Rishab Shetty: ಕಾಂತಾರ 2 ಬಗ್ಗೆ ಅಧಿಕೃತ ಸುದ್ದಿ ಕೊಟ್ಟ ರಿಷಬ್ ಶೆಟ್ಟಿ.. ಎಲ್ಲರಲ್ಲೂ ಕುತೂಹಲ ಆರಂಭ

Advertisement
ನಮ್ಮ ಚೆಂದನವನದಲ್ಲಿ ಕಾಂತಾರ (Kantara Movie) ಸಿನಿಮಾದ ಮೋಡಿ ಇನ್ನೂ ಇದೆ ಎನ್ನಬಹುದು. ಈ ಚಿತ್ರದ ಎರಡನೇ ಭಾಗ ಯಾವಾಗ ಅನ್ನವವರಿಗೆ ಸಿನಿಮಾದ ನಟ ಹಾಗೂ ನಿರ್ದೇಶಕ ರಿಷಬ್ ಶೆಟ್ಟಿ (Rishab Shetty) ಯವರು ಇದೀಗ ಉತ್ತರ ಕೊಟ್ಟಿದ್ದಾರೆ. ಹೌದು ಇಲ್ಲಿವರೆಗೂ ನೀವು ನೋಡಿರೋದು ಕಾಂತಾರ-2 ಸಿನಿಮಾ ಇನ್ಮುಂದೆ ಬರುವುದು ಕಾಂತಾರ (Kantara Prequel Movie) ಪ್ರಿಕ್ವೆಲ್ ಎಂದು ಹೇಳಿ ಹುಳ ಬಿಟ್ಟಿದ್ದಾರೆ. ಇದೇನೋ ನಿಜ ಈ ವಿಚಾರ ಇದೀಗ ಕ್ಲಿಯರ್ ಆಯಿತು ಬಿಡಿ. ಆದರೆ ಪ್ರಿಕ್ವಿಲ್ ಮಾಡೋಕೆ (Sandalwood Cinema) ಸಾಕಷ್ಟು ತಯಾರಿ ಕೂಡ ನಡೆದಿದ್ದು ಸಿನಿಮಾ ತಯಾರಿ ಅನ್ನುದು ಅಷ್ಟು ಸುಲಭದ ಮಾತಲ್ಲ. ಹೌದು ರಿಷಬ್ ಶೆಟ್ಟಿ ಪ್ರಿಕ್ವೆಲ್ ಕಥೆಗೆ ಒಂದು ತಂಡ (Team) ಕಳೆದ ಕೆಲವು ತಿಂಗಳಿನಿಂದ ರಿಸರ್ಚ್ ಮಾಡ್ತಿದೆ ಎನ್ನುವ ಸುದ್ದಿ ಕೂಡ ಇದೆ.
Advertisement
ಹೌದು ಇತ್ತೀಚೆಗಷ್ಟೇ ಮುಂಬೈನಲ್ಲಿ ದಾದಾ ಸಾಹೇಬ್ ಪಾಲ್ಕೆ (Dada Saheb Palke) ಅಕಾಡೆಮಿ ಪ್ರಶಸ್ತಿ ಪಡೆದು ಬಂದ ರಿಷಬ್ ಶೆಟ್ಟಿ ಯವರು ವಿಮಾನ ನಿಲ್ದಾಣದಲ್ಲಿಯೇ (Airport) ಮಾಧ್ಯಮಕ್ಕೂ ಮಾತನಾಡಿದ್ದರು. ಪ್ರಶಸ್ತಿ ಕುರಿತು ಕೂಡ ಹೇಳಿಕೊಂಡಿದ್ದರು. ಇನ್ನು ಈ ರೀತಿಯಾಗಿ ದಿಢೀರನೆ ಮಾಧ್ಯಮವನ್ನ ವಿಮಾನ ನಿಲ್ದಾಣದಲ್ಲಿಯೇ ಮಾತನಾಡಿಸಿ ರಿಷಬ್ ಶೆಟ್ಟಿ ಯವರು ಹೋಗಿದ್ದು ಬೇರೆ ಎಲ್ಲೋ ಅಲ್ಲ. ತಮ್ಮ ಕಾಂತಾರ ಪ್ರಿಕ್ವೆಲ್ ಚಿತ್ರದ ಕೆಲಸದಲ್ಲಿ ತಲ್ಲೀನರಾಗಲು. ಇನ್ನು ರಿಷಬ್ ಶೆಟ್ಟಿ ಎಂದಿನಂತೆ ತಮ್ಮ ಕೆಲಸ ಮುಂದುವರೆಸಿದ್ದು ಯಾವುದೇ ರೀತಿಯ ಬೇರೆ ವಿಷಯಗಳನ್ನ ತಲೆಗೆ ಹಚ್ಚಿಕೊಳ್ಳದೇ ಧ್ಯಾನಸ್ಥ ಸ್ಥಿತಿಯಲ್ಲಿ ಕಾಂತಾರ ಸುನಿಮಾ ಪ್ರಿಕ್ವೆಲ್ ಕೆತ್ತಲು ಕುಳಿತಿದ್ದಾರೆ. ಆದರೆ ಶೆಟ್ರಿಗೆ ಇನ್ನೂ ಒಂದು ಒತ್ತಡ ಇದ್ದೇ ಇದೆ. ಹೌದು ಅದು ಗೆಲುವು. ಜನರ ನಿರೀಕ್ಷೆಯನ್ನ ಹುಸಿಗೊಳಿಸದೇ ಇರೋವಂತೆ ಕಥೆ ಮಾಡಬೇಕು ಎನ್ನುವಂತಹ ಒತ್ತಡ.
ಹೌದು ನಿಜಕ್ಕೂ ಈ ಕಾಂತಾರ ಚಿತ್ರಕ್ಕೆ ಸಾಮಾನ್ಯ ಗೆಲುವು ಸಿಕ್ಕಿಲ್ಲ. ನಿರೀಕ್ಷೆ ಮೀರಿದಂತಹ ಸಿಕ್ಕ ಗೆಲುವನ್ನ ಯಾರು ಕೂಡ ಬಿಡೋದಿಲ್ಲ. ಅದೇ ರೀತಿಯಾಗಿ ರಿಷಬ್ ಶೆಟ್ರು ಕಾಂತಾರ ಚಿತ್ರಕ್ಕಿಂತಲೂ ಹೆಚ್ಚಿನದ್ದೇನೋ ಮಾಡಬೇಕಿದ್ದು ಅದಕ್ಕಾಗಿಯೇ ಶ್ರಮ ಪಡಲೇಬೇಕಿದೆ. ಜೌದು ಒತ್ತಡದಲ್ಲಿ ಏನು ಹುಟ್ಟುತ್ತದೆಯೋ ಏನೋ. ಆದರೆ ಪ್ರೀಕ್ವೆಲ್ ಇರಲಿ ಸೀಕ್ವೆಲ್ ಇರಲಿ ಹಿಟ್ ಆಗಿರೋದು ಕಡಿಮೆ. ಹಾಗಂತ ಸೋಲಿದೆ ಎಂದು ಹೇಳೋದು ಸರಿ ಅಲ್ಲ. ಆಪ್ತಮಿತ್ರ ಚಿತ್ರ ಗೆದ್ದ ಮೇಲೆಯೇ ನಿರ್ದೇಶಕ ವಾಸು ಆಪ್ತರಕ್ಷಕ ಚಿತ್ರವನ್ನ ಗೆಲ್ಲಿಸಿ ತೋರಿಸಿದ್ದರು. ಸದ್ಯ ಅದೇ ಒತ್ತಡದಲ್ಲಿಯೆ ರಿಷಬ್ ಶೆಟ್ಟಿಯವರು ಇದೀಗ ಕೆಲಸ ಮಾಡುತ್ತಿದ್ದಾರೆ. ಕಾಂತಾರ ಚಿತ್ರದ ಪ್ರಿಕ್ವೆಲ್ ಸಿನಿಮಾದ ಬಜೆಟ್ ಹೆಚ್ಚಿದೆ ಅನ್ನುವ ಮಾಹಿತಿನೂ ಹರಿದಾಡುತ್ತಿದೆ.
Advertisement