟ್ಟೇರುವುದಿಲ್ಲ. ಹೌದು ಅಲ್ಲು ಅರ್ಜುನ್ ರವರು ಈ ವರ್ಷ ಪೂರ್ತಿ ಪುಷ್ಪ 2 ಕೆಲಸಗಳಲ್ಲೇ ಬಹಳ ಬ್ಯುಸಿ ಇರುತ್ತಾರೆ.
ಇನ್ನು ಹಾಗೇ ನೋಡುವುದಾದರೆ ಅಲ್ಲು ಅರ್ಜುನ್ ರವರ ಕಡೆಯಿಂದ ಪ್ಯಾನ್ ಇಂಡಿಯಾ ಸಿನಿಮಾ ಎಂದು ಬಂದಿರುವುದು ಕೇವಲ ಪುಷ್ಪ ಸಿನಿಮಾ ಮಾತ್ರ. ಅಲ್ಲದೆ ಆ ಸಿನಿಮಾದ ಒಟ್ಟಾರೆ ಗಳಿಕೆ 400 ಕೋಟಿ ರೂ. ಕೂಡ ದಾಟಿಲ್ಲ. ಆದರೆ ಪ್ರಭಾಸ್ ರವರ ಬಾಹುಬಲಿ (Bahubali) ಬಾಹುಬಲಿ 2 (Bahubali 2) ಸಾಹೋ (Sahoo) ರೀತಿಯ ಪ್ಯಾನ್ ಇಂಡಿಯಾ ಸಿನಿಮಾಗಳನ್ನು ಮಾಡಿದ್ದಾರೆ.
ಹೌದು ಅವರ ಮುಂದಿನ ಎರಡ್ಮೂರು ಸಿನಿಮಾಗಳು ಸಹ ಪ್ಯಾನ್ ಇಂಡಿಯಾ ಲೆವೆಲ್‌ನಲ್ಲೇ ಸದ್ದು ಮಾಡುತ್ತಿದ್ದು ಯಾವಾಗ ಬಾಹುಬಲಿ 2 ಹಿಟ್ ಆಯಿತೋ ಅದಾಗಲೇ ತಮ್ಮ ಸಂಭಾವನೆಯನ್ನು ಪ್ರಭಾಸ್ ರವರು 100 ಕೋಟಿ ರೂ. ಸಮೀಪ ಏರಿಸಿಕೊಂಡಿದ್ದರು. ಈಗವರು ಒಂದು ಸಿನಿಮಾಗೆ ಭರ್ತಿ 100 ಕೋಟಿ ರೂ. ಪಡೆಯುತ್ತಿದ್ದಯ ಅಲ್ಲು ಅರ್ಜುನ್ ಅದಕ್ಕೂ ಒಂದು ಹೆಜ್ಜೆ ಮುಂದೆ ಹೋಗಿ 125 ಕೋಟಿ ರೂ. ಪಡೆಯುವಲ್ಲಿ ಸಕ್ಸಸ್ ಆಗಿದ್ದಾರೆ.