ಅಂದಹಾಗೆ ಇತ್ತೀಚಿಗೆ ಸೋಷಿಯಲ್ ಮೀಡಿಯಾದಲ್ಲಿ ಭಾರಿ ಸುದ್ದಿಯಲ್ಲಿದ, ಬಿಗ್ ಬಾಸ್ ಸ್ಪರ್ಧಿ, ಸೋಷಿಯಲ್ ಮೀಡಿಯಾ ಸ್ಟಾರ್ ಹಾಗೂ ನಟ ಕಿರಿಕ್ ಕೀರ್ತಿ (Kirik Keerthi) ಕೆಲವು ತಿಂಗಳುಗಳ ಹಿಂದೆ ಯಾಕೋಕಾಣೆ ವೈಯಕ್ತಿಕ ಜೀವನದಲ್ಲಾದ ಕೆಲವು ಘಟನೆಗಳಿಂದ ಡಿಪ್ರೆಷನ್‌ಗೆ ಹೋಗಿದ್ದೆ ಎಂದು ತಾವೇ ಬರೆದುಕೊಂಡಿದ್ದು ನಿಜ. ಆದರೆ ಈಗ ಮತ್ತೊಂದು ವಿಡಿಯೋ ಅಪ್ಲೋಡ್ ಮಾಡಿ ಜನರು ಬೇಕಾಬಿಟ್ಟಿ ತಮ್ಮ ಜೀವನದ ಬಗ್ಗೆ ಕಾಮೆಂಟ್ ಮಾಡಿ ಟ್ರೋಲ್ ಮಾಡುತ್ತಿರುವುದಕ್ಕೆ ಬೇಸರ ವ್ಯಕ್ತ ಪಡಿಸಿದ್ದಲ್ಲದೆ ಅಂತವರಿಗೆ ಚಳಿ ಬಿಡಿಸಿದ್ದಾರೆ.
“ಸೋಷಿಯಲ್ ಮೀಡಿಯಾ ಹೀರೋಗಳೆ” ದಯವಿಟ್ಟು ನಮಗೆ ಬದುಕಲು ಬಿಡಿ. ಯಾಕೆ ನಮಗೆ ಟಾರ್ಚರ್ ಮಾಡುತ್ತಿರುವುದು? ನಮ್ಮ ಜೀವನದಲ್ಲಿ ಏನಾಗಿದೆ ಏನಾಗಿಲ್ಲ ಎಂಬುದರ ಬಗ್ಗೆ ನಿಮಗೆ ಏನ್ ಗೊತ್ತು? ಎಂದು ಪ್ರಶ್ನೆ ಮಾಡಿದ್ದಲ್ಲದೆ. ನಮ್ಮ ಬದುಕಿನ ಬಗ್ಗೇ ನಮಗೆ ಕ್ಲಾರಿಟಿ ಇಲ್ಲ ಅಂದ್ಮೇಲೆ ನಿಮಗೆ ಹೇಗೆ ಕ್ಲಾರಿಟಿ ಸಿಗುತ್ತದೆ ಎಂದು ಕಟುವಾಗಿ ಪ್ರಶ್ನೆ ಮಾಡಿದ್ದಾರೆ.. ವೈಯಕ್ತಿಕ ಜೀವನ ಪ್ರತಿಯೊಬ್ಬರಿಗೂ ಇರುತ್ತದೆ.
ನಿಮಗೆ ಬೇಕಾದ ರೀತಿಯಲ್ಲಿ ಕಲ್ಪಿಸಿಕೊಂಡು ಹೀಗಂತೆ, ಹಾಗಂತೆ ಎಂದು ನಿಮಗೆ ಇಷ್ಟ ಬಂದಹಾಗೆ ಬರೆಯುವುದನ್ನ ನಿಲ್ಲಿಸಿ,ಮತ್ತೊಬ್ಬರ ವೈಯಕ್ತಿಕ ಜೀವನದ ಬಗ್ಗೆ ಯಾಕೆ ಅಷ್ಟೊಂದು ಆಸಕ್ತಿ ಎಂದು ಕೀರ್ತಿ ವಿಡಿಯೋದಲ್ಲಿ ಮಾತನಾಡಿರುವುದು ಇದೀಗ ಸಖತ್ ವೈರಲ್ ಆಗಿದೆ.
View this post on Instagram