ಕಳೆದ ವರುಷ ಹೊಸಪೇಟೆಯಲ್ಲಿ (Hospet) ನಟ ದರ್ಶನ್ (Darshan) ಮೇಲೆ ಕಿಡಿಗೇಡಿ ಒಬ್ಬ ಚಪ್ಪಲಿ ಎಸೆದ ಘಟನೆ ಬಗ್ಗೆ ನಟ ಶಿವರಾಜ್‌ಕುಮಾರ್ (Shiva Rajkumar) ಅಂದೇ ಪ್ರತಿಕ್ರಿಯಿಸಿದ್ದರು. ಹೌದು ವಿಡಿಯೋ ಪೋಸ್ಟ್ (Video Post) ಮಾಡಿ ಆ ಘಟನೆಯನ್ನು ಖಂಡಿಸಿದ್ದರು. ಸಾಕಷ್ಟು ಜನ ಸೆಲೆಬ್ರೆಟಿಗಳು (Celebrity) ಅಭಿಮಾನಿಗಳು (Fans) ಈ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ್ದರು ಹಾಗೂ ದರ್ಶನ್‌ಗೆ ಬೆಂಬಲ ನೀಡಿದ್ದರು.
ಹೌದು ಕ್ರಾಂತಿ (Kranti) ಚಿತ್ರದ 2ನೇ ಸಾಂಗ್ ರಿಲೀಸ್ ವೇಳೆ ನಟ ದರ್ಶನ್‌ಗೆ ಅವಮಾನ ಆದ ಘಟನೆ ಬಗ್ಗೆ ಭಾರೀ ಚರ್ಚೆ ನಡೀದಿತ್ತು. ಮತ್ತೊಂದು ಕಡೆ ಘಟನೆ ಬಗ್ಗೆ ಪೊಲೀಸರು ತನಿಖೆ ನಡೆಸಿದ್ದರು. ಹೊಸಪೇಟೆಯಲ್ಲಿ ದರ್ಶನ್ ಫ್ಯಾನ್ಸ್ ಹಾಗೂ ಪುನೀತ್ (Puneeth Rajkumar) ಫ್ಯಾನ್ಸ್ ನಡುವೆ ಭಾರೀ ಸಂಘರ್ಷ ಏರ್ಪಟ್ಟಿತ್ತು. ಹಾಗಾಗಿ ದರ್ಶನ್ ಮೇಲೆ ಅಪ್ಪು ಅಭಿಮಾನಿಯೇ ಚಪ್ಪಲಿ ಎಸೆದಿದ್ದಾನೆ ಎನ್ನುವಂತೆ ಕೆಲವರು ಮಾತನಾಡಿದ್ದರು. ಇದನ್ನು ದೊಡ್ಮನೆ ಫ್ಯಾನ್ಸ್ ಒಪ್ಪಲು ಸಿದ್ಧರಿಲ್ಲ. ತಪ್ಪಿತಸ್ಥ ಯಾರು ಎಂದು ಗೊತ್ತಾಗುವ ಮುಂಚೆ ನಮ್ಮವರ ಮೇಲೆ ಗೂಬೆ ಕೂರಿಸುವುದು ಸರಿಯಲ್ಲ ಎಂದಿದ್ದರು.
ಇನ್ನು ಈ ಘಟನೆ ನಡೆಯುತ್ತಿದ್ದಂತೆ ಮರುದಿನ ಬೆಳಗ್ಗೆ ನಟ ಶಿವರಾಜ್‌ಕುಮಾರ್ ಪ್ರತಿಕ್ರಿಯಿಸಿದ್ದರು. ಮನುಷ್ಯತ್ವ ಮರೆತು ಯಾರೂ ಈ ರೀತಿಯ ಕೃತ್ಯಗಳನ್ನು ನಡೆಸಬಾರದು ಎಂದು ವಿನಂತಿಸಿಕೊಂಡಿದ್ದರು. ಹೊಸಪೇಟೆಯಲ್ಲಿ ನಡೆದ ಘಟನೆ ನೋಡಿ ನನ್ನ ಮನಸ್ಸಿಗೆ ಬಹಳ ಬೇಸರವಾಗಿದೆ. ಯಾರು ಮಾಡಿದ್ದರೂ ಇದು ದೊಡ್ಡ ತಪ್ಪು. ಕಲಾವಿದರೆಲ್ಲಾ ಒಂದೇ ಕುಟುಂಬಕ್ಕೆ ಸೇರಿದವರು. ಈ ಮಾತನ್ನು ಅಪ್ಪಾಜಿ ಕೂಡಾ ಆಗ್ಗಾಗ್ಗೆ ಹೇಳುತ್ತಿದ್ದರು.
ಒಬ್ಬರಿಗೆ ಅವಮಾನ ಆದರೆ ಉಳಿದವರಿಗೂ ಅವಮಾನ ಆದಂತೆ. ಯಾರೂ ಈ ರೀತಿ ಮಾಡಬೇಡಿ ಎಲ್ಲರನ್ನೂ ಒಂದೇ ರೀತಿ ನೋಡಿ, ಏಕೆಂದರೆ ನಾವೆಲ್ಲರೂ ಒಂದೇ ಒಂದೇ ಒಂದೇ ಎಂದಿದ್ದರು ನಂತರ ಗೌರೀಶ್ ಅಕ್ಕಿ ಯೂಟ್ಯೂಬ್ ಸಂದರ್ಶನದಲ್ಲಿ ಘಟನೆ ಬಗ್ಗೆ ಶಿವಣ್ಣ ಮಾತನಾಡಿದ್ದರು. ಅಲ್ಲದೇ ದರ್ಶನ್ ಬಗ್ಗೆ ಶಿವಣ್ಣ ಎಂತಹ ಮಾತನ್ನು ಹೇಳಿದ್ದಾರೆ ಗೊತ್ತಾ?
ದರ್ಶನ್ ನನ್ನನ್ನು ಅಪ್ಪಾಜಿ ಎಂದು ಕರೆದರು ಅದನ್ನು ಕೇಳೋದೆ ಖುಷಿಯಾಗುತ್ತದೆ. ನನ್ನ ಶಿವರಾಜ್‌ಕುಮಾರ್ ಅನ್ನಲಿಲ್ಲ. ಇದೇ ನಮ್ಮ ಸಂಬಂದ. ಯಾಕೆಂದರೆ ಈ ಸಿನಿಮಾ ಟೈಟಲ್ ನಮ್ಮ ಮನೆ ಟೈಟಲ್ ಎಲ್ಲಾ ಒಟ್ಟಿಗೆ ಹೊಗುತ್ತೆ. ನಾವೆಲ್ಲಾ ಜೊತೆಜೊತೆಯಾಗೆ ಬಂದವರು. ಅಪ್ಪಾಜಿ ಜೊತೆ ತೂಗುದೀಪ ಶ್ರೀನಿವಾಸ್ ರವರು. ನಮ್ ಜೊತೆಲಿ ದರ್ಶಮ್ ಮತ್ತು ದಿನಕರ್. ಇದೇ ನಮ್ ಸಂಬಂದ. ಒಂದ್ ಮಾತಲ್ಲಿ ಹೇಳುವುದಾದರೆ ಈ ಸಂಬಂದ ಹೀಗೆ ಉಳಿದುಕೊಂಡು ಹೋಗ ಬೇಕು ಎನ್ನುವುದು ನನ್ನ ಆಸೆ.
ಯಾಕೆಂದರೆ ತೂಗುದೀಪ ಅವರನ್ನ ಕಂಡರೆ ನನಗೆ ಬಹಳಾ ಇಷ್ಟ. ಅಪ್ಪಾಜಿ ಬಳಿ ಯಾವಾಗಲು ಹೇಳುತ್ತಿದ್ದೆ. ನಿಮ್ ಗಿಂತ ಚೆನ್ನಾಗಿ ಆಕ್ಟ್ ಮಾಡ್ತರೆ ಅವ್ರು ಅಂತಿದ್ದೆ. ಅಷ್ಟು ಇಷ್ಟ ಅವರೆಂದರೆ. ಇನ್ನು ಅವರ ಪ್ಯಾಮಿಲ್ ಯವರು ಕೂಡ ಅಷ್ಟೇ ಇಷ್ಟ. ಮೈಸೂರಿಗೆ ಹೋದಾಗ ಅವರ ಮನೆಗೆ ಹೋಗ್ತಿದ್ವಿ ಮಾಂಸ ಸಾರು ಚೆನ್ನಾಗಿ ಮಾಡ್ತಾರೆ. ನಮ್ಮ ಸಂಬಂದ ಹೀಗೆ ಉಳಿಯಬೇಕು ಎಂದರು ಶಿವಣ್ಣ. ಈ ಮಾತು ಕೇಳಿಯಾದರು ಅಭಿಮಾನಿಗಳು ಫ್ಯಾನ್ ವಾರ್ ಬಿಡಬೇಕು. ಅಲ್ಲವೇ?