Karnataka Times
Trending Stories, Viral News, Gossips & Everything in Kannada

Kapil Sharma Show: ರಂಗೇರಲಿದೆ ಕಪಿಲ್ ಶರ್ಮಾ ಶೋ; ನೆಸ್ಟ್ ಗೆಸ್ಟ್ ನರೇಂದ್ರ ಮೋದಿ!

Advertisement

ಕೇವಲ ಬಾಲಿವುಡ್ ಮಾತ್ರವಲ್ಲದೆ ವಿಶ್ವಾದ್ಯಂತ ಅಭಿಮಾನಿಗಳನ್ನ ಗಳಿಸಿಕೊಂಡಿರುವ ಕಾಮಿಡಿ ಕಿಂಗ್ ಕಪಿಲ್ ಶರ್ಮ ಇದೀಗ ತಮ್ಮ ಹೊಸ ಚಿತ್ರ ಜ್ವಿಗಾಟೋ ಪ್ರಚಾರದಲ್ಲಿ ನಿರತರಾಗಿದ್ದಾರೆ. ಸದಾ ಕಾಮಿಡಿ ಮಾಡುತ್ತಾ ಎಲ್ಲರನ್ನು ನಕ್ಕು ನಗಿಸುವ ಕಪಿಲ್ ಶರ್ಮಾ ಅವರು ಈ ಸಿನಿಮಾದಲ್ಲಿ ಗಂಭೀರವಾದ ಪಾತ್ರವನ್ನು ನಿಭಾಯಿಸಿದ್ದಾರೆ. ಇವರ ಈ ಅಭಿನಯಕ್ಕೆ ಎಲ್ಲರಿಂದ ಪ್ರಶಂಸೆ ವ್ಯಕ್ತವಾಗಿದೆ. ಈ ಸಿನಿಮಾದ ಪ್ರಚಾರದ ಸಮಯದಲ್ಲಿ ಜೀವನದಲ್ಲಿ ಆತ್ಮಹತ್ಯೆ ಮಾಡಿಕೊಳ್ಳಲು ಯೋಚಿಸಿದ ಕ್ಷಣದ ಬಗ್ಗೆ ಕಪಿಲ್ ಶರ್ಮಾ ಹಂಚಿಕೊಂಡಿದ್ದಾರೆ.

ಹೌದು ಸದಾ ನಗ್ತಾ ಇರುವ ಕಪಿಲ್ ಶರ್ಮ ಕೂಡ ಆತ್ಮಹತ್ಯೆಗೆ ಯೋಚಿಸಿದ್ರಾ ಅಂತ ನಿಮಗೂ ಯೋಚನೆ ಆಗಬಹುದು. ಆದರೆ ಇದು ಸತ್ಯ. ಕಪಿಲ್ ಶರ್ಮಾ ಅವರು ಜೀವನದಲ್ಲಿ ಖಿನ್ನತೆಗೆ ಒಳಗಾಗಿದ್ದ ಸಮಯವೂ ಇತ್ತು. ಈ ನಗುತ್ತಿರುವ ಮುಖದ ಹಿಂದೆ ಅಳುವಿನ ಸಂದರ್ಭಗಳು ಕೂಡ ಇದ್ದವು. ಸುಧೀರ್ ಚೌದರಿ ಅವರ ’ಸೀಧಿ ಬಾತ್’ ಕಾರ್ಯಕ್ರಮದಲ್ಲಿ, ಕಪಿಲ್ ಶರ್ಮಾ ಭಾಗವಹಿಸಿದ್ದು ತಾವು ಆತ್ಮಹತ್ಯೆ ಮಾಡಿಕೊಳ್ಳಲು ಯೋಚಿಸಿದ್ದ ದಿನಗಳ ಬಗ್ಗೆ ಹೇಳಿಕೊಂಡಿದ್ದಾರೆ.

Advertisement

ನೀವು ಎಂದಾದರೂ ಆತ್ಮಹತ್ಯೆಗೆ ಯೋಚಿಸಿದ್ದೀರಾ ಎಂದು ಅವರಿಗೆ ಪ್ರಶ್ನೆ ಕೇಳಲಾಗಿತ್ತು. ಅದಕ್ಕೆ ಉತ್ತರಿಸಿದ ಕಪಿಲ್ ಶರ್ಮ. “ಹೌದು ಅಂತಹ ಸಂದರ್ಭವು ಬಂದಿತ್ತು. ನನಗೆ ಯಾರು ನನ್ನವರು ಅಲ್ಲ ಎಂದು ಭಾಸವಾಗುತ್ತಿತ್ತು. ಯಾರು ತಿಳಿಸಿ ಹೇಳುವವರು ಇಲ್ಲ, ಕಾಳಜಿ ವಹಿಸಲು ಕೂಡ ಯಾರು ಇಲ್ಲ ಸುತ್ತಲೂ ಇರುವ ಜನರಲ್ಲಿ ಲಾಭದ ಉದ್ದೇಶಕ್ಕಾಗಿ ನಮ್ಮ ಜೊತೆಗೆ ಇರುವವರು ಯಾರು ಅಂತ ತಿಳಿಯುತ್ತಿರಲಿಲ್ಲ. ಇಂದು ಅನೇಕ ಕಲಾವಿದರು ಅದರಲ್ಲಿ ನಟರು ಉತ್ತಮ ಹಂತ ತಲುಪುವುದಕ್ಕೆ ಸಾಕಷ್ಟು ಶ್ರಮಿಸುತ್ತಿದ್ದಾರೆ” ಎಂದು ಕಪಿಲ್ ಶರ್ಮ ಹೇಳುತ್ತಾರೆ.

Kapil Sharma Show ದಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ?

ಕಪಿಲ್ ಶರ್ಮಾ ಅವರ ’ದಿ ಕಪಿಲ್ ಶರ್ಮಾ ಶೋ’, ನಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಅತಿಥಿಯಾಗಿ ಬರಬೇಕು ಎಂದು ಕಪಿಲ್ ಶರ್ಮ ಖುದ್ದಾಗಿ ಪ್ರಧಾನಮಂತ್ರಿ ಅವರನ್ನ ಭೇಟಿಯಾಗಿ ಕೇಳಿದ್ದರಂತೆ. ಸರ್ ನೀವು ಒಮ್ಮೆಯಾದರೂ ನಮ್ಮ ಕಾರ್ಯಕ್ರಮಕ್ಕೆ ಬರಬೇಕು ಎಂದು ಹೇಳಿದೆ. ಅವರು ನನ್ನ ಮಾತಿಗೆ ಇಲ್ಲ ಎಂದು ಹೇಳಲಿಲ್ಲ ಆದರೆ ಅವರು ನನ್ನ ವಿರೋಧಿಗಳು ಈಗಾಗಲೇ ಸಾಕಷ್ಟು ಹಾಸ್ಯ ಮಾಡುತ್ತಿದ್ದಾರೆ ಎಂದು ಹೇಳಿದರು ಆದರೆ ಯಾವಾಗಲಾದರೂ ಒಮ್ಮೆ ಬರುತ್ತೇನೆ ಎಂದು ಹೇಳಿದ್ದಾರೆ. ಅವರು ನಮ್ಮ ಕಾರ್ಯಕ್ರಮಕ್ಕೆ ಬಂದರೆ ಅದು ನಮ್ಮ ಅದೃಷ್ಟ ಎಂದು ಕಪಿಲ್ ಶರ್ಮ ಹೇಳಿದ್ದಾರೆ. ಹಾಗಾಗಿ ಮೋದಿ ಅಭಿಮಾನಿಗಳಲ್ಲಿ ಕಪಿಲ್ ಶರ್ಮ ಅವರ ಶೋ ಗೆ ಮೋದಿ ಬರುತ್ತಾರಾ ಎನ್ನುವ ಕುತೂಹಲ ಮೂಡಿದೆ.

Advertisement

Leave A Reply

Your email address will not be published.