ಬಾಲಿವುಡ್‌ನ ಸ್ಟಾರ್ ದಂಪತಿಯಲ್ಲಿ ಒಬ್ಬರು ರಣಬೀರ್ ಕಪೂರ್ ಮತ್ತು ಆಲಿಯಾ ಭಟ್. ಇವರಿಬ್ಬರು 2022ರಲ್ಲಿ ಏಪ್ರಿಲ್ 14 ರಂದು ಹಸೆಮಣೆ ಏರಿದ್ದರು. ಮದುವೆಯಾದ ಏಳು ತಿಂಗಳಿಗೇ ಮುದ್ದಾದ ಮಗುವಿಗೆ ಜನ್ಮ ನೀಡಿದ್ದರು. ಅಲಿಯಾ ಮಗಳಿಗೆ ರಾಹ ಎಂದು ನಾಮಕರಣ ಕೂಡಾ ನಡೆಯಿತು. ಸದ್ಯ ಬಾಲಿವುಡ್ ಸ್ಟಾರ್ ನಟ ರಣಬೀರ್ ಕಪೂರ್ ಅವರು ಮಗಳ ಆರೈಕೆಯಲ್ಲಿ ತಮ್ಮನು ತಾವು ತೊಡಗಿಸಿಕೊಂಡಿದ್ದಾರೆ.ಮುಂಬೈನಲ್ಲಿ ವಾಸವಾಗಿರುವ ಇವರು ಆಗಾಗ ತಮ್ಮ ಜೀವನದ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳುತ್ತಾರೆ.
ಇತ್ತೀಚಿನ ಸಂದರ್ಶನದಲ್ಲಿ ರಣಬೀರ್ ವ್ಯೆಯಕ್ತಿಕ ವಿಚಾರಗಳ ಕುರಿತು ಹೇಳಿಕೊಂಡಿದ್ದಾರೆ. ಯಾವಾಗಲೂ ತಮ್ಮ ಮಗಳ ಕುರಿತು ಹೆಚ್ಚು ಮಾತನಾಡುವ ರಣಬೀರ್ ಕಪೂರ್ ಬಳಿ ಸಂದರ್ಶಕ ಆಲಿಯಾ ಭಟ್ ಉತ್ತಮ ಪತ್ನಿ ಅಥವಾ , ಉತ್ತಮ ತಾಯಿಯೇ ಎಂದು ಪ್ರಶ್ನೆ ಕೇಳಿದ್ದಾರೆ. ಇದಕ್ಕೆ ಉತ್ತರಿಸಿದ ರಣಬೀರ್ ಕಪೂರ್ ಅವರು ಎರಡು ಜವಾಬ್ದಾರಿಗಳನ್ನು ಕೂಡಾ ಅದ್ಭುತವಾಗಿ ನಿಭಾಹಿಸುತ್ತಾರೆ. ಆದರೆ ಆಕೆ ಉತ್ತಮ ಹೆಂಡತಿಗಿಂಲೂ ಒಬ್ಬ ಒಳ್ಳೆ ತಾಯಿ ಎಂದಿದ್ದಾರೆ. ಅಂದರೆ ಮಗುವಾದ ಮೇಲೆ ಪತ್ನಿಗಿಂತಲೂ ಹೆಚ್ಚಾಗಿ ತಾಯಿಯಾಗಿಯೇ ಇದ್ದಾರೆ ಎನ್ನುವ ಮಾತಿಗೆ ನೆಟ್ಟಿಗರು ರಣಬೀರ್ ಅವರನ್ನು ಟ್ರೋಲ್ ಮಾಡುತ್ತಿದ್ದಾರೆ. ಆದ್ರೆ ಟ್ರೋಲಿಗರ ಮಾತಿಗೆ ತಲೆಗೊಡದೆ ಇಬ್ಬರು ಕೂಡಾ ಮಗುವಿನ ಜೊತೆಗೆ ಉತ್ತಮ ಸಮಯ ಕಳೆಯುತ್ತಿದ್ದಾರೆ.
ಆಗಾಗ್ಗೆ ಈ ದಂಪತಿ ತಮ್ಮ ಮಗುವಿನ ಕುರಿತು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುತ್ತಲೇ ಇರುತ್ತಾರೆ ಆದ್ರೆ ಇದುವರೆಗೆ ತಮ್ಮ ಮಗುವಿನ ಪೋಟೋವನ್ನು ಮಾತ್ರ ರೀವೀಲ್ ಮಾಡಲಿಲ್ಲ.
ಇನ್ನು ಮಗುವನ್ನು ಜೋಪಾನ ಮಾಡುವುದಲ್ಲಿ ರಣಬೀರ್ ಎಕ್ಸ್‌ಪರ್ಟ್ ಆಗಿದ್ದೇನೆ ಎಂದಿದ್ದು , ಮಗುವನ್ನು ಹೇಗೆ ನೋಡಿಕೊಳ್ಳಬೇಕು, ಮಗುವಿಗೆ ಏನೇನು ಮಾಡಿದರೆ ಸಂತೋಷವಾಗುತ್ತದೆ ಎಂದು ತಿಳಿಸಿದ್ದಾರೆ.
ಮಗು ಹುಟ್ಟಿ ಕೆಲವು ತಿಂಗಳ ತನಕ ಮಗು ಹಾಲು ಕುಡಿದ ನಂತರ ತೇಗುವುದು ತುಂಬಾ ಇಂಪಾರ್ಟೆಂಟ್ ಎಂದಿದ್ದು. ಪ್ರತಿ ಸಲ ಮಗು ಹಾಲು ಕುಡಿದಾಗ ಕನಿಷ್ಠ ಎರಡು ಸಲವಾದರೂ ತೇಗು ಬರಬೇಕು. ಈಗ ನಾನು ಮಗುವನ್ನು ನೋಡಿಕೊಳ್ಳುವ ವಿಚಾರದಲ್ಲಿ ಎಕ್ಸಪರ್ಟ್ ಆಗಿದ್ದೇನೆ ಎಂದು ಸಂತೋಷ ಹಂಚಿಕೊಂಡಿದ್ದಾರೆ.