Upendra: ಕೆಜಿಎಫ್ ಬಗ್ಗೆ ನೆಗೆಟಿವ್ ಮಾತಾಡಿದ ಪತ್ರಕರ್ತನಿಗೆ ಖಡಕ್ ಉತ್ತರ ಕೊಟ್ಟ ಉಪೇಂದ್ರ

Advertisement
ಸದ್ಯ ಕನ್ನಡ ಚಿತ್ರರಂಗದ (KFI) ಮತ್ತೊಂದು ಬಹುನಿರೀಕ್ಷಿತ ಚಿತ್ರ ಕಬ್ಜ (Kabza) ಸಿನಿಮಾ ಬಿಡುಗಡೆಗೆ ದಿನಗಣನೆ ಶುರುವಾಗಿದೆ. ಹೌದು ಸದ್ಯ ಇದೀಗ ರಿಯಲ್ ಸ್ಟಾರ್ ಉಪೇಂದ್ರ (Upendra) ಮತ್ತು ಅವರ ತಂಡ ದೇಶದ ವಿವಿಧ ನಗರಗಳಲ್ಲಿ ಸುತ್ತಾಡಿ ಸಿನಿಮಾ ಪ್ರಚಾರ ಮಾಡುತ್ತಿದ್ದು ಮುಂಬೈ (Mumbai) ನಂತರ ಚೆನ್ನೈನಲ್ಲೂ (Chennai) ಸುದ್ದಿಗೋಷ್ಠಿ ನಡೆಸಿ ಸಿನಿಮಾ ತಂಡ ಪತ್ರಕರ್ತರ ಪ್ರಶ್ನೆಗಳಿಗೆ ಉತ್ತರಿಸಿದೆ. ಇನ್ನು ತಮಿಳುನಾಡಿನಲ್ಲೂ(Tamil Nadu) ಈ ಆಕ್ಷನ್ ಎಂಟರ್‌ಟೈನರ್ ಸಿನಿಮಾ ಬಗ್ಗೆ ಭಾರೀ ನಿರೀಕ್ಷೆ ಇದೆ ಎನ್ನಬಹುದು.
ಆರ್. ಚಂದ್ರು (R. Chandru) ನಿರ್ದೇಶನದ ಪ್ಯಾನ್ ಇಂಡಿಯಾ ಸಿನಿಮಾ ಕಬ್ಜ ಮುಂದಿನ ವಾರ ತೆರೆಗೆ ಬರುತ್ತಿದ್ದು ಈಗಾಗಲೇ ಚಿತ್ರದ ಟ್ರೈಲರ್ ಮತ್ತು ಹಾಡುಗಳಯ ರಿಲೀಸ್ ಆಗಿ ಸಿನಿಮಾ ಬಗ್ಗೆ ಹೈಪ್ ಕ್ರಿಯೇಟ್ ಮಾಡಿದೆ ಎನ್ನಬಹುದು. ಬಹಳ ದೊಡ್ಡಮಟ್ಟದಲ್ಲಿ ಸಿನಿಮಾ ತೆರೆಗಪ್ಪಳಿಸಲಿದ್ದು ಈ ಫಿಕ್ಷನ್ ಪೀರಿಯಡ್ ಆಕ್ಷನ್ ಸಿನಿಮಾದಲ್ಲಿ ಉಪೇಂದ್ರ ರವರು ಗ್ಯಾಂಗ್‌ಸ್ಟರ್ ಆಗಿ ಅಬ್ಬರಿಸಿದ್ದಾರೆ. ನಾಯಕಿಯಾಗಿ ಶ್ರಿಯಾ ಶರಣ್ (Shreya Sharan) ಮಿಂಚಿದ್ದು ಕಿಚ್ಚ ಸುದೀಪ್ (Kiccha Sudeep) ಹಾಗೂ ಶಿವರಾಜ್‌ಕುಮಾರ್ (Shiva Rajkumar) ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.
Advertisement
ಸದ್ಯ ಚೆನ್ನೈನಲ್ಲಿ ಕಬ್ಜ ಚಿತ್ರದ ಸುದ್ದಿಗೋಷ್ಠಿ ನಡೆದಿದ್ದು ಈ ಸಂದರ್ಭದಲ್ಲಿ ಪತ್ರಕರ್ತರು ಸಾಕಷ್ಟು ಪ್ರಶ್ನೆಗಳನ್ನು ಕೇಳಿದರು. ಇನ್ನು ಅದರಲ್ಲಿ ಒಬ್ಬರು ಸಿನಿಮಾ ಅಂದ್ರೆ ಕಲರ್‌ಫುಲ್ ಆಗಿ ತೋರಿಸಬೇಕು. KGF ಸಿನಿಮಾ ಸ್ಕ್ರೀನ್ ತುಂಬೆಲ್ಲಾ ಬರೀ ಕತ್ತಲು ಕತ್ತಲು ಇದ್ದು ಫುಲ್ ಬ್ಲ್ಯಾಕ್ ಬ್ಲ್ಯಾಕ್ ಕೊಂಚ ಬ್ರೌನ್ ಕಲರ್ ಇತ್ತು. ಈಗ ಕಬ್ಜ ನೋಡಿದ್ರೆ ಇದ್ರಲ್ಲೂ ಕೂಡ ಬ್ಲ್ಯಾಕ್, ಬ್ರೌನ್ ಜಾಸ್ತಿ ಕಾಣಿಸ್ತಿದೆ ಎಂದಿದ್ದಾರೆ. ಇದಕ್ಕೆ ತಮ್ಮದೇ ಆದ ಸ್ಟೈಲ್‌ನಲ್ಲಿ ಉತ್ತರಿಸಿದ ಉಪ್ಪಿ ಅಂಡರ್‌ವರ್ಲ್ಡ್ ಅಲ್ವಾ? ಯಾವಾಗ್ಲೂ ಡಾರ್ಕ್ ಆಗಿರುತ್ತೆ. ಹೊರ ಪ್ರಪಂಚ ಕಲರ್‌ಫುಲ್ ಆಗಿರುತ್ತದೆ. ಅಂಡರ್‌ವರ್ಲ್ಡ್ ಯಾವಾಗ್ಲೂ ಡಾರ್ಕ್. ಶ್ರಿಯಾ ಸಾಂಗ್ ಕಲರ್‌ಪುಲ್ ಆಗಿದೆ ಎಂದು ಉತ್ತರಿಸಿದ್ದಾರೆ.
ಇನ್ನು ಇತ್ತೀಚಿನ ವರ್ಷಗಳಲ್ಲಿ ಸೌತ್ ಸಿನಿಮಾಗಳು ಹೆಚ್ಚು ಸದ್ದು ಮಾಡುತ್ತಿವೆ ಎನ್ನುವ ಪ್ರಶ್ನೆಗೆ ಅಯ್ಯೋ ಬಹಳ ಹಿಂದಿನಿಂದಲೂ ನಮ್ಮವರು ಅದ್ಭುತ ಸಿನಿಮಾಗಳನ್ನು ಮಾಡುತ್ತಿದ್ದು ಹಿಟ್ ಸಿನಿಮಾಗಳನ್ನು ಮಾಡುತ್ತಿದ್ದಾರೆ. ಈಗ ನಾವು ಮಾಡ್ತಿದ್ದೀವಿ ಎಂದರೆ ತಪ್ಪಾಗುತ್ತದೆ. ಯಾವಾಗಿನಿಂದಲೂ ನಮ್ಮವರು ಪ್ಯಾನ್ ಇಂಡಿಯಾ ಸಿನಿಮಾಗಳನ್ನು ಮಾಡುತ್ತಿದ್ದಾರೆ ಎಂದು ಹೇಳಿದ್ದಾರೆ. ಮಲ್ಟಿಸ್ಟಾರರ್ ಸಿನಿಮಾಗಳ ಬಗ್ಗೆ ಮಾತನಾಡಿದ ಉಪ್ಪಿ ಇದು ಒಳ್ಳೆಯ ಬೆಳವಣಿಗೆ. ಈಗಿನ ಕಾಲದಲ್ಲಿ ಸ್ಟಾರ್ ನಟರು ಒಟ್ಟಾಗಿ ನಟಿಸೋದು ನಿಜಕ್ಕೂ ಚೆನ್ನಾಗಿದೆ ಎಂದಿದ್ದಾರೆ.
Advertisement